ವೈದ್ಯನ ಮೌಢ್ಯಕ್ಕೆ ಹಸುಳೆ ಬಲಿ

ಬುಧವಾರ, ಮೇ 22, 2019
24 °C

ವೈದ್ಯನ ಮೌಢ್ಯಕ್ಕೆ ಹಸುಳೆ ಬಲಿ

Published:
Updated:

ಬೀಜಿಂಗ್, (ಪಿಟಿಐ): ಚೀನಾದ ವೈದ್ಯರೊಬ್ಬರ ಮೌಢ್ಯಕ್ಕೆ ನವಜಾತ ಶಿಶುವೊಂದು ಬಲಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲೀ ಕ್ಜಿಯಾಕಿನ್ ಎಂಬ ತುಂಬು ಗರ್ಭಿಣಿ ಹೆರಿಗೆಗಾಗಿ ಯಾಂಗ್‌ಜಿಯಾಂಗ್ ನಗರದ ಪೀಪಲ್ಸ್ ಆಸ್ಪತ್ರೆಗೆ ಆಗಸ್ಟ್ 12ರಂದು ದಾಖಲಾಗಿದ್ದರು. ಅಂದು ಹೆರಿಗೆಯಾಗದ ಕಾರಣ ಆ.13ರಂದು ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯರನ್ನು ಕೋರಿದ್ದರು.  ಅಂದು ಚೀನಾದಲ್ಲಿ `ಭೂತದ ಹಬ್ಬ~ ಇದ್ದಕಾರಣ ಶಸ್ತ್ರಚಿಕಿತ್ಸೆ ಮಾಡಲು ವೈದ್ಯ ಝೆಂಗ್ ಯುನ್ನಾ ನಿರಾಕರಿಸಿದರು. 13 ಸಂಖ್ಯೆ ಶುಭಸೂಚಕವಲ್ಲ ಮತ್ತು`ಭೂತದ ಹಬ್ಬ~ದ ದಿನ ಹುಟ್ಟುವ ಮಗು ಅಪಶಕುನ ಎಂಬುದು ಅವರ ನಂಬಿಕೆಯಾಗಿತ್ತು.ಹೀಗಾಗಿ ಮರು ದಿನ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಮಗು ಮೂರು ದಿನಗಳ ನಂತರ ಸಾವನ್ನಪ್ಪಿತು. ಇದಕ್ಕೆ ವೈದ್ಯರ ಮೂಢನಂಬಿಕೆಯೇ ಕಾರಣ ಎಂದು ದೂರಿ ಮಹಿಳೆ ಮತ್ತು ಕುಟುಂಬದವರು ಭಾರಿ ಮೊತ್ತದ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.ಇದನ್ನು ನಿರಾಕರಿಸಿರುವ ವೈದ್ಯರು, ಗರ್ಭಿಣಿ ಕುಟುಂಬದ ಕೋರಿಕೆಯ ಮೇರೆಗೆ ತಾವು ಶಸ್ತ್ರಚಿಕಿತ್ಸೆಗೆ ವಿಳಂಬ ಮಾಡಿದ್ದಾಗಿ ಹೇಳಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry