ಮಂಗಳವಾರ, ಮಾರ್ಚ್ 2, 2021
31 °C

ವ್ಯಕ್ತಿತ್ವ ಕಾಡುವ ಕ್ಯಾನ್ಸರ್

ಡಾ. ಶ್ರೀಲಕ್ಷ್ಮಿ ಪಿ. Updated:

ಅಕ್ಷರ ಗಾತ್ರ : | |

ವ್ಯಕ್ತಿತ್ವ ಕಾಡುವ ಕ್ಯಾನ್ಸರ್

ಹೃದ್ರೋಗದ ನಂತರ ಪ್ರಪಂಚದಾದ್ಯಂತ ಹೆಚ್ಚಿನ ಜನರ ಸಾವಿಗೆ ಕಾರಣವಾಗುತ್ತಿರುವ ಎರಡನೇ ಕಾಯಿಲೆ ಕ್ಯಾನ್ಸರ್. ಕ್ಯಾನ್ಸರ್‌ಗೆ ಕಾರಣಗಳು ಬಹಳಷ್ಟಿದ್ದರೂ ಇತ್ತೀಚಿನ ಸಂಶೋಧನೆಗಳು ಕ್ಯಾನ್ಸರ್‌ಕಾರಕ ವ್ಯಕ್ತಿತ್ವ ಅಥವಾ Cancer Prone Personality  ಕುರಿತು ಹೆಚ್ಚಿನ ಬೆಳಕು ಚೆಲ್ಲಿವೆ. ಇಂತಹ ವ್ಯಕ್ತಿತ್ವ ದೋಷ ಹೊಂದಿರುವವರು ಸಾಮಾನ್ಯವಾಗಿ ಈ ಕೆಳಗಿನ ವರ್ತನೆಗಳನ್ನು ಹೊಂದಿರುತ್ತಾರೆ.ದ್ವೇಷ ಅಥವಾ ಸೇಡಿನ ಮನೋಭಾವಸ್ವಮರುಕ, ಉತ್ತಮ ಸಹಸಂಬಂಧಗಳನ್ನು ಹೊಂದುವಲ್ಲಿ ವಿಫಲರಾಗುವುದು, Poor self image

ಬಾಲ್ಯದಲ್ಲಿನ ಭಾವನಾತ್ಮಕ ಸಂಘರ್ಷಗಳು ಬೆಳೆದಂತೆ ಒಂಟಿತನ, ಆತಂಕ ಮತ್ತು ತಿರಸ್ಕಾರ ಮನೋಭಾವಗಳಿಗೆ ಕಾರಣವಾಗುವುದು.

ಲಾರೆನ್ಸ್ ಮತ್ತು ಲೆಶಾನ್ ಎಂಬ ಮನೋವಿಜ್ಞಾನಿಗಳು 1956ರಲ್ಲಿಯೇ ಕ್ಯಾನ್ಸರ್ ರೋಗಿಗಳ ಮಾನಸಿಕ ಲಕ್ಷಣಗಳ ಕುರಿತು ಸಂಶೋಧನೆ ನಡೆಸಿದಾಗ ಕಂಡು ಬಂದ ಅಂಶಗಳೆಂದರೆ- ಕ್ಯಾನ್ಸರ್ ಪತ್ತೆಗೂ ಮುನ್ನ ಈ ವ್ಯಕ್ತಿಗಳು ವೈವಾಹಿಕ ಸಂಬಂಧಗಳ ಕಡಿತ, ಭಾವನೆಗಳನ್ನು ವ್ಯಕ್ತಿಪಡಿಸುವಲ್ಲಿ ತೊಡಕು, ನಕಾರಾತ್ಮಕ ಭಾವನೆ, ತಂದೆ ತಾಯಿಯೊಂದಿಗಿನ ಸಂಬಂಧಗಳಲ್ಲಿ ತೊಡಕು ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದರು.ಇಂತಹ ಸನ್ನಿವೇಶ ಅಥವಾ ಕೆಲವು ವ್ಯಕ್ತಿತ್ವ ದೋಷಗಳು ವ್ಯಕ್ತಿಯಲ್ಲಿ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತವೆ. ಅಧಿಕ ಒತ್ತಡವು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವುದರಿಂದ ಕೆಲವು ವಿಕಾರ ಜೀವಕೋಶ (mutant cells) ಗಳ ಬೆಳವಣೆಗೆಯನ್ನು ಅದು ತಡೆಯಲಾಗುವುದಿಲ್ಲ. ಇಂತಹವು ಮುಂದೆ ಕ್ಯಾನ್ಸರ್ ಜೀವಕೋಶಗಳಾಗಿ ಪರಿವರ್ತನೆಯಾಗುತ್ತವೆ. ಇದಕ್ಕೆ ಆಧಾರವಾಗಿ ಸೈಕೋಆಂಕಾಲಜಿ (Psycho Ancology) ಮತ್ತು ಸೈಕೋನ್ಯೂರೋಇಮ್ಯೂನಾಲಜಿ (Psychoneuroimmunology) ವಿಷಯಗಳಲ್ಲಿನ ಸಂಶೋಧನೆಗಳು ಇದನ್ನು ಪುಷ್ಟೀಕರಿಸುತ್ತವೆ.ಸಾಮಾನ್ಯವಾಗಿ ಮನಸ್ಸು ಶಾಂತ ಸ್ಥಿತಿಯಲ್ಲಿದ್ದಾಗ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಹಾಗಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒತ್ತಡ ನಿರ್ವಹಣೆ ಮತ್ತು ಮನಸ್ಸಿನ ಉದ್ವಿಗ್ನತೆಯನ್ನು ನಿಯಂತ್ರಿಸಬಲ್ಲ ಕೆಲವು ಸೈಕೊ ಥೆರಪಿಗಳ (Psycho Therapy) ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.