ಬುಧವಾರ, ಏಪ್ರಿಲ್ 14, 2021
29 °C

ವೇತನ ಬಿಡುಗಡೆಗೆ ಪೌರಕಾರ್ಮಿಕರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಳೆದ ಮೂರು ತಿಂಗಳಿನಿಂದ ತಡೆಹಿಡಿದಿರುವ ಪೌರಕಾರ್ಮಿಕರ ವೇತನವನ್ನು ಕೂಡಲೇ ಪಾವತಿಸಬೇಕು~ ಎಂದು ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘಟನೆ ಅಧ್ಯಕ್ಷ ಎಸ್. ಬಾಲನ್ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವೇತನ ನೀಡದ ಕಾರಣ ನಗರದ ಕೆಲವು ಪ್ರದೇಶಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ~ ಎಂದ ಅವರು, `ಬಿಬಿಎಂಪಿಯಲ್ಲಿ ಸುಮಾರು 17 ಸಾವಿರ ಪೌರಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದು, ಅವರ ಜೀವನದ ಚೆಲ್ಲಾಟ ಆಡುವುದು ಸಲ್ಲ~ ಎಂದರು. `ಗುತ್ತಿಗೆದಾರರನ್ನು ಕೇಳಿದರೆ ಬಿಬಿಎಂಪಿ ಹಣ ನೀಡಿಲ್ಲ ಎನ್ನುತ್ತಿದ್ದು, ಬಿಬಿಎಂಪಿ ಅಧಿಕಾರಿಗಳನ್ನು ವಿಚಾರಿಸಿದರೆ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ ಎನ್ನುತ್ತಿದ್ದಾರೆ. ಇಬ್ಬರೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ~ ಎಂದು ಆರೋಪಿಸಿದರು.`ಕಾರ್ಮಿಕ ಕಾಯಿದೆಯ ಪ್ರಕಾರ ಕನಿಷ್ಠ ವೇತನ ನೀಡಬೇಕು ಎಂಬುದು ಸಂವಿಧಾನ ಬದ್ಧ ಹಕ್ಕಾಗಿದ್ದು, ಆ ಹಕ್ಕನ್ನು ಪಡೆಯಲು ಆಯಾ ವಾರ್ಡ್‌ಗಳ ಬಿಬಿಎಂಪಿ ಕಚೇರಿ ಎದುರು ಹೋರಾಟ ಮಾಡಿದರೂ  ಪ್ರಯೋಜನವಾಗಿಲ್ಲ~ ಎಂದರು.`ಪ್ರತಿ ತಿಂಗಳು 7ರೊಳಗೆ ವೇತನ, ಎಲ್ಲಾ ಗುತ್ತಿಗೆ ಪೌರಕಾರ್ಮಿಕರಿಗೆ ಇ.ಎಸ್.ಐ, ಪಿ.ಎಫ್, ಗುರುತಿನ ಕಾರ್ಡ್ ಸೌಲಭ್ಯ ನೀಡಬೇಕು. ಕಾರ್ಮಿಕ ಕಾನೂನನ್ನು ಪಾಲಿಸದ ಗುತ್ತಿಗೆದಾರರ ಲೈಸನ್ಸ್ ರದ್ದು ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು~ ಎಂದು ತಿಳಿಸಿದರು. ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘಟನೆ ಸಂಘಟನಾ ಕಾರ್ಯದರ್ಶಿ ಗೌರಿ, ಪ್ರಜಾತಾಂತ್ರಿಕ ಜನರ ವೇದಿಕೆ ಸಂಚಾಲಕ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.