ಮಂಗಳವಾರ, ಮೇ 24, 2022
21 °C

ವ್ಯಾಲ್ಯೂಮಾಲ್ ಶಾಪೋಹಾಲಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈಟ್‌ಫೀಲ್ಡ್‌ನಲ್ಲಿರುವ ಫೋರಂ ವ್ಯಾಲ್ಯೂಮಾಲ್ ಹಬ್ಬದ ಅಂಗವಾಗಿ ನವೆಂಬರ್1ರ ವರೆಗೆ ಶಾಪೋಹಾಲಿಕ್ ಫೆಸ್ಟಿವಲ್ ಆಯೋಜಿಸಿದೆ.ಶಾಪೋಹಾಲಿಕ್ ಚಾಲೆಂಜ್ ಈ ಮೇಳದ ಪ್ರಮುಖ ಆಕರ್ಷಣೆ. ಜನರಲ್ಲಿರುವ ಖರೀದಿ ಬಯಕೆಯನ್ನು ಮತ್ತಷ್ಟು ಪ್ರಚೋದಿಸುವುದು ಇದರ ಗುರಿ. ಈ ಮೇಳದಲ್ಲಿ ಅತಿ ಹೆಚ್ಚು ಖರೀದಿ ಮಾಡುವ ಮೊದಲ ಮೂರು ಗ್ರಾಹಕರಿಗೆ ಬಗೆಬಗೆಯ ಆಕರ್ಷಕ  ಬಹುಮಾನಗಳು ದೊರೆಯುತ್ತವೆ.  ಐದು ಸಾವಿರ ರೂಪಾಯಿಗೂ ಮೇಲ್ಪಟ್ಟು ಖರೀದಿ ಮಾಡುವ ಗ್ರಾಹಕರು ನಿಗದಿತ ಫಾರಂ ತುಂಬುವ ಮೂಲಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಹುದು. ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಅವರಿಗೆ ಫೋರಂ ವ್ಯಾಲ್ಯೂ ಮಾಲ್ ಕರೆನ್ಸಿ ಮತ್ತು 30 ನಿಮಿಷ ಸಮಯ ನೀಡಲಾಗುವುದು.

 

ಇಷ್ಟರ ಒಳಗೆ ಯಾರು ಅತಿ ಹೆಚ್ಚು ಖರೀದಿ ಮಾಡು ತ್ತಾರೆ ಅವರನ್ನು ವಿಜೇತರು ಎಂದು ಘೋಷಿಸಲಾಗುವುದು. ಅವರಿಗೆ ಮಾಲ್‌ನಲ್ಲಿ ಉಚಿತ ಶಾಪಿಂಗ್ ಜತೆಗೆ ಕಾಂಪ್ಲಿಮೆಂಟರಿ ಪಾರ್ಕಿಂಗ್ ಮತ್ತು ಡಿನ್ನರ್ ವೋಚರ್ ದೊರೆಯುತ್ತದೆ.ಇದಲ್ಲದೆ ವಾರಾಂತ್ಯ ಜಾನಪದ ನೃತ್ಯ, ಅಕ್ರೊಬ್ಯಾಟ್ಸ್, ಡ್ರ್ಯಾಗನ್ ಡ್ಯಾನ್ಸರ್ಸ್‌ ನೃತ್ಯದ ಮೋಡಿ ಗ್ರಾಹಕರ ಖುಷಿಯನ್ನು ಹೆಚ್ಚಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.