ವಯಸ್ಸಾದ ಹಾಗೆಲ್ಲಾ ಜೀವನಾಸಕ್ತಿ ಕಡಿಮೆಯಾಗಿ ದಿನದೂಡುವುದೇ ಕಷ್ಟವಾಗುವ ಪರಿಸ್ಥಿತಿ ಹಲವರದ್ದು. ಆದರೆ, ಕೆಲವರಲ್ಲಿ 90 ಕಳೆದರೂ ಜೀವನೋತ್ಸಾಹಕ್ಕೇನೂ ಕೊರತೆ ಕಾಣುವುದಿಲ್ಲ. ಸದಾ ಲವಲವಿಕೆಯಿಂದಿರುವ ಇಂಥವರ ಬಾಳಲ್ಲಿ ಉತ್ಸಾಹ ಬತ್ತದ ಚಿಲುಮೆ.

ವಯಸ್ಸಾದ ಮೇಲೂ ಉತ್ಸಾಹದಿಂದಿರುವವರನ್ನು ಕಂಡಾಗ, ‘ದೇವರು ಅವರಿಗೆ ಇನ್ನೂ ಬಿಸಿರಕ್ತ ಕೊಟ್ಟಿದ್ದಾನೆ. ಅದಕ್ಕೇ ಅವರು ಹಾಗಿದ್ದಾರೆ’ ಎಂದು ದೇವರ ಕಡೆಗೆ ನೋಡುವುದು ಸಾಮಾನ್ಯವೇ. ಆದರೆ, ಅಂಥ ಬಿಸಿರಕ್ತ ವಯಸ್ಸಾದ ಮೇಲೂ ನಿಮ್ಮ ಮೈಯಲ್ಲಿ ಹರಿದಾಡುವಂತಾದರೆ?! ಅದಕ್ಕೇನೂ ನೀವು ಚೈತನ್ಯ ನೀಡುವ ಔಷಧದ ಮೊರೆ ಹೋಗಬೇಕಿಲ್ಲ.

ವಯಸ್ಸಾದ ಮೇಲೂ ಬಾಳಲ್ಲಿ ಉತ್ಸಾಹ ಉಳಿಸಿಕೊಳ್ಳುವ ಮಾರ್ಗವೊಂದನ್ನು ಟೆಕ್ಸಸ್ ವಿಶ್ವವಿದ್ಯಾಲಯದ ಸಂಶೋಧಕರು ಅನ್ವೇಷಿಸಿದ್ದಾರೆ. ವಯಸ್ಸಾದಂತೆಲ್ಲಾ ನಿರಾಸಕ್ತಿಗೆ ಹತ್ತಿರಾಗಿ ಉತ್ಸಾಹದ ಕಡೆಗೆ ಬೆನ್ನು ಮಾಡುವ ಬದಲು ಮೆದುಳಿಗೆ ಕಸರತ್ತು ನೀಡಿದರೆ ಚೈತನ್ಯದ ಸೆಲೆ ಉಕ್ಕುತ್ತದೆ ಎಂಬ ಅಂಶ ಈ ಸಂಶೋಧನೆಯಿಂದ ಗೊತ್ತಾಗಿದೆ.

‘ಮೆದುಳಿಗೆ ಕಸರತ್ತು ನೀಡುವಂಥ ಕೆಲಸಗಳಲ್ಲಿ ತೊಡಗಿಸಿಕೊಂಡರೆ ವಯಸ್ಸಾದ ಮೇಲೂ ಜೀವನೋತ್ಸಾಹ ಕುಂದುವುದಿಲ್ಲ. ವಯಸ್ಸಾದಂತೆಲ್ಲಾ ಮೆದುಳಲ್ಲಿ ಹೆಚ್ಚು ರಕ್ತ ಪರಿಚಲನೆಯಾಗುವಂಥ ಕೆಲಸಗಳಲ್ಲಿ ತೊಗಿಸಿಕೊಳ್ಳುವುದರಿಂದ ವೃದ್ಧಾಪ್ಯದಲ್ಲೂ ಹರೆಯದಲ್ಲಿರುವಂಥ ಹುರುಪನ್ನು ಉಳಿಸಿಕೊಳ್ಳಲು ಸಾಧ್ಯವಿದೆ’ ಎನ್ನುತ್ತಾರೆ ಈ ಸಂಶೋಧನೆಯ ನೇತೃತ್ವವಹಿಸಿದ್ದ ಹಿರಿಯ ಸಂಶೋಧಕ ಡೇನಿಸ್ ಪಾರ್ಕ್.

‘ಡಿಜಿಟಲ್ ಫೋಟೊಗ್ರಫಿ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವೃದ್ಧರ ಮೆದುಳನ್ನು ಸ್ಕ್ಯಾನ್ ಮಾಡಿದಾಗ ಅವರ ಮೆದುಳಿನಲ್ಲಿ ರಕ್ತ ಪರಿಚಲನೆ ಹೆಚ್ಚಾಗಿರುವುದು ಕಂಡು ಬಂದಿದೆ. ವಾರದಲ್ಲಿ ಕನಿಷ್ಠ 14 ಗಂಟೆ ಮೆದುಳಿಗೆ ಕಸರತ್ತು ನೀಡುವ ಕಾರ್ಯಗಳಲ್ಲಿ ತೊಡಗಿಸಿಕೊಂಡವರಿಗೆ ಮೆದುಳಿನ ರಕ್ತ ಪರಿಚಲನೆ ಹೆಚ್ಚಾಗಿರುತ್ತದೆ. ಹೀಗಾಗಿ ಅವರಲ್ಲಿ ಉತ್ಸಾಹ ಕುಂದುವುದಿಲ್ಲ’ ಎನ್ನುತ್ತಾರೆ ಪಾರ್ಕ್.

‘ವಾರದಲ್ಲಿ 14 ಗಂಟೆಗಿಂತ ಕಡಿಮೆ ಮೆದುಳಿಗೆ ಕಸರತ್ತು ನೀಡುವ ವೃದ್ಧರ ಮೆದುಳನ್ನೂ ಸ್ಕ್ಯಾನ್ ಮಾಡಲಾಯಿತು. ಆದರೆ ಇವರ ಮೆದುಳಿನ ರಕ್ತ ಪರಿಚಲನೆ ಕಡಿಮೆ ಇತ್ತು. ಹಾಗೆಂದು ಇವರೇನೂ ಚಟುವಟಿಕೆಯಿಂದ ಇರದವರೇನಲ್ಲ. ಸಾಮಾಜಿಕ ಕಾರ್ಯಕ್ರಮ, ಪ್ರವಾಸ, ಅಡುಗೆ–ಹೀಗೆ ಮೆದುಳಿಗೆ ಹೆಚ್ಚು ಕಸರತ್ತು ನೀಡದ ಕೆಲಸಗಳಲ್ಲಿ ಇವರು ಹೆಚ್ಚು ಕಾಲ ತೊಡಗಿದ್ದವರು. ಇಂಥ ವೃದ್ಧರಲ್ಲಿ ಚೈತನ್ಯದ ಪ್ರಮಾಣ ಮೊದಲ ವರ್ಗದವರಿಗಿಂತ ಕಡಿಮೆ’ ಎಂಬುದು ಪಾರ್ಕ್ ಮಾತು.

ಇನ್ನು ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ಸದಾ ಒಂಟಿಯಾಗಿರುವ ವೃದ್ಧರ ಮೆದುಳಿಗೆ ಯಾವುದೇ ಕಸರತ್ತು ಇರುವುದಿಲ್ಲ. ಹೀಗಾಗಿ ಈ ಎರಡೂ ವರ್ಗಗಳ ವೃದ್ಧರಿಗಿಂತ ಇವರ ಉತ್ಸಾಹದ ಮಟ್ಟ ತೀರಾ ಕಡಿಮೆ. ಹೀಗಾಗಿ ಮೆದುಳಿಗೆ ಕಸರತ್ತು ನೀಡುವುದು ವೃದ್ಧಾಪ್ಯವನ್ನು ಸಹನೀಯವಾಗಿಸಬಲ್ಲದು ಎಂಬುದು ಪಾರ್ಕ್ ಸಲಹೆ.

‘ವಯಸ್ಸಾಯ್ತು. ಇನ್ನು ನಮಗೆ ಅದೆಲ್ಲಾ ಯಾಕೆ’ ಎಂದುಕೊಳ್ಳುವ ಬದಲು ಹೆಚ್ಚೆಚ್ಚು ಕ್ರಿಯಾಶೀಲರಾಗುವುದು, ಮೆದುಳಿಗೆ ಕಸರತ್ತು ನೀಡುವುದು ‘ಉಳಿದ ದಿನ’ಗಳನ್ನು ಕಳೆಯಲಾದರೂ ಉತ್ಸಾಹ ತುಂಬಬಲ್ಲದು.

‘ಇಷ್ಟು ವರ್ಷ ಕಳೆಯಿತು’ ಎಂಬುದಕ್ಕಿಂತ, ‘ಇನ್ನೂ ಅಷ್ಟು ವರ್ಷ ಉಳಿದಿದೆ’ ಎಂಬ ಆಲೋಚನೆಯೇ ನಿಮ್ಮನ್ನು ಮೆದುಳು ಕಸರತ್ತು ಬೇಡುವ ಕೆಲಸಕ್ಕೆ ಪ್ರೇರೇಪಿಸಬಹುದಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.