ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಮದ ಸಮಯದಲ್ಲಿ...

ಪಿಕ್ಚರ್‌ ಪ್ಯಾಲೆಸ್‌
Last Updated 12 ಮೇ 2015, 19:30 IST
ಅಕ್ಷರ ಗಾತ್ರ

ಅಮ್ಮನ ತೆಕ್ಕೆ ನೆಚ್ಚಿ ಆಕಾಶಕ್ಕೆ ಜಿಗಿದಾಗಲೂ ಇಷ್ಟು ಚಂದದ ಪೋಸು ಕೊಡುವ ವಿದ್ಯೆಯನ್ನು ಈ ಕಂದಮ್ಮ ಕಲಿತಿದ್ದೆಲ್ಲಿಂದ? ಅಜ್ಜಿಯ ಹೆಡ್‌ಫೋನ್‌ನಲ್ಲಿ ಮೊಮ್ಮಗಳು ಏಳು ಸಮುದ್ರದಾಚೆಯ ರಾಜಕುಮಾರಿಯ ಬೆರಗಿನ ಕಥೆ ಕೇಳುತ್ತಿರಬಹುದೇ?

ಪಾಠ– ಪರೀಕ್ಷೆಗಳ ಕೆಂಡದದಾರಿ ಹಾದ ಹುಡುಗರಿಗೀಗ ಆಟದ ಮೂಡು.. ಬಟ್ಟೆ ಮುಚ್ಚಿದ ಕಣ್ಣಿಗೆ ಸುತ್ತಲಿನ ಜಗವೆಲ್ಲ ಕಗ್ಗತ್ತಲ ಕಾಡು.. ಬಂಡೆಯನ್ನೇರಿ ತುದಿಗಾಲಲ್ಲಿ ನಿಂತ ಮಹಿಳೆಗೀಗ ಜಗವ ಮರೆಸುವ ಕುಸುಮ ತಾಧ್ಯಾತ್ಮ...  ಹೂನಗುವಿನ ಲಲನೆಯರಿಗಂತೂ ಸೆಲ್ಫೀಯದೇ ಧ್ಯಾನ..

ಬಿರುಬೇಸಿಗೆಯಲ್ಲಿ ತಂಪನೆಯ ಜಾಗವನ್ನರಸುವವರಿಗೆ ಕಬ್ಬನ್‌ ಪಾರ್ಕ್‌ ಹೇಳಿ ಮಾಡಿಸಿದ ಜಾಗ. ಬೇಸಿಗೆ ರಜೆಯೂ ಅದಕ್ಕೆ ಸಾಥ್‌ ನೀಡಿದೆ. ಒಂದು ವಾರಾಂತ್ಯದಲ್ಲಿ ಕಬ್ಬನ್‌ ಪಾರ್ಕ್‌ನಲ್ಲಿ ತೆರೆದುಕೊಂಡ ಈ ನಿರಾಳ ಚಿತ್ರಗಳನ್ನು ಸೆರೆಹಿಡಿದವರು ರಂಜು ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT