ಚನ್ನರಾಯಪಟ್ಟಣ: ತಾಲ್ಲೂಕಿನ ಮುದಿ ಬೆಟ್ಟಕಾವಲು ಸೇರಿದಂತೆ ವಿವಿಧೆಡೆ ದಲಿತರಿಗೆ ಮಂಜೂರಾದ ಭೂಮಿಯ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಪರರ ಸಂಘಟನೆಗಳ ಪದಾಧಿ ಕಾರಿಗಳು, ನೊಂದ ದಲಿತರು ಸೋಮ ವಾರ ಮಿನಿ ವಿಧಾನ ಸೌಧದ ಮುಂದೆ ಸೋಮವಾರ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದರು.

ದಲಿತರಿಗೆ ಭೂಮಿ ನೀಡುವಂತೆ ಆಗ್ರಹಿಸಿ ಕಳೆದ ಫೆಬ್ರುವರಿ ತಿಂಗಳಲ್ಲಿ ಮಿನಿ ವಿಧಾನಸೌಧ ಮುಂದೆ ಧರಣಿ ನಡೆಸಲಾಗಿತ್ತು. ಸ್ಥಳಕ್ಕೆ ಆಗಮಿಸಿದ್ದ ಉಪವಿಭಾಗಾಧಿಕಾರಿಗಳು,15ದಿನದೊಳಗೆ ಸಮಸ್ಯೆ ಬಗೆ ಹರಿಸುವಂತೆ ತಹಶೀಲ್ದಾರ್ ಗಮನಕ್ಕೆ ತಂದಿದ್ದರು. ಆದರೆ ಈವರೆಗೆ ಸಮಸ್ಯೆ ಈಡೇರಿಲ್ಲ. ಆದ್ದರಿಂದ ಮತ್ತೆ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದರು.

ಮುದಿಬೆಟ್ಟ ಕಾವಲು ಗ್ರಾಮದಲ್ಲಿ ಭೂಮಿ ವಿಚಾರವಾಗಿ ಸಮೀಪ್ಷೆ ಪೂರ್ಣಗೊಳಿಸಲಾಗಿದೆ. ಫಲವತ್ತಾದ ಭೂಮಿಯನ್ನು ಭೂಮಾಲೀಕರಿಗೆ ಮಂಜೂರು ಮಾಡಲಾಗಿದ್ದು, ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಮಾತ್ರ ದಲಿತರಿಗೆ ಹಂಚಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ದೂರಿದ ಪ್ರತಿಭಟನಾಕಾರರು, ಮೂಲ ನಕಾಶೆಯಂತೆ ಅಳತೆ ಮಾಡಿಸಿ ದುರಸ್ತಿ ಮಾಡಿ ಭೂಸ್ವಾಧೀನಕ್ಕೆ ನೀಡಬೇಕು ಎಂದು ಆಗ್ರಹಿಸಿದರು.

ಎಂ. ಹೊನ್ನೇನಹಳ್ಳಿ, ಕಟ್ಟಿಗೆಹಳ್ಳಿ, ಮಾದಿಹಳ್ಳಿ, ಶೆಟ್ಟಿಗೌಡನ ಹಳ್ಳಿ ಕಾಮನಾಯಕನ ಹಳ್ಳಿ ಮತ್ತಿತರ ಕಡೆ ಇದೇ ರೀತಿ ಅನ್ಯಾಯವಾಗಿದೆ. ಕೂಡಲೇ ನ್ಯಾಯ ದೊರಕಿಸಿಬೇಕು ಎಂದರು.

ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿ ಕಾರಿ ಸಮಸ್ಯೆ ಈಡೇರಿ ಸುವ ಭರವಸೆ ನೀಡಿದರಾದರೂ, ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸುವ ವರೆಗೆ ಇಲ್ಲಿಂದ ಕದಲು ವುದಿಲ್ಲ ಎಂದು ಪಟ್ಟು ಹಿಡಿದರು.

ದಲಿತ ಸೇನಾ ಪಡೆ, ಕರ್ನಾಟಕ ಛಲವಾದಿ, ಮಾದಿಗ ದಂಡೋರ ಸಮಿತಿ, ಶಿವಶರಣ ಮಾದಾರ ಚನ್ನಯ್ಯ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪ್ರತಿಭಟನೆಯಲ್ಲಿದ್ದರು.

ಸ್ಪಷ್ಟನೆ: `ಮುದಿಬೆಟ್ಟಕಾವಲು ಗ್ರಾಮದ ಜಮೀನನ್ನು 25 ದಿನಗಳಿಂದ ಸರ್ವೇ ಮಾಡಿಸಿ ಉಪವಿಭಾಗಾಧಿ ಕಾರಿಗೆ ವರದಿ ಸಲ್ಲಿಸಲಾಗಿದೆ. ಎಂ. ಹೊನ್ನೇನಹಳ್ಳಿ ಗ್ರಾಮದಲ್ಲಿ ಸೋಮವಾರ ಸರ್ವೇ ಶುರುಮಾಡ ಲಾಗಿದೆ. ಬಂಡಿಹಳ್ಳಿ ಗ್ರಾಮದಲ್ಲಿ ಮಂಗ ಳವಾರದಿಂದ ಸರ್ವೇ ನಡೆಯಲಿದೆ. ಕಟ್ಟಿಗೆಹಳ್ಳಿ, ಮಜ್ಜನಹಳ್ಳಿ ಗ್ರಾಮದಲ್ಲಿ ಸಮಸ್ಯೆ ಬಗೆಹರಿಸಲಾಗಿದೆ~ ಎಂದು ತಹಶೀಲ್ದಾರ್ ಬಿ.ಎನ್. ವರಪ್ರಸಾದ ರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.