1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಹಿನ್ನೆಲೆಯಲ್ಲಿ ಒಂದು ಭಾಷೆ ಮಾತನಾಡುವ ಬಹುತೇಕರನ್ನು ಒಂದೇ ಪ್ರಾಂತ್ಯದಲ್ಲಿ ಒಗ್ಗೂಡಿಸುವ ಪ್ರಯತ್ನ ನಡೆಯಿತು. ಐದು ವಿವಿಧ ರಾಜ್ಯಗಳಲ್ಲಿ ಹರಡಿ ಹೋಗಿದ್ದ ಕನ್ನಡ ಮಾತನಾಡುವವರನ್ನು ಒಂದೆಡೆ ತರಲಾಯಿತು.

ವಿಶಾಲ ಕರ್ನಾಟಕ ಉದಯವಾಯಿತು. ಹಾಗೆಯೇ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ತೆಲುಗು ಮಾತನಾಡುವ ರಾಯಲಸೀಮೆ, ಕರಾವಳಿ ಜಿಲ್ಲೆಗಳನ್ನು ಮದ್ರಾಸ್ ಪ್ರಾಂತ್ಯದಿಂದ ಬೇರ್ಪಡಿಸಿ ಹೈದರಾಬಾದ್ ನಿಜಾಮ್ ಸಂಸ್ಥಾನದಲ್ಲಿ ತೆಲುಗು ಜಿಲ್ಲೆಗಳೊಂದಿಗೆ ಜೋಡಿಸಿ ಆಂಧ್ರಪ್ರದೇಶ ರಚನೆಯಾಯಿತು. ಹಾಗೆಯೇ ತಡವಾಗಿ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ಅಸ್ತಿತ್ವಕ್ಕೆ ಬಂದವು.

1960 ಹಾಗೂ 1970 ದಶಕಗಳ ಹೊತ್ತಿಗೆ ಪ್ರಮುಖವಾಗಿ ಆಂಧ್ರಪ್ರದೇಶದಿಂದ ವಿದೇಶಗಳಲ್ಲಿ ನೆಲೆಸಿಹೋಗುವ ಪ್ರವೃತ್ತಿ ಹೆಚ್ಚಾಗುತ್ತಾ ಬಂತು. ಅಲ್ಲಿ ಹೋದರೂ, ಆಂಧ್ರರು ತಮ್ಮ ಮಾತೃಭೂಮಿ ರಾಜ್ಯದತ್ತ ಭಾವನಾತ್ಮಕ ಸಂಬಂಧಗಳನ್ನು ಮರೆಯದೆ ಮಾರಿಷಸ್ ಹಾಗೂ ಮಲೇಷಿಯಾದಲ್ಲಿ ನೆಲೆಸಿದ್ದ ತೆಲುಗು ಮಾತನಾಡುವ ಪ್ರಜೆಗಳು ಒಂದು ನಿಯೋಗದಲ್ಲಿ ಹೈದರಾಬಾದ್ಗೆ ಬಂದು ವಿಶ್ವದಲ್ಲಿನ ತೆಲುಗರನ್ನು ಒಂದೇ ವೇದಿಕೆ, ಒಂದೇ ಸಮ್ಮೇಳನದಲ್ಲಿ ತರುವುದಕ್ಕೆ ವಿಶ್ವ ತೆಲುಗು ಸಮ್ಮೇಳನವನ್ನು ನಡೆಸಿ ಎಂದು ಆಂಧ್ರಪ್ರದೇಶ ಸರ್ಕಾರವನ್ನು ಕೋರಿದರು.

ಹೀಗಾಗಿ 1975ರಲ್ಲಿ ಆಗಸ್ಟ್ 12 ಯುಗಾದಿ ಹಬ್ಬದ ದಿನ ಅಂದಿನ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಅವರು ಹೈದರಾಬಾದಿನಲ್ಲಿ ವಿಶ್ವ ತೆಲುಗು ಸಮ್ಮೇಳನವನ್ನು ಉದ್ಘಾಟಿಸಿದರು. ಪತ್ರಕರ್ತನಾಗಿ ನಾನು ಆ ಸಮ್ಮೇಳನಕ್ಕೆ ಹೋಗಿದ್ದೆ. ಅದೇ ಸಮಯದಲ್ಲಿ ‘ಮಲ್ಲೇಶ್ವರಿ’ಯಂಥ ಅತ್ಯುತ್ತಮ ಚಲನಚಿತ್ರವನ್ನು ನಿರ್ದೇಶಿಸಿದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಬಿ.ಎನ್.ರೆಡ್ಡಿ ಅವರನ್ನು ಭೇಟಿಯಾಗುವ ಸೌಭಾಗ್ಯ ನನ್ನದಾಯಿತು. ವಿಶೇಷವೆಂದರೆ ಅಂದೂ ಪ್ರತ್ಯೇಕ ತೆಲಂಗಾಣ ರಾಜ್ಯ ಬೇಕೆಂದು ಹೋರಾಡುತ್ತಿದ್ದ ಜನರೂ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ವಿದೇಶಿಯರು ತಮ್ಮ ರಾಷ್ಟ್ರದಲ್ಲಿನ ತೆಲುಗು ಭಾಷೆ, ಸಂಸ್ಕೃತಿ ಸ್ಥಿತಿಗಳ ಬಗ್ಗೆ ತಿಳಿವಳಿಕೆ, ಮಾಹಿತಿಯನ್ನು ಪಡೆದರು. ‘ಮತ್ತೆ ಮತ್ತೆ ನಾವು ಹೀಗೆ ಸೇರೋಣ’ ಎಂಬ ತೃಪ್ತಿಯ ಮನೋಭಾವದಿಂದ ತೆರಳಿದರು.

ಈ ಬೆಳವಣಿಗೆಯನ್ನು ವೀಕ್ಷಿಸುತ್ತಾ ಬಂದ ನಮ್ಮ ಕನ್ನಡಿಗರು ‘ನಾವೇಕೆ ವಿಶ್ವ ಕನ್ನಡ ಸಮ್ಮೇಳನವನ್ನು ಏರ್ಪಡಿಸಬಾರದು’ ಎಂದು ಆಲೋಚಿಸಿ 1985ರಲ್ಲಿ, ಅಂದರೆ ವಿಶ್ವ ತೆಲುಗು ಸಮ್ಮೇಳನ ನಡೆದ 10 ವರ್ಷದ ನಂತರ ಸಮ್ಮೇಳನ ನಡೆಸಿದರು. ಕಳೆದ ಕಾಲು ಶತಮಾನದಲ್ಲಿ ಕೃಷ್ಣಾ ಹಾಗೂ ಕಾವೇರಿ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಊಹಿಸಲಾಗದಷ್ಟು ಬದಲಾವಣೆಗಳನ್ನು ರಾಷ್ಟ್ರದಾದ್ಯಂತ ಎಲ್ಲ ಕ್ಷೇತ್ರಗಳಲ್ಲಿ ಇಂದು ನಾವು ಕಾಣುತ್ತೇವೆ.

ತಂತ್ರಜ್ಞಾನ ಬಹುಮುಖವಾಗಿ ಬೆಳೆದಿದೆ. ಅದರ ಬಾಹುಗಳು ಭೂಮಿ ಆಕಾಶವನ್ನೊಳಗೊಂಡಂತೆ ಚಾಚಿಕೊಂಡಿವೆ. ವಿವಿಧ ತಂತ್ರಜ್ಞಾನ ಒಗ್ಗೂಡುವಿಕೆಯಿಂದ ಜನರ ಜೀವನ ಶೈಲಿ ಸಂಪೂರ್ಣವಾಗಿ ಬದಲಾಗಿವೆ. ಅದು ಒದಗಿಸಿಕೊಟ್ಟ ಉಪಕರಣಗಳನ್ನು ಸ್ಪರ್ಶಿಸದೇ ಹೋದ ಜನರೆ ಇಲ್ಲ.

ಸರ್ವವ್ಯಾಪಿಯಾಗಿ ವಿಶ್ವವೇ ಒಂದು ಹಳ್ಳಿ ಎಂಬ ಪರಿಕಲ್ಪನೆ ಜನರಲ್ಲಿ ಮೂಡಿ ಬಂದಿದೆ. ವಿಶ್ವ ಕನ್ನಡ ಸಮ್ಮೇಳನ 2011ರ ಧೋರಣೆ, ಚಿಂತನೆ, ಚರ್ಚೆಗಳು ಈ ಹಿನ್ನೆಲೆಯನ್ನೇ ಹೊಂದಿರಬೇಕಾಗುತ್ತದೆ.

ಸಾಹಿತ್ಯ ಸಮ್ಮೇಳನದಂತೆ ಕನ್ನಡ ಸಮ್ಮೇಳನ ಒಂದು ಕ್ಷೇತ್ರಕ್ಕೆ ಸಂಬಂಧಪಟ್ಟಿದ್ದಲ್ಲ. ಕನ್ನಡ, ಕರ್ನಾಟಕ, ಸರ್ವಾಂಗೀಣ ಬೆಳವಣಿಗೆ ಮತ್ತು ಅದರ ಅಭ್ಯುದಯವೇ ಸಮ್ಮೇಳನದ ಕಾರ್ಯಸೂಚಿ ಆಗಿರಬೇಕು. ಪ್ರಸ್ತುತ ಕನ್ನಡ ನೆಲಗಟ್ಟಿನ ಮೇಲೆ ನಿಂತು ಕನ್ನಡತನವನ್ನು ರಕ್ಷಿಸಿ, ಬೆಳೆಸಿಕೊಂಡು ಹೊಸ ಸವಾಲುಗಳನ್ನು ಎದುರಿಸುವುದಕ್ಕೆ ಬೆಳಗಾವಿ ಸಮ್ಮೇಳನ ದಾರಿದೀಪವಾಗಬೇಕು, ಬೆಳಕನ್ನು ಚೆಲ್ಲಬೇಕು.

ಇನ್ನು ಕನ್ನಡ ಭಾಷೆ ಬಗ್ಗೆ ಯಾವ ರೀತಿಯ ಭಯ, ಭೀತಿ ಬೇಡ. ನಾವು ಬ್ಲಾಗ್ ಹಾಗೂ ಟ್ವಿಟರ್ ಯುಗದಲ್ಲಿದ್ದೇವೆ. ಈ ಮಾಧ್ಯಮದಿಂದ ಗ್ರಾಮಪ್ರದೇಶದಲ್ಲಿನ ಅನೇಕ ಯುವಕರು ದೂರ ಇದ್ದಾರೆ. ಕೆಲವು ತಿಂಗಳ ಹಿಂದೆ ಶಾಲಾ ಕಾಲೇಜು ಮಕ್ಕಳಿಗೆ 1500 ರೂಪಾಯಿ ವೆಚ್ಚದಲ್ಲಿ ಒಂದು ಲ್ಯಾಪ್ಟಾಪ್ ಅನ್ನು ಅವರಿಗೆ ಒದಗಿಸಲಾಗುವುದೆಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಕರ್ನಾಟಕ ಸರ್ಕಾರವಾದರೂ ತಕ್ಷಣವೇ ಈ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳನ್ನು ಒದಗಿಸಲಿ. ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸಿಕೊಡಲಿ.

ಬ್ಲಾಗ್ ಮಾಧ್ಯಮ ಬಳಕೆಯ ಬಗ್ಗೆ ತಿಳಿವಳಿಕೆ ನೀಡಲಿ. ತಮ್ಮ ಸುತ್ತಲ ಪರಿಸರ ಆಗುಹೋಗುಗಳನ್ನು ಅಜ್ಜಿ ಅಜ್ಜರಿಂದ ಅವರ ಹಿಂದಿನ ಜೀವನ ಇಂಥ ಅನೇಕ ವಿಷಯಗಳ ಬಗ್ಗೆ ಈ ವಿದ್ಯಾರ್ಥಿಗಳನ್ನು ಮುಕ್ತವಾಗಿ ಬ್ಲಾಗ್ಗಳಲ್ಲಿ ಬರೆಯಲಿ ಎಂದು ಪ್ರೋತ್ಸಾಹಿಸೋಣ. ಇದರ ಮೂಲಕ ಹಳ್ಳಿಯ ಸೊಗಡನ್ನು ಎಲ್ಲರೂ ಅನುಭವಿಸುವಂತೆ ಮಾಡಲಿ. ಬೀದರ್ ಜಿಲ್ಲೆಯ ಒಂದು ಕುಗ್ರಾಮದಲ್ಲಿ ವಾಸಿಸುತ್ತಿರುವವರನ್ನು ಕ್ಯಾಲಿಫೋರ್ನಿಯಾದಲ್ಲಿ ಮತ್ತೊಬ್ಬ ಕನ್ನಡಿಗನೊಂದಿಗೆ ಬ್ಲಾಗ್ ಮೂಲಕ ಸಂಪರ್ಕಿಸಲು ಸಾಧ್ಯವಾಗಲಿ. ಆಗ ನೋಡಿ, ಅದರ ಪರಿಣಾಮ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.