ಮಂಗಳವಾರ, ಜೂನ್ 15, 2021
22 °C

ವೈಜ್ಞಾನಿಕವಾಗಿ ಕುರಿ ಸಾಕಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ಕುರುಬರು ಅಲೆಮಾರಿ ಯಾಗಿ ಕುರಿ ಸಾಕಾಣಿಕೆ ಮಾಡುವುದನ್ನು ಬಿಟ್ಟು, ಒಂದೇ ಕಡೆ ಕುರಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಾಕಾಣಿಕೆ ಮಾಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಹೊಂದಬೇಕು ಎಂದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ ಹೇಳಿದರು.ಪಟ್ಟಣದ ದುರ್ಗಾದೇವಿ ದೇವ ಸ್ಥಾನದ ಆವರಣದಲ್ಲಿ ಮಂಗಳವಾರ ರಾತ್ರಿ ಬೆಳಗಾವಿ ಜಿಲ್ಲೆಯ ಹಾಲುಮತ ಕುರುಬ ಜನಾಂಗದ ವತಿಯಿಂದ ಹಮ್ಮಿ ಕೊಂಡಿದ್ದ ಜಾತ್ರಾ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ವೈಜ್ಞಾನಿಕ ರೀತಿ ಕುರಿ ಸಾಕಾಣಿಕೆಯಿಂದ ಸಾಕಷ್ಟು ಲಾಭಗಳಿಸಲು ಸಾಧ್ಯವಿದೆ. ಕುರಿಗಳಿಗೆ ಸಕಾಲದಲ್ಲಿ ರೋಗ ನಿರೋಧಕ ಲಸಿಕೆಗಳು, ಜಂತುನಾಶಕಗಳನ್ನು ಹಾಕುವ ಮೂಲಕ ಉತ್ತಮ ಇಳುವರಿ ಪಡೆಯಬಹುದಾಗಿದ್ದು, ಕುರುಬ ಸಮಾಜ ಇದನ್ನು ರೂಢಿಸಿಕೊಳ್ಳಬೇಕು.ಸಮಾಜ ಬಾಂಧವರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಕುರಿ ಕಾಯುವ ಕೆಲಸಕ್ಕೆ ಹಚ್ಚಿ ಅವರ ಭವಿಷ್ಯ ಹಾಳು ಮಾಡದೇ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸ ಬೇಕು ಎಂದು ಕರೆ ನೀಡಿದರು.ರಾಜ್ಯ ಸಂಚಾರಿ ಕುರಿಗಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಲ್ಲಪ್ಪ ಕೌಲಾಪುರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾತೆ ದುರ್ಗಾದೇವಿಯ ಆಶೀರ್ವಾದದಿಂದ ಯಾವುದೇ ಸಂಕಷ್ಟ ಇಲ್ಲದೇ ಕುರಿಗಾರರ ಬದುಕು ನಡೆಸುತ್ತಿದ್ದು, ಪ್ರತಿ ವರ್ಷ ತಪ್ಪದೇ ಜಾತ್ರೆ ಆಚರಿಸುತ್ತಿದ್ದೇವೆ ಎಂದರು.ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಜಗದೀಶ ತಂಬಾಕದ, ಜಿ.ಪಂ. ಸದಸ್ಯೆ ಬಸಮ್ಮ ಅಬಲೂರ, ಬಿಜೆಪಿ ಮುಖಂಡರಾದ ರಾಜು ಪೇಟಕರ, ಮಹೇಂದ್ರ ಬಡಳ್ಳಿ, ಗುರುಶಾಂತ ಯತ್ತಿನಹಳ್ಳಿ, ದಾನಪ್ಪ ಗಂಟೇರ, ಕಲ್ಯಾಣಕುಮಾರ ಶೆಟ್ಟರ, ದುಶ್ಯಂತ ನಾಗರವಳ್ಳಿ, ಮಾರುತಿ ಹರಿಹರ, ಶಂಭಣ್ಣ ಚಿಂದಿ, ಮೈಲಾರಪ್ಪ ದಿಂದೇರ, ಉಮೇಶ ಬಣಕಾರ ಮೊದಲಾದವರು ಉಪಸ್ಥಿತರಿದ್ದರು. ಕುಮಾರ ಶಿರಳ್ಳಿ ಸ್ವಾಗತಿಸಿ, ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.