ಮಂಗಳವಾರ, ಜನವರಿ 28, 2020
17 °C

ವೈಕುಂಠ ಏಕಾದಶಿ ವಿಶೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

* ಶ್ರೀ ಪಾಂಡುರಂಗ ವಿಷ್ಣು ಸಹಸ್ರನಾಮ ಮಂಡಳಿ: ಗುರುವಾರ ಬೆಳಿಗ್ಗೆ 5ರಿಂದ ಶುಕ್ರವಾರ ಬೆಳಿಗ್ಗೆ 8ರವರೆಗೆ ಬೃಹತ್ ವಿಷ್ಣು ಸಹಸ್ರನಾಮ ಪಾರಾಯಣ ಮಹಾಯಜ್ಞ. 27 ಗಂಟೆ ನಿರಂತರ ಪಠಣ. ಅತಿಥಿಗಳು: ವಿಶ್ವೇಶತೀರ್ಥ ಸ್ವಾಮೀಜಿ, ಡಾ.ಶಿವರುದ್ರ ಸ್ವಾಮೀಜಿ, ತಿರುಸ್ವಾಮೀಜಿ, ಡಾ.ಸಿ.ಎನ್. ಅಶ್ವಥ್ ನಾರಾಯಣ . ಸ್ಥಳ: ಮಲ್ಲೇಶ್ವರಂ ಆಟದ ಮೈದಾನ.ಶ್ರೀ ಆಂಜನೇಯಸ್ವಾಮಿ, ಶ್ರೀ ವಿಶ್ವನಾಥೇಶ್ವರ ಸ್ವಾಮಿ, ಶ್ರೀ ವೆಂಕಟೇಶ್ವರ ಸ್ವಾಮಿ ಸಮೇತ ಶ್ರೀದೇವಿ, ಭೂದೇವಿ, ಶ್ರೀವರಮಹಾ ಗಣಪತಿ, ನವಗ್ರಹ ಟ್ರಸ್ಟ್: ಗುರುವಾರ ಬೆಳಿಗ್ಗೆ 4.30ಕ್ಕೆ ವಿಶ್ವರೂಪ ದರ್ಶನ. ಸ್ಥಳ: ಶ್ರೀ ನಗರ ಬಸ್‌ನಿಲ್ದಾಣ (ಗ.ದಾಸರಹಳ್ಳಿ).ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ: ಗುರುವಾರ ಬೆಳಿಗ್ಗೆ 5ಕ್ಕೆ ವಿಶ್ವರೂಪ ದರ್ಶನ, ವಿಶೇಷ ಅಲಂಕಾರ, ಸಂಜೆ 6.30ಕ್ಕೆ ಕಲ್ಯಾಣೋತ್ಸವ.

 ಸ್ಥಳ; ದೊಮ್ಮಲೂರು ಬಡಾವಣೆ.ನಿರ್ಮಾಣ್ ದೇವಾಲಯಗಳ ವಿಶ್ವಸ್ಥ ಮಂಡಳಿ: ಬೆಳಿಗ್ಗೆ 4.30ರಿಂದ ವಿಶೇಷ ಪೂಜೆ. ಸಂಜೆ 6ಕ್ಕೆ ಪದ್ಮಿನಿ ರಾಮಚಂದ್ರನ್ ಅವರ ಶಿಷ್ಯೆ ಶ್ರೇಯಾ ರಾಮಚಂದ್ರನ್ ಅವರಿಂದ ಭರತನಾಟ್ಯ. ಸ್ಥಳ: ಪುರಂದರ ಮಂಟಪ, ನಿಸರ್ಗ ಬಡಾವಣೆ, ಕೊಪ್ಪ ಗೇಟ್ ಬಳಿ, ಬನ್ನೇರುಘಟ್ಟ ರಸ್ತೆ.ಶ್ರೀ ವಿನಾಯಕ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ: ಗುರುವಾರ ಬೆಳಿಗ್ಗೆ 5ರಿಂದ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ. ಸ್ಥಳ: ಎಂ.ಜಿ.ರೈಲ್ವೆ ಬಡಾವಣೆ, ಮಾಗಡಿ ರಸ್ತೆ.* ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇವಸ್ಥಾನ: ಗುರುವಾರ ವೈಕುಂಠ ಏಕಾದಶಿ ಪ್ರಯುಕ್ತ ಬೆಳಿಗ್ಗೆ ವಿಶೇಷ ಪೂಜೆ. ಸ್ಥಳ: ನಂ.264, ಟಿ.ಮರಿಯಪ್ಪ ರಸ್ತೆ, 2ನೇ ಬ್ಲಾಕ್, ಜಯನಗರ. ಬೆಳಿಗ್ಗೆ 6.* ಶ್ರೀನಿವಾಸ ದೇವಸ್ಥಾನದ ಸೇವಾ ಸಮಿತಿ: ಗುರುವಾರ ವೈಕುಂಠ ಏಕಾದಶಿ ಪ್ರಯುಕ್ತ ಸುವರ್ಣ ಚರಣ ಪಾದ ದರ್ಶನವಿರುತ್ತದೆ. ಸ್ಥಳ: (ಮರಿತಿರುಪತಿ), ಮಹಾಲಕ್ಷ್ಮಿಪುರಂ. ಬೆಳಿಗ್ಗೆ 6.* ವೆಂಕಟರಮಣ ಸ್ವಾಮಿ ದೇವಸ್ಥಾನದ ಟ್ರಸ್ಟ್: ಗುರುವಾರ ಬೆಳಿಗ್ಗೆ ವಿಶೇಷ ಪೂಜೆ. ರಾಜಬೀದಿ ಉತ್ಸವ. ಸಂಜೆ 4ಕ್ಕೆ ಭಜನಾ ಕಾರ್ಯಕ್ರಮ. ಸ್ಥಳ: 9ನೇ ಮುಖ್ಯ ರಸ್ತೆ, ಶ್ರೀನಗರ.* ಶನೇಶ್ಚರಸ್ವಾಮಿ ದೇವಸ್ಥಾನ ಸೇವಾ ಸಮಿತಿ: ವೈಕುಂಠ  ಏಕಾದಶಿ ಪ್ರಯುಕ್ತ ವಿಶೇಷ ಪೂಜೆ. ಸ್ಥಳ: ಮಾತಾ ಅಮೃತಾನಂದಮಹಿ ಆಶ್ರಮ ರಸ್ತೆ, ಮರಿಯಪ್ಪನಪಾಳ್ಯ. ಬೆಳಿಗ್ಗೆ 6.* ಇಸ್ಕಾನ್: ವೈಕುಂಠ ಏಕಾದಶಿ ಪ್ರಯುಕ್ತ ಶ್ರೀನಿವಾಸ ಗೋವಿಂದ ಭಕ್ತಿ ಸಂಗೀತದಲ್ಲಿ ಶ್ರೀಧರ್ ಸಾಗರ್ ಮತ್ತು ತಂಡದಿಂದ ಸ್ಯಾಕ್ಸೋಫೋನ್ ವಾದನ, ಎಂ.ಎಸ್.ಶೀಲಾ ಮತ್ತು ವೃಂದ, ತಿರುಮಲೆ ಶ್ರೀನಿವಾಸ್ ಮತ್ತು ತಂಡ, ನೀಲಾಂಬಿಕೆ ಮತ್ತು ತಂಡ, ಸರೋಜ ನಟರಾಜನ್ ಮತ್ತು ತಂಡ, ಡಾ.ವಿದ್ಯಾಭೂಷಣ ಮತ್ತು ತಂಡ, ನಾಗವಲ್ಲಿ ನಾಗರಾಜ್ ಮತ್ತು ರಂಜನಿ ನಾಗರಾಜ್, ಶಂಕರ್ ಶಾನ್‌ಭೋಗ್ ಮತ್ತು ತಂಡದಿಂದ ಗಾಯನ. ಎ.ಶಂಕರರಾಮನ್ ತಂಡದಿಂದ ವೀಣಾ ವಾದನ.ಎಸ್.ನಳಿನಿ ಕಾಮತ್ ಮತ್ತು ತಂಡದಿಂದ ತೋಮಾಲ ಸಂಗೀತ ಸೇವೆ. ಕಾಸರವಳ್ಳಿ ಸಹೋದರಿಯರಾದ ರೂಪಾ ಮತ್ತು ದೀಪಾ ಅವರಿಂದ ದ್ವಾರಪೂಜೆ ಸಂಗೀತ ಸೇವೆ. ಅಂಜಲಿ ಶ್ರೀರಾಮ್ ಅವರಿಂದ ಏಕಾಂತ ಸೇವೆ.

ಸ್ಥಳ: ವೆಸ್ಟ್ ಆಫ್ ಕಾರ್ಡ್ ರಸ್ತೆ, ರಾಜಾಜಿನಗರ. ಬೆಳಿಗ್ಗೆ 9ರಿಂದ* ತಿರುಮಲ ತಿರುಪತಿ ದೇವಸ್ಥಾನ: ಗುರುವಾರ ಗೋಪಿನಾಥ ಮತ್ತು ಬಳಗದಿಂದ ನಾದಸ್ವರ.  ವತ್ಸಲಾರಾವ್ ಮತ್ತು ತಂಡದಿಂದ ನಾಮ ಸಂಕೀರ್ತನೆ. ಎ.ಎಂ.ಭಾಗ್ಯಲಕ್ಷ್ಮಿ ಮತ್ತು ತಂಡದಿಂದ ಸಂಗೀತ.  ಅಶೋಕಾಚಾರ್ಯ ವಿ.ಜೋಶಿ ಅವರಿಂದ ಧಾರ್ಮಿಕೋಪನ್ಯಾಸ. ವಾಸವಿ ಮಹಿಳಾ ಮಂಡಳಿಯಿಂದ ನಾಮ ಸಂಕೀರ್ತನೆ.

  ವಿಠಲದಾಸ ಅವರಿಂದ ಹರಿಕಥೆ.  ವಾಸವಿ ನಿರಂಜನ ಮಂಡಳಿಯಿಂದ ಭಜನೆ. ಎಂ.ಎಸ್.ವಿದ್ಯಾ ಮತ್ತು ಬಳಗದಿಂದ ಸಂಗೀತ.

ಸ್ಥಳ: ವೈಯಾಲಿಕಾವಲ್. ಬೆಳಿಗ್ಗೆ 6ರಿಂದವರಪ್ರದ ಬಾಳೆಲೆ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ: ವೈಕುಂಠ ಏಕಾದಶಿ ಪ್ರಯುಕ್ತ ಅಖಂಡ ಸುದರ್ಶನ ಹೋಮ.

ಸ್ಥಳ: ಲಕ್ಷ್ಮಿನರಸಿಂಹ ಗುಡ್ಡ, ಗಟ್ಟಿಗೆರೆ ಗ್ರಾಮ ವಿಸ್ತರಣೆ, ರಾಜರಾಜೇಶ್ವರಿ ನಗರ. ಬೆಳಿಗ್ಗೆ 6.* ಬೈಲಾಂಜನೇಯ ಸ್ವಾಮಿ ಟ್ರಸ್ಟ್: ಬೆಳಿಗ್ಗೆ ವಿಶೇಷ ಪೂಜೆ. ಸ್ಥಳ; ಮಠದಹಳ್ಳಿ ಫರ್ದರ್ ಎಕ್ಸ್‌ಟೆನ್ಷನ್ ಬಿಡಿಎ ಜ್ಯುಡಿಷಿಯಲ್ ಲೇಔಟ್, 108 ಬಿ.ಬಸ್ ನಿಲ್ದಾಣ ಗಂಗಾನಗರ. ಬೆಳಿಗ್ಗೆ 9.* ಸನಾತನ ಭಕ್ತ ಮಂಡಳಿ ಟ್ರಸ್ಟ್: ಬೆಳಿಗ್ಗೆ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ. ಸ್ಥಳ: ಕೋದಂಡರಾಮ ದೇವಾಲಯ, ನಂ.ಸಿ.ಎ.1/2, ಕಾರ್ಡ್ ರಸ್ತೆ (ಪೂರ್ವ), ವಿಜಯನಗರ. ಬೆಳಿಗ್ಗೆ 6.* ರಾಜರಾಜೇಶ್ವರಿ ದೇವಸ್ಥಾನ ಟ್ರಸ್ಟ್: ಬೆಳಿಗ್ಗೆ ವಿಶೇಷ ಪೂಜೆ. ಸ್ಥಳ: ಆಸ್ಟಿನ್ ಟೌನ್. ಬೆಳಿಗ್ಗೆ 6.* ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯ ಹಾಗೂ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಮತ್ತು ನವಗ್ರಹ ದೇವಾಲಯ: ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ. ಸ್ಥಳ: 4ನೇ ಮುಖ್ಯ ರಸ್ತೆ, 9ನೇ ಅಡ್ಡ ರಸ್ತೆ, ಶ್ರೀನಿವಾಸ ನಗರ, ಕತ್ರಿಗುಪ್ಪೆ. ಬೆಳಿಗ್ಗೆ 4.* ನೆಲಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ರಸ್ತೆಯ ದಾಸನಪುರದ ಶ್ರೀರಾಮಾನುಜ ಪೀಠಂ ಉಭಯ ವೇದಾಂತ ವೈಷ್ಣವ ಸಭಾದ ಶ್ರೀ ಪದ್ಮಾವತಿ ಶ್ರೀನಿವಾಸ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಗುರುವಾರ ಬೆಳಗ್ಗೆ 5ರಿಂದ ಸಂಜೆ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು.

 ಬೆಳಗ್ಗೆ 5ಕ್ಕೆ ಅಭಿಷೇಕ, ಪೂಲಂಗಿ ಅಲಂಕಾರ, ಶ್ರೀ ನರಸಿಂಹಾಚಾರ್ಣ, ಶ್ರೀ ಉದಯೋಗಾನಂದಶರ್ಮ ಅವರ ತಂಡ, ದಾಸನಪುರ ಶ್ರೀ ರಾಮಾನುಜ ವೇದ ಆಗಮ ಪಾಠಶಾಲೆಯ ವಿದ್ಯಾರ್ಥಿಗಳಿಂದ ವಿಷ್ಣು ಸಹಸ್ರನಾಮ ಪಾರಾಯಣ. 7ಕ್ಕೆ ಶ್ರೀ ಭೂನೀಳಾ ಸಮೇತ ಶ್ರೀನಿವಾಸ ಸ್ವಾಮಿಯ ಉತ್ಸವ. ಶ್ರೀನಿವಾಸ ಭಜನಾ ಮಂಡಳಿ ವತಿಯಿಂದ ಆಂಡಾಳ್ ಗೋಷ್ಠಿ. 8.30ಕ್ಕೆ ಅನುಜ್ಞೆ, ಋತ್ವಿಕಾವರಣ, ವಿಶ್ವಕ್ಷೇನ ಪೂಜೆ, ಪುಣ್ಯಾಹ, ಅನಿರ್ವಾಣ, ದೀಪಾರೋಹಣ, ಮೃತ್ ಸಂಗ್ರಹಣ, ಅಂಕುರಾರ್ಪಣ, ರಕ್ಷಾಬಂಧನ, ದ್ವಾರ-ಕುಂಭದೇವತಾ ಪೂಜೆ, ಮಹಾಸುದರ್ಶನ ಹೋಮ, ಶ್ರೀ ವಿಷ್ಣು ಸಹಸ್ರನಾಮ ಹೋಮ, ಪೂರ್ಣಾಹುತಿ, ಸಾಮೂಹಿಕ ಆರಾಧನೆ, ಶಾತ್ತುಮೊರೈ, ಪ್ರಸಾದ ವಿನಿಯೋಗ, ಕೆ.ಆರ್. ಗಂಗಾಧರ್ ಅವರ ಪಕ್ಕವಾದ್ಯ ಮತ್ತು ವಿದೂಷಿ ಜಯಲಕ್ಷ್ಮೀ ಸಂಗಡಿಗರಿಂದ ದೇವರ ನಾಮಗಳು.ಮಧ್ಯಾಹ್ನ 1.30ಕ್ಕೆ ಆಚಾರ್ಯ ಗುರುಪರಂಪರಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ, 2.30ಕ್ಕೆ ಆದರ್ಶನಗರದ ಪಾಂಡುರಂಗ ಭಜನಾ ಮಂಡಳಿಯಿಂದ ನಾರಾಯಣ ಭಜನೆ ಮತ್ತು ದಾಸರ ಕೀರ್ತನೆಗಳು. ಸಂಜೆ 4.30ಕ್ಕೆ ಶ್ರೀ ವರಸಿದ್ದಿ ವಿನಾಯಕ ಭಜನಾ ಮಂಡಳಿ ವತಿಯಿಂದ ಗೋವಿಂದ ನಾಮಾವಳಿ ಸಂಕೀರ್ತನ ಮತ್ತು ದೇವರ ನಾಮಗಳು.

 ವಿಜಯೇಂದ್ರ ರಾವ್ ಅವರ ನೇತೃತ್ವದಲ್ಲಿ ದಾಸರು ಕಂಡ ಶ್ರೀನಿವಾಸ, ದಾಸರ ಪದಗಳು ಮತ್ತು ಭಜನೆ. 6.30ಕ್ಕೆ ನೆಲಮಂಗಲದ ಶ್ರೀಮಾತಾ ವಿಪ್ರ ಮಂಡಳಿ, ವಾಸವಿ ಮಹಿಳಾ ಮಂಡಳಿ ವತಿಯಿಂದ ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ ನಡೆಯುತ್ತದೆ.* ಪದ್ಮಾವತಿ ಸಮೇತ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನ: ಏಕಾದಶಿ ಪ್ರಯುಕ್ತ ಬೆಳಿಗ್ಗೆ 3ಕ್ಕೆ ಅಭಿಷೇಕ, ನಂತರ ವಿಶೇಷ ಅಲಂಕಾರ.

ಸ್ಥಳ: ಭೋವಿ ಕಾಲೋನಿ, ರಾಮಮೂರ್ತಿ ನಗರ.

ಪ್ರತಿಕ್ರಿಯಿಸಿ (+)