ವೀಣಾ ಮಲ್ಲಿಕ್ಗೆ ವಿವಾಹ ಯೋಗವೇ ಇಲ್ಲವಂತೆ! ಹಾಗಂತ ಯಾವ ಜ್ಯೋತಿಷಿಗಳೂ ಹೇಳುತ್ತಿಲ್ಲ. ಖುದ್ದು ವೀಣಾ ಮಲ್ಲಿಕ್ ಹೇಳಿಕೊಳ್ಳುತ್ತಿದ್ದಾರೆ.

`ನನಗೆ 14 ವರ್ಷ ಆದಾಗಿನಿಂದಲೇ ಮದುವೆಯ ತೀರ್ಮಾನಗಳು ಆಗುತ್ತಿವೆ. ಆದರೆ ಮದುವೆಯಾಗುತ್ತಿಲ್ಲ. ಆಗ ನನ್ನ ಪಾಲಕರಿಗೆ ಬೇಗ ಜವಾಬ್ದಾರಿ ಮುಗಿದರೆ ಸಾಕು ಎನಿಸಿತ್ತು. ಆಗಿನಿಂದಲೂ ಮದುವೆಯ ಪ್ರಸ್ತಾಪ ನಡೆಯುತ್ತಲೇ ಇದೆ~ ಎಂದು ವೀಣಾ ಹೇಳಿಕೊಂಡಿದ್ದಾರೆ.

ಈ ಹಿಂದೆಯೂ ನಾಲ್ಕು ಸಲ ವಿವಾಹ ಪ್ರಸ್ತಾಪಗಳು ಕೊನೆಯ ಹಂತದವರೆಗೂ ಬಂದಿದ್ದವು. ಆದರೆ ನಾನೇ ಹಿಂದೆ ಸರಿದಿದ್ದೆ. ಈ ವರ್ಷ `ಸ್ವಯಂವರ~ದ ಪ್ರಸ್ತಾಪ ಬಂದಾಗ ಮನೆಯವರೆಲ್ಲ ಬೆಂಬಲಿಸಿದ್ದರು. ನಾನೂ `ಮದುವೆಗೆ ಸಿದ್ಧ~ ಎಂಬ ಮನಃಸ್ಥಿತಿ ತಲುಪಿದ್ದೆ.

ಆದರೆ ಇದೀಗ ಈ ಕಾರ್ಯಕ್ರಮವೇ ಸ್ಥಗಿತಗೊಂಡಿದೆ. ಹಾಗಾಗಿ ಬಹಶಃ ನನಗೆ ಮದುವೆಯ ಯೋಗವೇ ಇರಲಿಕ್ಕಿಲ್ಲ ಎಂದೂ ವೀಣಾ ಬೇಸರ ವ್ಯಕ್ತಪಡಿಸಿದ್ದಾರೆ.
ಇಮ್ಯಾಜಿನ್ ಚಾನೆಲ್ `ವೀಣಾ ಕಾ ಸ್ವಯಂವರ್~ ಕಾರ್ಯಕ್ರಮವನ್ನು ಆಯೋಜಿಸುವ ಯೋಜನೆ ಹಾಕಿಕೊಂಡಿತ್ತು. ಇದೀಗ ಏಕಾಏಕಿ ಈ ಕಾರ್ಯಕ್ರಮ ನಿರ್ಮಾಣವನ್ನು ಕೈ ಬಿಟ್ಟಿದೆ.

ಆದರೆ ವೀಣಾ ಮಲ್ಲಿಕ್ ಏನೂ ಹತಾಶರಾಗಿಲ್ಲ. `ಬಹುಶಃ ಅಲ್ಲಾಹ ನನಗಾಗಿ ಎಲ್ಲಕ್ಕಿಂತ ಉತ್ತಮವಾದುದನ್ನು ಕಾಯ್ದಿರಿಸಿರಬಹುದು. ಅದಕ್ಕಾಗಿ ತಾಳ್ಮೆಯಿಂದ ಎದುರು ನೋಡುತ್ತಿದ್ದೇನೆ~ ಎಂಬ ಆಶಾಭಾವ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.