ಶನಿವಾರ, ಏಪ್ರಿಲ್ 17, 2021
23 °C

ವಿಷಯಾಧಾರಿತ ಇರಲಿ;ಅಧಿಕಾರದ ಆಸೆಗೆ ಬೇಡ

ಶಿವರಂಜನ್ ಸತ್ಯಂಪೇಟೆ Updated:

ಅಕ್ಷರ ಗಾತ್ರ : | |

ಸಾರ್ವಜನಿಕರ ಸಮಸ್ಯೆ ಅಥವಾ ವಿಷಯಾಧಾರಿತ ಭಿನ್ನಾಭಿಪ್ರಾಯಗಳಿಂದಾಗಿ ಪ್ರಾದೇಶಿಕ ಪಕ್ಷಗಳ ರಚನೆಯಾಗುವ ಬದಲು ಕೇವಲ ವೈಯಕ್ತಿಕ ಪ್ರತಿಷ್ಠೆಯನ್ನೇ ಮುಂದಿಟ್ಟುಕೊಂಡು ಪ್ರಾದೇಶಿಕ ಪಕ್ಷಗಳು ಉದಯವಾಗುತ್ತಿರುವುದು ವಿಷಾದದ ಸಂಗತಿ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ನೈಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ ಖೇಣಿ ತಮ್ಮ ಸ್ವಹಿತಾಸಕ್ತಿಯಿಂದಾಗಿ ಪಕ್ಷ ರಚನೆಗೆ ಮುಂದಾಗಿರುವುದು ತರವಲ್ಲ. ಅಧಿಕಾರ ಆಕಾಂಕ್ಷೆಯೇ ಮುಖ್ಯವಾಗಬಾರದು. ಅಂದ ಮಾತ್ರಕ್ಕೆ ಪ್ರಾದೇಶಿಕ ಪಕ್ಷ ರಚನೆ ಅಗತ್ಯವಿಲ್ಲ ಎಂದು ಹೇಳಲು ಬರುವುದಿಲ್ಲ. ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಾದೇಶಿಕ ಪಕ್ಷಗಳು ನೆಲೆ ಕಂಡುಕೊಳ್ಳುತ್ತಿಲ್ಲವೆಂದರೆ ಪುನಃ ಅಂತಹ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ.“ಸಾರ್ವಜನಿಕರ ಸಮಸ್ಯೆ, ವಿಷಯಾಧಾರಿತ ಇಲ್ಲವೇ ಅವುಗಳ ಇತ್ಯರ್ಥಕ್ಕಾಗಿ ನೂತನ ಪಕ್ಷವನ್ನು ರಚಿಸುವುದರಲ್ಲಿ ತಪ್ಪೇನಿಲ್ಲ”  ಎಂದು ಮಾಜಿ ಸಚಿವ ವೈಜನಾಥ ಪಾಟೀಲ ತಿಳಿಸುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.