ಶನಿವಾರ, ಜನವರಿ 25, 2020
28 °C

ವಿಶ್ವನಾಥ್‌ ದಾಖಲೆ ಮುರಿದ ಗೌತಮ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹ್ಲಿ, ರೋಹ್ಟಕ್‌: ಕರ್ನಾಟಕ ತಂಡದ ನಾಯಕ ಮತ್ತು ವಿಕೆಟ್‌ ಕೀಪರ್‌ ಕೂಡಾ ಆಗಿರುವ ಸಿ.ಎಂ. ಗೌತಮ್‌ ಇಲ್ಲಿ ಹರಿಯಾಣ ಎದುರಿನ ಪಂದ್ಯಕ್ಕೆ ತಂಡವನ್ನು ಮುನ್ನಡೆಸುವ ಮೂಲಕ ಮಾಜಿ ಆಟಗಾರ ಸದಾನಂದ ವಿಶ್ವನಾಥ್‌ ಅವರ ದಾಖಲೆಯನ್ನು ಅಳಿಸಿ ಹಾಕಿದರು.ಹೋದ ರಣಜಿ ಋತುವಿನಲ್ಲಿ ಅತ್ಯಧಿಕ ರನ್‌ ಗಳಿಸಿದ ಸಾಧನೆ ಮಾಡಿರುವ ಗೌತಮ್‌ ಇದೇ ಮೊದಲ ವರ್ಷ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷ ಈ ಆಟಗಾರ 117.78ರ ಸರಾಸರಿಯಲ್ಲಿ ಒಟ್ಟು 943 ರನ್‌ ಕಲೆ ಹಾಕಿದ್ದರು. ವಿಶ್ವನಾಥ್‌ ಅವರು 74 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.ಹೋದ ತಿಂಗಳು ನಾಗಪುರದಲ್ಲಿ ನಡೆದ ವಿದರ್ಭ ಎದುರಿನ ಪಂದ್ಯಕ್ಕೆ ಮೊದಲ ಸಲ ನಾಯಕರಾಗಿ ಆಯ್ಕೆಯಾದರು. ಜೊತೆಗೆ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ನಾಲ್ಕನೇ ವಿಕೆಟ್‌ ಕೀಪರ್‌ ಎನಿಸಿಕೊಂಡಿದ್ದಾರೆ. ಈ ಕುರಿತು ಬನ್ಸಿ ಲಾಲ್‌ ಕ್ರೀಡಾಂಗಣದಲ್ಲಿ ಶನಿವಾರ ‘ಪ್ರಜಾವಾಣಿ’ ಜೊತೆ ಅವರು ಮಾತನಾಡಿ, ‘ಅಂಕಿಅಂಶಗಳ ಬಗ್ಗೆ ಯೋಚಿಸುವುದಿಲ್ಲ. ತಂಡವನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತೇನೆ’ ಎಂದಷ್ಟೇ ಹೇಳಿದರು.ಸೈನಿ ದಾಖಲೆ: ಕರ್ನಾಟಕ ಎದುರಿನ ರಣಜಿ ಪಂದ್ಯದಲ್ಲಿ ಶುಕ್ರವಾರ ಶತಕ ಗಳಿಸಿದ ನಿತಿನ್‌ ಸೈನಿ ವಿಶಿಷ್ಟ ದಾಖಲೆ ಮಾಡಿದ ಸಾಧನೆಯೊಂದಕ್ಕೆ ಪಾತ್ರರಾದರು. ರಣಜಿ ಕ್ರಿಕೆಟ್‌ ಇತಿಹಾಸದಲ್ಲಿ ಹರಿ ಯಾಣದ ಪರ ವಿಕೆಟ್‌ ಕೀಪರ್ ಒಬ್ಬರು ಶತಕ ಗಳಿಸಿದ್ದು ಇದೇ ಮೊದಲು. ನಿತಿನ್‌ 109 ರನ್‌ ಗಳಿಸಿದ್ದರು.

ಪ್ರತಿಕ್ರಿಯಿಸಿ (+)