ಶನಿವಾರ, ಜೂನ್ 19, 2021
27 °C

ವಿವಿಧೆಡೆ ವೈಭವದ ಬಸವೇಶ್ವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೇಬೆನ್ನೂರು: ಸಮೀಪದ ವಡೆಯರ ಬಸವಾಪುರದ ಬಸವೇಶ್ವರ ಹಾಗೂ ಹಳ್ಳಿಹಾಳ್‌ನಲ್ಲಿ ಮುರುಡ ಬಸವೇಶ್ವರ ರಥೋತ್ಸವ ಗುರುವಾರ ವೈಭವದಿಂದ ಜರುಗಿತು.



ಗ್ರಾಮದ ರಾಜಬೀದಿಯಲ್ಲಿ ಉಚ್ಛಾಯದ ನಂತರ ರಥಾರೋಹಣ ಆಯಿತು. ಸಾಂಪ್ರದಾಯಿಕ ಬಲಿದಾನ, ರಥಪೂಜೆಯ ನಂತರ ಜನತೆ ತೆಂಗಿನಕಾಯಿ, ಫಲ, ಉತ್ತತ್ತಿ, ಮಂಡಕ್ಕಿ ಸಮರ್ಪಿಸಿದರು.



ಮಂಗಳವಾದ್ಯ, ಡೊಳ್ಳು, ತಮಟೆ, ಭಜನಾತಂಡ, ಕೀಲು ಕುದುರೆ ಕುಣಿಯುವ ತಂಡ ಭಾಗವಹಿಸಿದ್ದವು.

ದೇವಾಲಯವನ್ನು ವಿದ್ಯುತ್‌ದೀಪ ಹಾಗೂ ರಥವನ್ನು ಸುಂದರವಾಗಿ ಹೂವು, ಬಲೂನ್, ಧ್ವಜ ಪತಾಕೆಗಳಿಂದ ಅಲಂಕರಿಸಲಾಗಿತ್ತು.  ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.