ಸೋಮವಾರ, ಮೇ 10, 2021
26 °C

ವಿರೋಧ ಪಕ್ಷದ ಸದಸ್ಯರಿಂದ ಆಯುಕ್ತರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ನಗರಸಭೆಯು ನೀರಿನ ಕರವನ್ನು ರೂ. 55ರಿಂದ 120 ರೂ.ಗಳಿಗೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಹಾಗೂ ತಕ್ಷಣವೇ ಏರಿಕೆಯಾದ ಕರವನ್ನು ಇಳಿಸಬೇಕೆಂದು ಇಲ್ಲಿನ ನಗರಸಭೆ ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದ್ದಾರೆ.ಮಂಗಳವಾರ ನಗರಸಭೆ ಆಯುಕ್ತ ಎಚ್.ಕೆ.ರುದ್ರಪ್ಪ ಅವರಿಗೆ ಮನವಿ ಸಲ್ಲಿಸಿರುವ ನಗರಸಭೆ ವಿರೋಧ ಪಕ್ಷದ ಸದಸ್ಯರು, `ನಗರದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. 10-15 ದಿನಕ್ಕೊಮ್ಮೆ ನೀರು ನೀಡಲಾಗುತ್ತದೆ. ಈಗಾಗಲೇ ಕೆಲವಡೆ ನೀರಿಗಾಗಿ ಹಾಹಾಕಾರ ಆರಂಭವಾಗಿದ್ದರೆ, ಕೆಲವು ಕಡೆಗಳಲ್ಲಿ ಕೊಳಚೆ ನೀರು ಪೂರೈಕೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ನೀರಿನ ಕರ ಏರಿಕೆ ಮಾಡಿರುವುದು ಸರಿಯಲ್ಲ~ ಎಂದು ಹೇಳಿದ್ದಾರೆ.`ನಗರಕ್ಕೆ ನೀರು ಪೂರೈಕೆಯಾಗುವ ಹೆಗ್ಗೇರಿ ಕೆರೆ ನೀರು ಕುಡಿಯಲು ಯೋಗ್ಯವಿಲ್ಲ. ಆದರೂ ಆ ನೀರನ್ನೇ ಪೂರೈಕೆ ಮಾಡಲಾಗುತ್ತದೆ. ನಗರದಲ್ಲಿನ ಬೋರವೆಲ್‌ಗಳು,  ಪೈಪ್‌ಲೈನ್ ಸಂಪೂರ್ಣ ಹಾಳಾಗಿವೆ. ಕಂಚಾರಗಟ್ಟಿ ಕರ್ಜಗಿ ಮೋಟರ್ ದುರಸ್ತಿ ಬಂದಿವೆ. ಆದರೆ, ಈವರೆಗೆ ನಗರಸಭೆ ಅಧಿಕಾರಿಗಳು ಕೆಟ್ಟು ನಿಂತ ಬೋರವೆಲ್ ಹಾಗೂ ಪೈಪಲೈನ್‌ಗಳ ದುರಸ್ತಿ ಮಾಡದೇ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ.ವ್ಯವಸ್ಥಿತವಾಗಿ ನೀರು ಸರಬರಾಜು ಆಗುವವರೆಗೆ ಹಿಂದಿನಂತೆ 55 ರೂಪಾಯಿ ನೀರಿನ ಕರವನ್ನು ಆಕರಿಸಬೇಕು. ಇಲ್ಲವಾದರೆ, ನಗರಸಭೆ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ~ ಎಂದು ನಗರಸಭೆ ವಿರೋಧ ಪಕ್ಷದ ನಾಯಕ ಬಾಬುಸಾಬ ಮೋಮಿನಗಾರ ಎಚ್ಚರಿಸಿದ್ದಾರೆ.`ನಗರವಾಸಿಗಳಿಗೆ ಉತ್ತಮ ರಸ್ತೆ, ಒಳಚರಂಡಿ ನೀಡುವುದಾಗಿ ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಗೆ ಇನ್ನೂ ಅಂತ್ಯ ಸಿಕ್ಕಿಲ್ಲ. ಆಗಾಗ್ಗೆ ಗುತ್ತಿಗೆದಾರರ ಬದಲಾವಣೆಯಿಂದ ಯೋಜನೆ ಕಾಮಗಾರಿಗಳು ಕುಂಟುತ್ತಲೇ ನಗರದ ಪ್ರಗತಿ ಶೂನ್ಯವಾಗಿದೆ~ ಎಂದು ಆರೋಪಿಸಿದರು.`ಇನ್ನೊಂದೆಡೆ ಎಂ.ಜಿ. ರಸ್ತೆಯಲ್ಲಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಆದರೆ ಈವರೆಗೂ ಅಲ್ಲಿನ ರಸ್ತೆಗಳ ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ಮೊದಲು ನಗರಸಭೆ ನೀಡಬೇಕಾದ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ತದನಂತರವಷ್ಟೆ ನೀರಿನ ಕರದ ಜೊತೆಗೆ ಉಳಿದ ಕರಗಳನ್ನು ಏಏರಿಕೆ ಮಾಡಲಿ~ ಎಂದು ಮೊಮೀನಗಾರ ಸಲಹೆ ನೀಡಿದ್ದಾರೆ.ಈ ಸಂದರ್ಭದಲ್ಲಿ ನಗರಸಭೆ ವಿರೋಧ ಪಕ್ಷದ ಸದಸ್ಯರಾದ ಗಣೇಶ ಬಿಷ್ಟಕ್ಕನವರ, ಪರಮೇಶ ಓಲಿ, ವೆಂಕಟೇಶ ಇಟಗಿ, ಪೀರಸಾಬ ಚೋಪದಾರ್ ಸೇರಿದಂತೆ ಹಲವರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.