ದಾವಣಗೆರೆ: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕೊರತೆ ಇರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಹಂತ ಹಂತವಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಭರವಸೆ ನೀಡಿದರು.

ಸಮೀಪದ ತೊಳಹುಣಿಸೆಯ ದಾವಣಗೆರೆ ವಿ.ವಿ. ಕ್ಯಾಂಪಸ್ನಲ್ಲಿ ಬುಧವಾರ ವಿ.ವಿ.ಯ ಹೊಸ ಕಟ್ಟಡಗಳನ್ನು ಉದ್ಘಾಟನೆ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, `ಒಂದೇ ಬಾರಿಗೆ ಸಿಬ್ಬಂದಿ ನೇಮಕ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಜತೆ ಗುರುವಾರ ಬೆಂಗಳೂರಿನಲ್ಲಿ ಬಜೆಟ್ ಪೂರ್ವ ಚರ್ಚೆ ಇದ್ದು, ನೇಮಕಾತಿ ವಿಷಯ ಪ್ರಸ್ತಾಪಿಸಿ ಅನುಮತಿ ಪಡೆಯಲು ಪ್ರಯತ್ನಿಸುತ್ತೇನೆ' ಎಂದು ಹೇಳಿದರು.

ವಿವಿಗಳಿಗೆ ಇಷ್ಟು ಕೋಟಿ, ಅಷ್ಟು ಕೋಟಿ ನೀಡಲಾಗುವುದು ಎಂದು ಭರವಸೆ ನೀಡುವುದಿಲ್ಲ. ಹಿಂದಿನ ಸರ್ಕಾರದಂತೆ ಆರ್ಥಿಕ ಶಿಸ್ತು ಮುರಿಯಲು ಮುಂದಾಗುವುದಿಲ್ಲ. ಆದರೆ, ಕ್ರಮೇಣ ಆರ್ಥಿಕ ನೆರವನ್ನು ನೀಡಲಾಗುವುದು ಎಂದು ಹೇಳಿದರು.

ಕುವೆಂಪು ವಿಶ್ವವಿದ್ಯಾಲಯ ಮತ್ತು ದಾವಣಗೆರೆ ವಿಶ್ವವಿದ್ಯಾಲಯ ನಡುವೆ ಉಳಿದುಕೊಂಡಿರುವ ಕೆಲವು ಆಡಳಿತಾತ್ಮಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಎರಡೂ ವಿ.ವಿ.ಗಳ ಕುಲಪತಿಗಳನ್ನು ಕರೆಸಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಎಂದು ದೇಶಪಾಂಡೆ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದ ಎಲ್ಲ ಕಡೆ ವಾಣಿಜ್ಯ ವಿಷಯದ ಕೋರ್ಸ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ, ದಾವಣಗೆರೆಯಲ್ಲಿ ಸರ್ಕಾರಿ ವಾಣಿಜ್ಯ ಕಾಲೇಜು ಆರಂಭಿಸುವ ಬದಲಿಗೆ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಹೆಚ್ಚುವರಿಯಾಗಿ ಪ್ರತ್ಯೇಕ ತರಗತಿ ಮಂಜೂರು ಮಾಡಲಾಗುವುದು ಎಂದು ದೇಶಪಾಂಡೆ ಭರವಸೆ ನೀಡಿದರು.ನಿವೃತ್ತ ಕುಲಪತಿಗಳು, ಶಿಕ್ಷಣ ತಜ್ಞರ ಸೇವೆಯನ್ನು ಸರ್ಕಾರ ಬಳಸಿಕೊಳ್ಳಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.