ಮಂಗಳವಾರ, ಏಪ್ರಿಲ್ 13, 2021
31 °C

ವಿವಿಧ ಕಾಮಗಾರಿಗಳಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೀಣ್ಯ ದಾಸರಹಳ್ಳಿ:  ಹೆಗ್ಗನಹಳ್ಳಿ ವಾರ್ಡ್ ಸಂಖ್ಯೆ 71 ರಲ್ಲಿ ಸುಂಕದಕಟ್ಟೆಯ ಮುಖ್ಯ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ರೂ  5.15 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿಯ ಕಾಮಗಾರಿಗೆ ಶಾಸಕ ಎಸ್.ಮುನಿರಾಜು ಗುದ್ದಲಿಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು ‘ಇಲ್ಲಿನ ಎರಡು ವಾರ್ಡ್‌ಗಳಲ್ಲಿಯೂ ನೀರಿನ ಅಭಾವ ತಲೆದೋರಿದ್ದು, ನಾಗರಿಕರು ನೀರಿಗಾಗಿ ಕಷ್ಟ ಪಡುವ ಪರಿಸ್ಥಿತಿ ಉಂಟಾಗಿದೆ. ಸಮಸ್ಯೆಯನ್ನು ನೀಗಿಸಲು ಇನ್ನು ಒಂದು ವರ್ಷ ಬೇಕಾಗಿದೆ. ಜನರು ಸಹಕರಿಸಬೇಕು’ ಎಂದರು.‘2012ರ ಮಾರ್ಚ್ ವೇಳೆಗೆ ಕಾವೇರಿ ನೀರನ್ನು ಪೂರೈಸಲಾಗುವುದು. ಅಲ್ಲಿಯವರೆಗೆ ಕೊಳವೆ ಬಾವಿ, ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಿ ನೀರಿನ ಬವಣೆ ನೀಗಿಸಲು ಪ್ರಯತ್ನಿಸುತ್ತಾರೆ’ ಎಂದು ಅವರು ತಿಳಿಸಿದರು.‘ರಾಜಗೋಪಾಲನಗರದಲ್ಲಿ ರೂ 150 ಕೋಟಿ ವೆಚ್ಚದಲ್ಲಿ ಒಳ ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ಅದೇ ಮಾದರಿಯಲ್ಲಿಯೇ ಹೆಗ್ಗನಹಳ್ಳಿ ವಾರ್ಡ್‌ಲ್ಲಿಯೂ ಸದ್ಯದಲ್ಲಿ ಚಾಲನೆ ನೀಡಲಾಗುವುದು’ ಎಂದರು.ಪಾಲಿಕೆ ಸದಸ್ಯರಾದ ಎಚ್.ಎನ್.ಗಂಗಾಧರ್, ಎ.ಬಿ.ಗೋವಿಂದೇಗೌಡ, ಜಂಟಿ ಆಯುಕ್ತ ರಾಧಾಕೃಷ್ಣ, ಅಧಿಕಾರಿಗಳಾದ ಕೃಷ್ಣಸ್ವಾಮಿ, ಕುಬೇರಪ್ಪ, ರುಕ್ಕಣ್ಣ, ಮುಖಂಡರಾದ ವಿ.ಲೋಕೇಶ್, ಬಿ.ಲೋಕೇಶ್, ಮಂಜಣ್ಣ, ಮೂರ್ತಿ, ಪುಟ್ಟಮಣಿ, ಸೌಭಾಗ್ಯಮ್ಮ, ಜಯಮ್ಮ, ಉಷಾರಾಜ್, ಬಸವರಾಜ್, ಜಯರಾಮು, ಎಚ್.ಬಿ.ರಾಜು, ಕೆಂಪಣ್ಣ, ಶಿವಣ್ಣ, ನಾರಾಯಣ್, ಕೃಷ್ಣಪ್ಪ, ತಿಮ್ಮರಾಜು ಇತರರು ಹಾಜರಿದ್ದರು.        

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.