ಉಡುಪಿ: `ಮಹಿಳಾ ಉದ್ಯಮಿಗಳ ಸಂಘ `ಪವರ್~ನ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಂಘದ ವಾರ್ಷಿಕೋತ್ಸವವನ್ನು ಇದೇ 8ರಂದು ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಜಿಲ್ಲಾ ಸಣ್ಣ ಉದ್ದಿಮೆದಾರರ ಸಂಘದ ಸಭಾಭವನದಲ್ಲಿ ನಡೆಸಲಾಗುವುದು~ ಎಂದು ಸಂಸ್ಥೆಯ ಅಧ್ಯಕ್ಷೆ ಸಾಧನಾ ಕಿಣಿ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಂಜೆ 3 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯ ಅಧ್ಯಕ್ಷ ಪ್ರಸಾದ್ರಾಜ್ ಕಾಂಚನ್ ವಹಿಸುವರು.

ಜಿಲ್ಲಾ ಸಣ್ಣ ಉದ್ದಿಮೆದಾರರ ಸಂಘದ ಅಧ್ಯಕ್ಷ ಜಾನ್ ಆರ್. ಡಿಸಿಲ್ವ, ಮಣಿಪಾಲ ಸೋನಿಯಾ ಕ್ಲಿನಿಕ್ನ ಡಾ.ಎ.ಗಿರಿಜಾ ಭಾಗವಹಿಸುವರು. ಡಾ. ನೀತಾ ಇನಾಮ್ದಾರ್ ಶಿಖರೋಪಾನ್ಯಾಸ ಮಾಡುವರು~ ಎಂದರು.

ಉದ್ದಿಮೆಯಲ್ಲಿ ವಿಶೇಷ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಗುವುದು. ಉಡುಪಿ ತಾಲ್ಲೂಕು ಹಸಿ ಮೀನು ಮಾರಾಟಗಾರರ ಸಂಘದ ಬೇಬಿ ಸಾಲ್ಯಾನ್, ಗೋಡಂಬಿ ಉದ್ಯಮಿ ಅನಿತಾ ಡಿಸಿಲ್ವಾ, ಬ್ಯೂಟಿಷನ್ ಸಂಘಟನೆಯ ಮರಿಯ ಮೋಲಿ ಫರ್ನಾಂಡಿಸ್, ಉಡುಪಿ ಜಿಲ್ಲಾ ಮಹಿಳಾ ಉದ್ದಿಮೆದಾರರ ಅಭಿವೃದ್ಧಿ ಸಂಘಟನೆಯ ಸರೋಜ ವಿಷ್ಣುಮೂರ್ತಿ, ಕುಂದಾಪುರ ಹಾಗೂ ಪುತ್ತೂರಿನ ಕೀರ್ತಿ ಪ್ರಭು ಅವರನ್ನು ಸನ್ಮಾನಿಸಲಾಗುವುದು. ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಗುವುದು~ ಎಂದರು.

ಸುದ್ದಿಗೋಷ್ಠಿಯಲ್ಲಿ ಪವರ್ನ ವೀಣಾ ಕುಡ್ವ, ರೇನು ಜಯರಾಂ ಮತ್ತು ಶ್ಯಾಮಲಾ ನಾಯಕ್ ಉಪಸ್ಥಿತರಿದ್ದರು.

ಕಿಣಿ, ಗೌರಿಗೆ ಸನ್ಮಾನ: ಫೆಡರೇಶನ್ ಆಫ್ ಕರ್ನಾಟಕ ವಾಣಿಜ್ಯ ಮತ್ತು ಕೈಗಹಾರಿಕಾ ಸಂಸ್ಥೆಯ ಮಹಿಳಾ ಉದ್ದಿಮೆದಾರರ ಸಮಿತಿಯು ಬೆಂಗಳೂರಿ ನಲ್ಲಿ ಆಯೋಜಿಸಿರುವ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡ ಮಣಿಪಾಲದ ಪವರ್ ಸಂಸ್ಥೆಯ ಅಧ್ಯಕ್ಷೆ ಸಾಧನಾ ಕಿಣಿ ಹಾಗೂ ಡಾ. ಗೌರಿ ಅವರನ್ನು ಸನ್ಮಾನಿಸಲಿದೆ

. ಬೆಂಗಳೂರಿನ ಹೈಗ್ರೌಂಡ್ಸ್ನ ಹೊಟೇಲ್ ಲಲಿತ್ ಅಶೋಕ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾಟಿ ಸದಾನಂದ ಗೌಡ ಹಾಗೂ ಸರೋಜಿನ ಭಾರಧ್ವಾಜ್ ಅವರು ಸಾಧಕಿಯರನ್ನು ಸನ್ಮಾನಿಸುವರು ಎಂದು ಪ್ರಕಟಣೆ ತಿಳಿಸಿದೆ.

ಹೆಬ್ರಿ: ಪರಮ ಹಂಸರ ಜನ್ಮ ದಿನ
ಹೆಬ್ರಿ: ರಾಮಕೃಷ್ಣ ಪರಮಹಂಸರ 178ನೇ ಜನ್ಮ ದಿನೋತ್ಸವ ಹೆಬ್ರಿಯ ಪರಿಸರದಲ್ಲಿ ಉದ್ಯಮಿ ರಮೇಶ ಯಾನೆ ರಾಮಚಂದ್ರ ಭಟ್ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು. ಉಡುಪಿಯ ವಿದ್ವಾನ್ ಗೋಪಾಲ ಆಚಾರ್ಯ ಉಪನ್ಯಾಸ ನೀಡಿದರು. ಶಿರ್ವ ಮಹಾಲಸಾ ನಾರಾಯಣಿ ದೇವಸ್ಥಾನದ ಶ್ರಿನಿವಾಸ ಶೆಣೈ ಬಳಗದವರಿಂದ ಭಜನೆ ನಡೆಯಿತು.

ಹೆಬ್ರಿ ಯೋಗೀಶ್ ಭಟ್ ಅವರು ಶ್ರಿನಿವಾಸ ಶೆಣೈ, ಗೋಪಾಲ ಆಚಾರ್ಯ ಅವರನ್ನು ಸನ್ಮಾನಿಸಿದರು. ಸಾಹಿತಿ ಅಂಬಾತನಯ ಮುದ್ರಾಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.