ಭಾನುವಾರ, ಜನವರಿ 19, 2020
27 °C

ವಿವಿಧೆಡೆ ಸಂಭ್ರಮದ ಗಣರಾಜ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ನಗರಸಭೆ ಮೈದಾನದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು.

ಶಾಸಕ ವೈ.ಸಂಪಂಗಿ ಮಾತ ನಾಡಿದರು. ಡಿವೈಎಸ್ಪಿ ಎಂ.ವಿ.ಶೇಷನ್ ಧ್ವಜಾರೋಹಣ ಮಾಡಿದರು. ಪೊಲೀಸ್, ಗೃಹರಕ್ಷಕ ದಳ, ಎನ್‌ಸಿಸಿ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿ ಗಳು ನಡೆಸಿದ ಪಥಸಂಚಲನ  ಆಕರ್ಷಿ ಸಿತು. ನಂತರ ಸಾಂಸ್ಕೃತಿಕ ಕಾರ್ಯ ಕ್ರಮಗಳು ಕಳ್ಸೆಳೆದವು.ನಗರಸಭೆ ಅಧ್ಯಕ್ಷ ಪಿ.ದಯಾನಂದ್, ಆಯುಕ್ತ ಬಾಲಚಂದ್ರ, ಕ್ಷೇತ್ರ ಶಿಕ್ಷಣಾ ಧಿಕಾರಿ ಕೃಷ್ಣಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭೀಮನೇಡಿ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟಯ್ಯ ಹಾಜರಿದ್ದರು. ಅಶ್ವತ್ಥ ನಿರೂಪಿಸಿದರು.`ವಿಶ್ವದ ಶ್ರೇಷ್ಠ ಸಂವಿಧಾನ~

ಮುಳಬಾಗಲು:  ಪಟ್ಟಣದಲ್ಲಿ ಗುರು ವಾರ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಶಾಸಕ ಅಮರೇಶ್ ಮಾತನಾಡಿ, ದೇಶದಲ್ಲಿ ಪ್ರತಿ ಸಮುದಾಯಕ್ಕೂ ಹಲವು ಹಕ್ಕುಗಳನ್ನು ನೀಡಿದ ಶ್ರೇಷ್ಠ ಸಂವಿಧಾನ ಭಾರತದ್ದಾಗಿದೆ ಎಂದು ಹೇಳಿದರು.ತಹಶೀಲ್ದಾರ್ ಪಿ.ಜಯಮಾಧವ ಮಾತನಾಡಿ, ದೇಶ ಇಂದು ಭಯೋ ತ್ಪಾದಕರ ಸಮಸ್ಯೆ ಎದುರಿಸುತ್ತಿದೆ. ಇದರ ಹತೋಟಿಗೆ ಪ್ರತಿಯೊಬ್ಬರು ಪಣತೊಡಬೇಕು ಎಂದು ಹೇಳಿದರು.

ಡಿವೈಎಸ್‌ಪಿ ವಿ.ಗೋವಿಂದಯ್ಯ ಮಾತನಾಡಿದರು.ತಾಲ್ಲೂಕು ಪಂಚಾಯತಿ ಅಧ್ಯಕ್ಷೆ  ತ್ರಿವೇಣಮ್ಮ, ತಾಲ್ಲೂಕು ಕುರಿ ಅಭಿವದ್ಧಿ ಎನ್.ವೆಂಕಟೇಶಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ವಿಕ್ಟರ್, ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಭಟ ವೆಂಕಟಪ್ಪ, ತಾಲ್ಲೂಕು ಗಡಿನಾಡ ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ವಿ.ವಿ.ವೆಂಕಟಪ್ಪ, ಉಪ ತಹಶೀಲ್ದಾರ್ ಎಂ.ಕೆ.ರಮೇಶ್, ಶ್ರೀನಿವಾಸಶೆಟ್ಟಿ ಮತ್ತಿತರರು ಹಾಜರಿದ್ದರು.ಚಾಂದ್‌ಪಾಷ ನಿರೂಪಿಸಿದರು.

ಪ್ರಥಮ ದರ್ಜೆ ಕಾಲೇಜು: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣ ರಾಜ್ಯೋತ್ಸವ ಆಚರಿಸಲಾಯಿತು. ಪ್ರಾಂಶುಪಾಲ ಪ್ರೊ.ರಾಮಸ್ವಾಮಿ ಧ್ವಜಾರೋಹಣ ಮಾಡಿದರು. ಮೇಜರ್ ಕೆ.ವಿ.ಪುರುಷೋತ್ತಂ ಅವ ರಿಂದ ಕವಾಯತು ನಡೆಯಿತು. ಶಿಕ್ಷಕರಾದ ಎಸ್.ಆರ್.ವೆಂಕಟೇ ಶಪ್ಪಜಗನ್ನಾಥ್, ಅಲಂಗೂರು ಮಂಜು ನಾಥ್ ಮತ್ತಿತರರಿದ್ದರು.

 

`ಕರ್ತವ್ಯ ನಿರ್ವಹಿಸಿ, ಹಕ್ಕು ಅನುಭವಿಸಿ~

ಶ್ರೀನಿವಾಸಪುರ: ದೇಶದ ಪ್ರಜೆ ಹಕ್ಕು ಗಳಿಗಾಗಿ ಮಾತ್ರ ಹೋರಾಡದೆ ಕರ್ತವ್ಯ ಗಳನ್ನು ನಿರ್ವಹಿಸಬೇಕು ಎಂದು ಸಬರಮತಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಂ.ವಿ.ದಾನಪ್ರಕಾಶ್ ಹೇಳಿದರು. ತಾಲ್ಲೂಕಿನ ಸುಗಟೂರಿನ ಸಬರಮತಿ ಪ್ರೌಢ ಶಾಲೆಯ ಮೈದಾನದಲ್ಲಿ ಗುರುವಾರ ಗಣರಾಜ್ಯೋತ್ಸವದ ಪ್ರಯುಕ್ತ ಎರ್ಪಡಿಸಲಾಗಿದ್ದ ಸಾರ್ವಜನಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ಪಿ.ಬಾಲಕೃಷ್ಣಪ್ಪ ಮಾತನಾಡಿ ನಮ್ಮ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ. ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಪೂರಕವಾಗಿ ಸಂವಿಧಾನವನ್ನು ರಚಿಸಲಾಗಿದೆ.

ನಮ್ಮ ಹಿರಿಯರ ದೂರದೃಷ್ಟಿ ಸಂವಿಧಾನದಲ್ಲಿ ಬಿಂಬಿತವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಲೆಯ ವಿವಿಧ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪಾರಿತೋಷಕಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಪ್ರಭಾತ್ ಭೇರಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.  ಶಿಕ್ಷಕರಾದ ಬಿ.ವೆಂಕಟೇಶ್, ಪಿ.ಬಾಲಕೃಷ್ಣಪ್ಪ, ರೆಡ್ಡಪ್ಪ, ಎಸ್.ಆರ್.ಮೋಹನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)