ಬುಧವಾರ, ಏಪ್ರಿಲ್ 21, 2021
23 °C

ವೃತ್ತಿಪರ ಪಠ್ಯಕ್ರಮ ಯೋಜನೆ-ಮೇನಲ್ಲಿ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಉನ್ನತ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ಗಳಿಸಲು ಸಹಾಯಕವಾಗುವಂತೆ ತಯಾರಿಸಲಾಗುತ್ತಿರುವ ವೃತ್ತಿಪರ ಪಠ್ಯಕ್ರಮದ ರಚನೆಯು ಅಂತಿಮ ಹಂತದಲ್ಲಿದ್ದು, ಮೇ ತಿಂಗಳಿನಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ. ಎಂಟನೆಯ ತರಗತಿಯಿಂದ ವಿದ್ಯಾರ್ಥಿಗಳು ಈ ವೃತ್ತಿಪರ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದಾಗಿದೆ. ಮರಗೆಲಸ, ವೈದ್ಯಸಹಾಯಕ ಮುಂತಾದ ಕೋರ್ಸ್‌ಗಳನ್ನು 12ನೆಯ ತರಗತಿಯವರೆಗೂ ಓದಿನ ಜೊತೆಯಲ್ಲಿಯೇ ಪೂರೈಸಬಹುದು. ವಿವಿಧ ಕೈಗಾರಿಕೆಗಳ ಸಲಹೆ ಸೂಚನೆಗಳಿಗೆ ಅನುಗುಣವಾಗಿ ಇದನ್ನು ತಯಾರಿಸಲಾಗುತ್ತಿದ್ದು, ಮೇನಲ್ಲಿ ಕಾರ್ಯಕ್ರಮ ಜಾರಿಗೆ ಬರಲಿದೆ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.