ಭಾನುವಾರ, ಮೇ 16, 2021
28 °C

ಶಬಾನಾಗೆ ನಾಲ್ಕನೇ ಡಾಕ್ಟರೇಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಾಲಿವುಡ್‌ನ ಹಿರಿಯ ನಟಿ ಶಬಾನಾ ಆಜ್ಮಿ ಕೆನಡಾದ ವ್ಯಾಂಕೋವರ್‌ನ ಸಿಮನ್ ಫ್ರೆಸರ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆಯಾಗಿದ್ದಾರೆ.



ಇದು ಅವರಿಗೆ ಸಂದ ನಾಲ್ಕನೇ ಗೌರವ ಡಾಕ್ಟರೇಟ್ ಪದವಿಯಾಗಿದೆ. 61 ವರ್ಷದ ಆಜ್ಮಿ  ಅವರು ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಜಾಧವ್‌ಪುರ ವಿಶ್ವವಿದ್ಯಾಲಯ (2003), ಬ್ರಿಟನ್‌ನ ಯಾರ್ಕ್‌ಷೈರ್‌ನ ಲೀಡ್ಸ್ ಮೆಟ್ರೊಪಾಲಿಟನ್ ವಿ.ವಿ (2007) ಹಾಗೂ 2008ರಲ್ಲಿ ಜಾಮಿಯಾ ಮಿಲಿಯಾ ವಿ.ವಿ ಡಾಕ್ಟರೇಟ್ ಪದವಿ ನೀಡಿದ್ದವು. ಬುಧವಾರ ನಡೆಯುವ ಸಮಾರಂಭದಲ್ಲಿ ಶಬನಾ ಪದವಿ ಸ್ವೀಕರಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.