ವೀರಭದ್ರೇಶ್ವರ ಜಾತ್ರೆ ಸಂಪನ್ನ: ಕಲಾ ತಂಡಗಳ ಮೆರುಗು

ಭಾಲ್ಕಿ: ಪಟ್ಟಣದ ವೀರಭದ್ರೇಶ್ವರ ಜಾತ್ರೆ ಯೂ ಪ್ರತಿ ವರ್ಷದಂತೆ ಈ ವರ್ಷವೂ ಸಡಗರ, ಸಂಭ್ರಮದ ನಡುವೆ ಬುಧವಾರ ಸಂಪನ್ನಗೊಂಡಿತ್ತು. ಇದೇ ತಿಂಗಳ 14 ರಂದು ಪ್ರಾರಂಭವಾದ ಏಳು ದಿನಗಳ ಜಾತ್ರೆಯ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ರುದ್ರಾಭಿಷೇಕ, ಎಣ್ಣೆ ಎರೆಯುವುದು, ಶಲ್ಯ ಸುಡುವುದು, ಪಲ್ಲಕ್ಕಿ ಮೆರವಣಿಗೆ, ಅಗ್ನಿ ಪೂಜೆಗಳಾಗಿದ್ದವು.
ಬುಧವಾರ ಸಂಜೆ ಪ್ರಾರಂಭವಾದ ವೀರಭದ್ರೇಶ್ವರ ಮೆರವಣಿಗೆ ದೇವಾಲ ಯದಿಂದ ಹೊರಟು ಪಟ್ಟಣದ ಪ್ರಮುಖ ವೃತ್ತಗಳಾದ ಅಂಬೇಡ್ಕರ್, ಬಸವೇಶ್ವರ, ಮಹಾತ್ಮ ಗಾಂಧಿ, ಜ್ಯೋತಿಬಾ ಫುಲೆ, ಬೊಮ್ಮಗೊಂಡೇಶ್ವರ ವೃತ್ತದ ಮೂಲಕ ಸಾಗಿ ಥೇರ್ ಮೈದಾನ ತಲುಪಿತು.
ಜಾತ್ರೆಯ ಕೊನೆ ದಿನವಾದ ಬುಧವಾರ ಬೆಳಿಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಭಕ್ತಿ, ಶ್ರದ್ಧೆ ಯಿಂದ ತಯಾರಿಸಿದ ಪ್ರಸಾದ ತಂದು ಹರಕೆ ಸಮರ್ಪಣೆ ಮಾಡಿದರು.
ಮೆರವಣಿಗೆಯುದ್ದಕ್ಕೂ ಜಾನಪದ ಕಲಾವಿದರ ಡೊಳ್ಳು ಕುಣಿತ, ಮಕ್ಕಳು, ಮಹಿಳೆಯರು ಪ್ರದರ್ಶಿಸಿದ ಕೋಲಾಟ, ನೃತ್ಯ ನೋಡುಗರ ಗಮನ ಸೆಳೆದವು. ಯುವಕರು ಡಿಜೆ ಸೌಂಡ್ನಲ್ಲಿ ಮೊಳಗಿದ ಭಕ್ತಿ ಗೀತೆಗಳಿಗೆ ಭಕ್ತರು ಹೆಜ್ಜೆ ಹಾಕಿ ಸಂಭ್ರಮಿ ಸಿದರು. ದಾರಿಯುದ್ದಕ್ಕೂ ಸಿಡಿದ ಪಟಾಕಿ ಗಳ ಸದ್ದು ಹೆಚ್ಚಿತ್ತು.
ನಂತರ ರಥೋತ್ಸವ ಮತ್ತು ಸಿಡಿ ಮದ್ದು ಸುಡುವ ಮೂಲಕ ಕಾರ್ಯಕ್ರಮ ಜರುಗಿದವು. ಮೆರವಣಿಗೆಯಲ್ಲಿ ದೇವ ಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಚಪ್ಪಾ ಪಾಟೀಲ, ಉಪಾಧ್ಯಕ್ಷ ಅಶೋಕ ಮಡ್ಡೆ, ಬಸವರಾಜ ವಂಕೆ, ದೇಶಮುಖಪ್ಪಾ ಪನಶೆಟ್ಟೆ, ದತ್ತು ತೂಗಾಂವಕರ, ಬಾಬು ರಾವ ಹಾಲಕುಡೆ, ಬಾಬುರಾವ ಬಿರಾ ದಾರ್, ಧರ್ಮು ವಂಕೆ, ಬಸವರಾಜ ಉಪ್ಪೆ,
ಶರಣು ವಂಕೆ, ಕಪೀಲ ಕಲ್ಯಾಣೆ, ಸಂಗಮೇಸ ವಾಲೆ, ರೇವಪ್ಪಾ ಮಾಲಗಾರ, ರಮೇಶ ಲೋಖಂಡೆ, ರಾಜಕುಮಾರ ಕನಶೆಟ್ಟೆ, ವಿಶ್ವನಾಥ ದೇಸಾಯಿ, ಮಲ್ಲಿಕಾರ್ಜುನ ಕನಶೆಟ್ಟೆ, ಉದಯಕುಮಾರ ಗುಂಗೆ, ಶರಣಯ್ಯಾ ಸ್ವಾಮಿ, ರೆವಣಪ್ಪಾ ಪಾಂಚಾಳ, ಧನ ರಾಜ ಪಾಂಚಾಳ, ರಾಹುಲ ಪನಶೆಟ್ಟೆ, ಸಿದ್ದಾರೂಢ ಪನಶೆಟ್ಟೆ, ನಾಗರಾಜ ದಾಡಗಿ ಇದ್ದರು.
***
ಒಂದು ವಾರ ಕಾಲ ನಡೆಯುವ ಐತಿಹಾಸಿಕ ಜಾತ್ರೆ ಇದಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಿಂದ ಜನರು ದೇವರ ದರುಶನ ಪಡೆಯಲು ಆಗಮಿಸುತ್ತಾರೆ.
-ಅಶೋಕ ಮಡ್ಡೆ, ಉಪಾಧ್ಯಕ್ಷರು ಜಾತ್ರಾ ಮಹೋತ್ಸವ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.