ಶರದ್ ದ್ರಾವಿಡ್ ನಿಧನ

7

ಶರದ್ ದ್ರಾವಿಡ್ ನಿಧನ

Published:
Updated:
ಶರದ್ ದ್ರಾವಿಡ್ ನಿಧನ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ತಂದೆ ಶರದ್ ದ್ರಾವಿಡ್ (79) ಇಲ್ಲಿನ ತಮ್ಮ ನಿವಾಸದಲ್ಲಿ ಬುಧವಾರ ಸಂಜೆ ನಿಧನರಾದರು. ಅವರು ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 10.30ಕ್ಕೆ ಕಾಕ್ಸ್‌ಟೌನ್‌ನ ಕಲ್ಲಹಳ್ಳಿ ರುದ್ರಭೂಮಿಯಲ್ಲಿ ನಡೆಯಲಿದೆ.ಅವರಿಗೆ ಪತ್ನಿ ಪುಷ್ಪಾ, ಪುತ್ರರಾದ ದ್ರಾವಿಡ್ ಹಾಗೂ ವಿಜಯ್ ಇದ್ದಾರೆ. ಪುಷ್ಪಾ ಅವರು ವಾಸ್ತುಶಿಲ್ಪಿ.ಮೂಲತಃ ಮಧ್ಯಪ್ರದೇಶದ ಇಂದೋರ್‌ನವರಾದ ಶರದ್, ಕಿಸಾನ್ ಜಾಮ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ವಿಶ್ವವಿದ್ಯಾಲಯ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದರು.ಸಂತಾಪ: ಶರದ್ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry