ರಿಪ್ಪನ್ಪೇಟೆ: ಸಮಾಜದ ಓರೆ-ಕೋರೆಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುವಲ್ಲಿ ವ್ಯಂಗ್ಯಚಿತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ವ್ಯಂಗ್ಯ ಚಿತ್ರಕಾರ ಗಂಗಾಧರ ಅಡ್ಡೇರಿ ಅವರು ಹೇಳಿದರು.ಹೊಸನಗರ ಕೊಡಚಾದ್ರಿ ಪದವಿ ಕಾಲೇಜಿನ ವತಿಯಿಂದ ಕೋಡೂರು- ಯಳಗಲು ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ವ್ಯಂಗ್ಯಚಿತ್ರ ಪ್ರಾತ್ಯಕ್ಷಿಕೆ ಹಾಗೂ ವ್ಯಂಗ್ಯ ಚಿತ್ರರಚನೆ ಮತ್ತು ಅವುಗಳ ಮಹತ್ವದ ಕುರಿತು ಮಾಹಿತಿ ನೀಡಿದರು.

ನೂರು ಶಬ್ದಗಳಲ್ಲಿನ ಅರ್ಥ ಒಂದು ವ್ಯಂಗ್ಯಚಿತ್ರ ಕೇವಲ ಎರಡು ಗೆರೆಗಳಲ್ಲಿ ಹೇಳಬಲ್ಲದು.ಸಮಾಜದ ಅಂಕುಡೊಂಕುಗಳಿಗೆ ‘ಸಿಹಿಗುಳಿಗೆ’ ಯಂತೆ ವ್ಯಂಗ್ಯಚಿತ್ರ ಮಾಧ್ಯಮದ ಕಾರ್ಯ ನಿರ್ವಹಿಸುತ್ತದೆ ಎಂದರು. ‘ಪ್ರಜಾವಾಣಿ’ಯ ಪಿ. ಮಹಮದ್ ಅವರ ಕಾರ್ಟೂನ್ಗಳು ಅತ್ಯಂತ ಪ್ರಭಾವಿ ಹಾಗೂ ಜನ ಸಾಮಾನ್ಯರ ಧ್ವನಿಯಾಗಿ ನಿಂತಿವೆ ಎಂದರು.

ಇದೇ ಸಂದಂರ್ಭದಲ್ಲಿ ‘ಪ್ರಜಾವಾಣಿ’ ಪತ್ರಿಕೆಯ ಒಳಶುಂಠಿ ಹಾಗೂ ‘ಸುಧಾ’, ‘ಮಯೂರ’ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ವ್ಯಂಗ್ಯಚಿತ್ರಗಳ ಪ್ರದರ್ಶನ ಸಹ ಏರ್ಪಡಿಸಿದ್ದರು. ಡಾ.ಕೆ. ಪ್ರವೀಣ್ ದಂತ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಎನ್ಎಸ್ಎಸ್ ಶಿಬಿರದ ನಿರ್ದೇಶಕ ನಳಿನಚಂದ್ರ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಮತ್ತು ಸಹ ಶಿಕ್ಷಕ ಪಾಲಾಕ್ಷಪ್ಪ ಹಾಗೂ ದಾದವಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.