ಗುಂಡ್ಲುಪೇಟೆ: ರಾಜ್ಯದಲ್ಲಿನ ವೀರಶೈವ ಧರ್ಮದ ವಿರುದ್ಧ ಪ್ರೊ. ಭಗವಾನ್ ಮತ್ತು ಪ್ರೊ.ಜಿ.ಕೆ. ಗೋವಿಂದರಾವ್ ನೀಡಿರುವ ಹೇಳಿಕೆಗಳು ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರವಾಗಿದೆ ಎಂದು ಪಡಗೂರು ಅಡವಿ ಮಠಾಧ್ಯಕ್ಷ ಶಿವಲಿಂಗೇಂದ್ರ ಸ್ವಾಮೀಜಿ ಮಂಗಳವಾರ ಹೇಳಿದರು.

ತಾಲ್ಲೂಕಿನ ತೆರಕಣಾಂಬಿ ಗ್ರಾಮ ದಲ್ಲಿ ವೀರಶೈವ ಸಮಾಜದ ಹಿತರ ಕ್ಷಣಾ ಸಮಿತಿ ಹಮ್ಮಿ ಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

ಲಿಂಗಾಯಿತರು ಭಯೋತ್ಪಾದನೆ ಯಲ್ಲಿ ತೊಡಗಿದ್ದಾರೆ ಹಾಗೂ ವೀರಶೈವ ಮಠಗಳು ನಾಶವಾಗ ಬೇಕೆಂದು ನೀಡಿರುವ ಹೇಳಿಕೆ ಕಪೋಲ ಕಲ್ಪಿತವಾಗಿದೆ, ವೀರಶೈವ ಮಠಗಳ ಕೊಡುಗೆ ಇಡೀ ವಿಶ್ವಕ್ಕೆ ಗೊತ್ತಿದೆ ಇದನ್ನು ಚಿಂತಕರು ಅರಿಯಬೇಕೆಂದು ಸಲಹೆ ನೀಡಿದರು.

ಇಡೀ ವೀರಶೈವ ಸಮಾಜಕ್ಕೆ ಅವಮಾನ ಮಾಡಿರುವ ಇವರು ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸ ಲಾಗು ವುದು ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕಿನಲ್ಲಿ ವೀರಶೈವರು ಒಗ್ಗಟ್ಟಾಗಿ ಇಂತಹ ಸಂದರ್ಭಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಪ್ರತಿಭಟನಾಕಾರರು ಬಲವಂತವಾಗಿ ಕೆಲವು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ ಪರಿಣಾಮ ಈ ಸಂದರ್ಭದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಬಸ್ಗಳಿಗೆ ಕಲ್ಲು ತೂರಾಟ ನಡೆಸಲು ಯತ್ನಿಸಿದಾಗ ವೃತ್ತ ನಿರೀಕ್ಷಕ ಅಶೋಕ್ಕುಮಾರ್ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಸೋಮಹಳ್ಳಿ ಶಿಲಾಮಠದ ಸಿದ್ದಮಲ್ಲಪ್ಪಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಸೋಮ, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಸ್. ನಂಜಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಿ.ಎಸ್. ನಿರಂಜನಕುಮಾರ್, ಉಪಾಧ್ಯಕ್ಷ ಕಬ್ಬಹಳ್ಳಿ ಕೆ.ಎಸ್. ಮಹೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಪಿ. ಮಹಾದೇವಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪ್ರೇಮಾ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಿ. ಮಡಿವಾಳಪ್ಪ, ಮಲೆ ಮಹ ದೇಶ್ವರ ಬೆಟ್ಟದ ಮಾಜಿ ಧರ್ಮದರ್ಶಿ ಡಿ.ಎಸ್. ಸಿದ್ದಪ್ಪ, ತೆರಕಣಾಂಬಿ ಹುಂಡಿ ಗ್ರಾಮದ ಯಜಮಾನ್ ಮಲ್ಲಪ್ಪ, ಗೌಡಿಕೆ ಗುಂಡಪ್ಪ, ಗ್ರಾಮ ಪಂಚಾ ಯಿತಿ ಸದಸ್ಯ ಜಲೇಂದ್ರ, ಈಶ್ವರ್, ಶಿವಕುಮಾರ್, ಟಿ.ಎಸ್. ಮಹ ದೇವಸ್ವಾಮಿ, ಮಹೇಶ್, ರಾಮು ಹಾಗೂ ಸುತ್ತಮುತ್ತಲಿನ ಗ್ರಾಮಗಳ ವೀರಶೈವ ಮುಖಂಡರುಗಳು ಭಾಗವಹಿಸಿದ್ದರು.

ತೆರಕಣಾಂಬಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಬಸವಣ್ಣ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.