ನವದೆಹಲಿ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಂಡುವ ಮೂಲಕ ರಿಯೊದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಕುಸ್ತಿಪಟು ಸಾಕ್ಷಿ ಮಲಿಕ್. ಮಧ್ಯಮ ವರ್ಗ ಕುಟುಂಬದ ಈ ಹುಡುಗಿಗೆ ಅದೊಂದು ಸುಂದರ ಕನಸಿತ್ತು. ಅದು ವಿಮಾನದಲ್ಲಿ ಹಾರಾಡಬೇಕೆಂಬ ಕನಸು, ಆ ಕನಸನ್ನು ನನಸು ಮಾಡಲು ಆಯ್ಕೆ ಮಾಡಿದ್ದು ಕ್ರೀಡೆಯನ್ನು.

ಹರ್ಯಾಣದ ಈ ಹುಡುಗಿ ಕುಸ್ತಿಪಟುವಾಗಲು ನಿರ್ಧರಿಸಿದಾಗ ಆಕೆಯ ಮನಸ್ಸಲ್ಲಿ ಇದ್ದದ್ದು ಇದೊಂದೇ ಕನಸು. ಕ್ರೀಡಾಪಟುವಾದರೆ ವಿಮಾನದಲ್ಲಿ ಪ್ರಯಾಣ ಮಾಡಬಹುದು ಎಂಬುದು. ಕಠಿಣ ಪರಿಶ್ರಮದಿಂದ ಒಲಿಂಪಿಕ್ಸ್ ಅಂಗಳಕ್ಕೆ ತಲುಪಿದ ಸಾಕ್ಷಿ, ಕಂಚು ಗೆಲ್ಲುವ ಮೂಲಕ ಕುಸ್ತಿ ಪಂದ್ಯದಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಳು. ಪದಕ ಗೆದ್ದ ನಂತರ ತನ್ನ ಯಶೋಗಾಥೆಯನ್ನು ಹೇಳುವಾಗ ಸಾಕ್ಷಿ ತನ್ನ ಬಾಲ್ಯದ ಕನಸನ್ನು ಹೇಳಿದ್ದಳು. ಆಕೆಯ ಈ ಮಾತುಗಳನ್ನು ಕೇಳಿದ ಏರ್ ಇಂಡಿಯಾದ ಮುಖ್ಯಸ್ಥ ಅಶ್ವಾನಿ ಲೊಹಾನಿ ಆಕೆಗೊಂದು ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.

ಅದೇನು ಉಡುಗೊರೆ ಗೊತ್ತಾ? ಏರ್ ಇಂಡಿಯಾ ವಿಮಾನದಲ್ಲಿ ಒಂದು ವರ್ಷವಿಡೀ ಜಗತ್ತಿನ ಯಾವುದೇ ಸ್ಥಳಕ್ಕೆ ಬೇಕಾದರೂ ಪ್ರಯಾಣ ಮಾಡಲಿರುವ ಬ್ಯುಸಿನೆಸ್ ಕ್ಲಾಸ್ ಟಿಕೆಟ್! ಈ ಬಗ್ಗೆ ಪತ್ರವೊಂದನ್ನು ಬರೆದಿರುವ ಏರ್ ಇಂಡಿಯಾ ಸಂಸ್ಥೆ, ನಿಮ್ಮ ಕನಸಿನ ಬಗ್ಗೆ ಕೇಳಿದ್ದೇವೆ. ಆ ಕನಸನ್ನು ನನಸು ಮಾಡುವುದಕ್ಕಾಗಿ ನಮ್ಮ ಕಡೆಯಿಂದ ಈ ಉಡುಗೊರೆಯನ್ನು ನೀಡುತ್ತಿದ್ದೇವೆ. ಈ ಪತ್ರವನ್ನು ನೀವು ರಿಸರ್ವೇಶನ್ ಮ್ಯಾನೇಜರ್ ಗೆ ತೋರಿಸುವ ಮೂಲಕ ಟಿಕೆಟ್ ಪಡೆದುಕೊಳ್ಳಬಹುದು ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.