ಚಿಕ್ಕೋಡಿ: ತಾಲ್ಲೂಕಿನ ನಾಗರ ಮುನ್ನೋಳಿ ಹೋಬಳಿ ವ್ಯಾಪ್ತಿಯ 20 ಗ್ರಾಮಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಕೆರೆಗಳಿಗೆ ಹಿರಣ್ಯಕೇಶಿ ಮತ್ತು ಕೃಷ್ಣಾ ನದಿಗಳಿಂದ ನೀರು ತುಂಬಿಸಿ ಹಳ್ಳಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆ ಗಳನ್ನು ಬಹಿಷ್ಕರಿಸುವುದಾಗಿ ಗ್ರಾಮ ಸ್ಥರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಬೆಳಿಗ್ಗೆ ಇತ್ತ ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗು ತ್ತಿದ್ದಂತೆಯೇ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ಹತ್ತಾರು ಗ್ರಾಮ ಗಳ ರೈತ ಮುಖಂಡರು ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶೀಲ್ದಾರ್ ರಾಜ ಶೇಖರ ಡಂಬಳ ಅವರಿಗೆ ಈ ಕುರಿತು ಮನವಿ ಸಲ್ಲಿಸಿದರು.

ತಾಲ್ಲೂಕಿನ ಮಾಂಗನೂರ, ಹತ್ತರ ವಾಟ, ಬಿದರಳ್ಳಿ, ತೋರಣಹಳ್ಳಿ, ಜೈನಾ ಪುರ, ವಡ್ರಾಳ, ಮಜಲಟ್ಟಿ, ಖಜಗೌಡ ನಟ್ಟಿ, ಮುಗಳಿ, ಕರೋಶಿ, ಕಮತೇನಟ್ಟಿ, ಬೆಣ್ಣಿಹಳ್ಳಿ, ಕುಂಗಟೋಳಿ, ಬಂಬಲ ವಾಡ, ಉಮರಾಣಿ, ಬೆಳಕೂಡ, ಕರ ಗಾಂವ, ಇಟ್ನಾಳ, ಡೋಣವಾಡ ಹಾಗೂ ಹುಕ್ಕೇರಿ ತಾಲ್ಲೂಕಿನ ಯಾದ ಗೂಡ ಗ್ರಾಮಗಳ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ದನಕರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಜನರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ತಾಲ್ಲೂಕಿನ ಮುಗಳಿ, ಖಜಗೌಡನಟ್ಟಿ, ಮಜಲಟ್ಟಿ, ವಡ್ರಾಳ, ಜೈನಾಪುರ, ತಿಪ್ಪರಟ್ಟಿ, ಕುಂಗಟೊಳಿ, ಬಂಬಲವಾಡ ಹಾಗೂ ಹುಕ್ಕೇರಿ ತಾಲ್ಲೂಕಿನ ಯಾದ ಗೂಡ ಕೆರೆಗಳಿಗೆ ಹಿರಣ್ಯಕೇಶಿ ಮತ್ತು ಕೃಷ್ಣಾ ನದಿಗಳಿಂದ ನೀರು ತುಂಬಿಸಸುವ ಕಾಮಗಾರಿಯನ್ನು ಇದೇ ಬೇಸಿಗೆಯಲ್ಲಿ ಪೂರ್ಣಗೊಳಿಸಬೇಕು.

ಮಳೆಗಾಲದ ನಾಲ್ಕು ತಿಂಗಳು ನದಿಗಳಿಂದ ಕೆರೆಗಳಿಗೆ ನೀರು ತುಂಬಿಸಿ ಹಳ್ಳಗಳಿಗೆ ಹರಿದು ಹೋಗುವಂತೆ ಮಾಡಬೇಕು. ಇದರಿಂದ ಅಂತರ್ಜಲಮಟ್ಟ ವೃದ್ಧಿಸಿ ಬಾವಿ, ಬೋರವೆಲ್ಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತದೆ. ಮುಂಬರುವ ಮಳೆಗಾಲ ದಲ್ಲಿ ಕೆರೆಗಳಿಗೆ ನೀರು ತುಂಬಿಸು ವಂತಾಗಬೇಕು. ಇಲ್ಲವಾದ್ದಲ್ಲಿ ತಾವು ಯಾವುದೇ ಚುನಾವಣೆಯಲ್ಲಿ ಭಾಗವಹಿ ಸುವದಿಲ್ಲ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ರೈತ ಮುಖಂಡರಾದ ಮಹೇಶ ಪಾಟೀಲ, ಶಿವಾನಂದ ಕೇಸ್ತಿ, ಆರ್. ಎಸ್. ಪಾಟೀಲ, ಎಸ್.ವೈ. ಪಾಟೀಲ, ನಾನಾಗೌಡ ಪಾಟೀಲ, ಮಹಾದೇವ ಕಮತೆ, ಅಪ್ಪಾಸಾಬ ಹುದ್ದಾರ, ಎಸ್.ಬಿ. ಬೆಣ್ಣಿಹಳ್ಳಿ, ಜಿ.ಎಂ. ಸನದಿ, ಲಗಮಣ್ಣಾ ಕುಂಬಾರ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.