ನಗರದ ಪ್ರತಿಷ್ಠಿತ ಎಂ.ಎಸ್.ರಾಮಯ್ಯ ತಾಂತ್ರಿಕ ಸಂಸ್ಥೆಯಲ್ಲಿ ಬಿ.ಇ ಮತ್ತು ಬಿ.ಆರ್ಕ್ ಮೊದಲ ಸೆಮಿಸ್ಟರ್ ತರಗತಿಗಳ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. ಹೊಸ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗೋಕುಲ ಎಜ್ಯುಕೇಶನ್ ಫೌಂಡೇಷನ್ನ ಉಪಾಧ್ಯಕ್ಷ ಎಂ.ಆರ್. ಸೀತಾರಾಮ್, `ಎಂಜಿನಿಯರಿಂಗ್ ಮತ್ತು ಸಂಬಂಧಿತ ವೃತ್ತಿ ವಲಯದಲ್ಲಿ ಸಂಸ್ಥೆ ಅಪಾರ ಮನ್ನಣೆ ಪಡೆದಿದೆ.

ವಿದ್ಯಾರ್ಥಿಗಳು ಸ್ವಯಂ ಸುಧಾರಣೆ, ಅಧ್ಯಯನದ ಮೂಲಕ ಎಂಜಿನಿಯರಿಂಗ್ ವಲಯದಲ್ಲಿ ತಮ್ಮ ಗುರಿಗಳನ್ನು ಸಾಧಿಸಲು ಅನುಕೂಲವಾಗುವಂತೆ ನೈತಿಕ ಸ್ವರೂಪದ ಶಿಕ್ಷಣವನ್ನು ನೀಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆ. ಸಂಸ್ಥೆಯಲ್ಲಿ ರ್ಯಾಗಿಂಗ್ಗೆ ಅವಕಾಶವೇ ಇಲ್ಲ. ರ್ಯಾಗಿಂಗ್ ನಡೆದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೋಷಕರು ಮಕ್ಕಳ ಹಾಜರಾತಿ ,ಅಂಕ ಪಟ್ಟಿಗಳನ್ನು ವೆಬ್ಸೈಟ್ ಮೂಲಕ ಪಡೆದುಕೊಳ್ಳುಬಹುದು~ ಎಂದು ಹೇಳಿದರು.

ಎಂಎಸ್ಆರ್ಐಟಿ 1962ರಲ್ಲಿ ದಿವಂಗತ ಎಸ್.ಎಸ್. ರಾಮಯ್ಯ ನೇತೃತ್ವದಲ್ಲಿ ಗೋಕುಲ ಎಜ್ಯುಕೇಶನ್ ಫೌಂಡೇಶನ್ ಅಡಿಯಲ್ಲಿ ಆರಂಭವಾಯಿತು. ಪದವಿ ಮಟ್ಟದಲ್ಲಿ 13 ಕೋರ್ಸ್ಗಳು ಮತ್ತು ಸ್ನಾತಕೋತ್ತರ ಮಟ್ಟದಲ್ಲಿ 11ಕೋರ್ಸ್ಗಳನ್ನು ಈ ಸಂಸ್ಥೆ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.