ವಿಶ್ವ ಕೂಟ: ಪದಕದ ಮೇಲೆ ಪಂಕಜ್ ಕಣ್ಣು
ನವದೆಹಲಿ (ಪಿಟಿಐ): ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಸ್ಪರ್ಧಿಗಳಾದ ಪಂಕಜ್ ಅಡ್ವಾಣಿ ಹಾಗೂ ಆದಿತ್ಯ ಮೆಹ್ತಾ ಗುರುವಾರ ಕೊಲಂಬಿಯಾದಲ್ಲಿ ಆರಂಭವಾಗಲಿರುವ ವಿಶ್ವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದು, ಪದಕದ ಮೇಲೆ ಕಣ್ಣಿಟ್ಟಿದ್ದಾರೆ.
`ವಿಶ್ವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗುತ್ತಿದೆ. ಈ ಕೂಟದಲ್ಲಿ ಸ್ಪರ್ಧಿಸಲು ಕಾತರನಾಗಿದ್ದೇನೆ. ಇದರಲ್ಲಿ ಉತ್ತಮ ಪ್ರದರ್ಶನ ನೀಡಿ ಪದಕ ಗೆಲ್ಲುವ ಭರವಸೆ ಇದೆ' ಎಂದು ಬೆಂಗಳೂರು ಮೂಲದ ಅಡ್ವಾಣಿ ತಿಳಿಸಿದ್ದಾರೆ.
`ಪದಕ ಗೆಲ್ಲುವುದು ನನ್ನ ಗುರಿ. ಆದರೆ ಈ ಕ್ರೀಡಾಕೂಟ ಸವಾಲಿನಿಂದ ಕೂಡಿರಲಿದೆ. ಅವತ್ತಿನ ಸ್ಪರ್ಧೆಯಲ್ಲಿ ತೋರುವ ಪ್ರದರ್ಶನದ ಮೇಲೆ ಫಲಿತಾಂಶ ಅವಲಂಬಿಸಿದೆ' ಎಂದು ಮೆಹ್ತಾ ನುಡಿದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.