ಶುಕ್ರವಾರ, ಜೂನ್ 18, 2021
24 °C

ವಿಶ್ವ ಹಾಕಿ ಸರಣಿ: ಪುಣೆ ತಂಡಕ್ಕೆ ರೋಚಕ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ: ಕರ್ನಾಟಕ ಲಯನ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ವಿಶ್ವ ಹಾಕಿ ಸರಣಿಯ ಪಂದ್ಯದಲ್ಲಿ ಮತ್ತೊಂದು ಸೋಲು ಕಂಡಿದ್ದಾರೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಪುಣೆ ಸ್ಟ್ರೈಕರ್ಸ್ 3-2 ಗೋಲುಗಳಿಂದ ಲಯನ್ಸ್ ತಂಡವನ್ನು ಸೋಲಿಸಿತು.  ವಿರಾಮದ ವೇಳೆಗೆ ಉಭಯ ತಂಡಗಳು ತಲಾ 1-1 ಗೋಲು ಗಳಿಸಿದ್ದವು. ಆದರೆ ದ್ವಿತೀಯಾರ್ಧದಲ್ಲಿ ಆತಿಥೇಯ ತಂಡ ಪಾರಮ್ಯ ಮೆರೆಯಿತು. ಈ ತಂಡದ ರೋಷನ್ ಮಿನ್ಜ್ (8ನೇ ನಿಮಿಷ), ಲುಂಗಿಲೆ ಸೊಲೆಕಿಲೆ (47ನೇ ನಿ.) ಹಾಗೂ ದಮನ್‌ದೀಪ್ ಸಿಂಗ್ (56ನೇ ನಿ.) ಗೋಲು ಗಳಿಸಿದರು. ಕರ್ನಾಟಕ ತಂಡದ ಲೆನ್ ಅಯ್ಯಪ್ಪ (24ನೇ ನಿ; ಪೆನಾಲ್ಟಿ ಕಾರ್ನರ್) ಹಾಗೂ ಇನೊಸೆಂಟ್ ಕುಲ್ಲು (48ನೇ ನಿ.) ಚೆಂಡನ್ನು ಗುರಿ ಸೇರಿಸಿದರು.ಕರ್ನಾಟಕ ಆಡಿದ ಏಳು ಪಂದ್ಯಗಳಲ್ಲಿ ಎರಡಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹಾಗಾಗಿ ಈ ತಂಡ ಆರು ಪಾಯಿಂಟ್‌ಗಳೊಂದಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ ಪುಣೆ ತಂಡ         12 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ.ಈ ತಂಡ ಆಡಿದ ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಹಾಗೂ ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಒಂದು ಪಂದ್ಯದಲ್ಲಿ ಮಾತ್ರ ಸೋಲು ಅನುಭವಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.