ಬೆಂಗಳೂರು: ರಾಜ್ಯದಲ್ಲಿನ ಐಟಿಐಗಳಿಗೆ ವಿದ್ಯಾರ್ಥಿ ಕೇಂದ್ರಿತ ಅನುದಾನ ನೀಡುವ ಬದಲು ವೇತನ ಆಧಾರಿತ ಅನುದಾನ ನೀತಿಯನ್ನೇ ಮುಂದುವರಿಸಬೇಕು ಎಂದು ರಾಜ್ಯ ಅನುದಾನಿತ ಖಾಸಗಿ ಐಟಿಐ ನೌಕರರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

ಶಾಸಕರ ಭವನದಲ್ಲಿ ಶನಿವಾರ ನಡೆದ ಅನುದಾನಿತ ಖಾಸಗಿ ಐಟಿಐ ನೌಕರರ ಸಂಘದ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ‘ಇತ್ತೀಚಿನವರೆಗೂ ವೇತನ ಆಧಾರಿತ ಅನುದಾನ ನೀತಿ ಜಾರಿಯಲ್ಲಿತ್ತು. ಆದರೆ ವಿದ್ಯಾರ್ಥಿ ಕೇಂದ್ರಿತ ಅನುದಾನ ನೀತಿಯನ್ನು ಒಪ್ಪಿಕೊಳ್ಳಬೇಕು ಎಂದು ಕಳೆದ 6-7 ತಿಂಗಳಿನಿಂದ ಸರ್ಕಾರ ಖಾಸಗಿ ಅನುದಾನಿತ ಐಟಿಐ ಕಾಲೇಜುಗಳ ಆಡಳಿತ ಮಂಡಳಿಗಳ ಮೇಲೆ ಒತ್ತಡ ಹೇರುತ್ತಿದೆ’ ಎಂದರು.

ವೇತನ ಆಧಾರಿತ ಅನುದಾನ ನೀತಿಯಲ್ಲಿ ಐಟಿಐ ನೌಕರರ ವೇತನವನ್ನು ಸರ್ಕಾರವೇ ಪಾವತಿಸುತ್ತಿತ್ತು. ವಿದ್ಯಾರ್ಥಿ ಕೇಂದ್ರಿತ ನೀತಿಯಲ್ಲಿ ಪ್ರತಿ ವಿದ್ಯಾರ್ಥಿಗೆ ವರ್ಷವೊಂದಕ್ಕೆ ಆರು ಸಾವಿರ ರೂಪಾಯಿಯನ್ನು ಸರ್ಕಾರ ಆಡಳಿತ ಮಂಡಳಿಗೆ ನೀಡುತ್ತದೆ. ಈ ಮೊತ್ತದಲ್ಲೇ ನೌಕರರ ವೇತನವನ್ನೂ ಪಾವತಿಸಬೇಕು. ಪ್ರತಿ ವಿದ್ಯಾರ್ಥಿಗೆ ಪ್ರಸ್ತುತ 15-20 ಸಾವಿರ ರೂಪಾಯಿ ಖರ್ಚು ಬರುತ್ತಿದೆ. ಸರ್ಕಾರ ಕೊಡುವ ಮೊತ್ತದಲ್ಲಿ ನೌಕರರ ಮಾಸಿಕ ವೇತನ ಪಾವತಿ ಮಾಡುವುದೂ ಕಷ್ಟ ಎಂದು ಅವರು ಹೇಳಿದರು.

ಸರ್ಕಾರದ ಇತರ ನೌಕರರಿಗೆ ಇರುವ ಪಿಂಚಣಿ ಸೌಲಭ್ಯ ಕೂಡ ಐಟಿಐ ನೌಕರರರಿಗೆ ಇಲ್ಲ. ಪಾಲಿಟೆಕ್ನಿಕ್ ಕಾಲೇಜುಗಳ ಉಪನ್ಯಾಸಕರಿಗೆ ಇರುವಂತೆ ಐಟಿಐ ಉಪನ್ಯಾಸಕರಿಗೂ ಪಿಂಚಣಿ ಸೌಲಭ್ಯ ನೀಡಬೇಕು. ಪಿ.ಎಸ್.ಎಸ್. ಥಾಮಸ್ ಅವರ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಏಳು ವರ್ಷ ಸಮರ್ಥವಾಗಿ ನಡೆದ ಐಟಿಐ ಕಾಲೇಜುಗಳಿಗೆ ಎಂಟನೆಯ ವರ್ಷದಿಂದ ಸರ್ಕಾರ ಅನುದಾನ ನೀಡಬೇಕು. ಆದರೆ ರಾಜ್ಯದ ಸುಮಾರು 125 ಖಾಸಗಿ ಐಟಿಐ ಕಾಲೇಜುಗಳು ಏಳು ವರ್ಷ ಪೂರೈಸಿ ಅನುದಾನಕ್ಕಾಗಿ ಕಾಯುತ್ತಿವೆ. ಅವುಗಳಿಗೆ ವೇತನ ಆಧಾರಿತ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಡಿಯೂರಪ್ಪ ಅವರಿಗೆ ಭಾನುವಾರ ಮನವಿ ಸಲ್ಲಿಸಲಾಗುವುದು. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಜೂನ್ನಿಂದ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.