ಸೋಮವಾರ, ಮೇ 17, 2021
30 °C

ಶಾಂತಿ ಸಭೆ ವೇಳೆ ಉದ್ರಿಕ್ತ ಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪ: ಮತೀಯ ಗಲಭೆಗೆ ಕಾರಣವಾಗಬಹುದಾಗಿದ್ದ ಪ್ರಕರಣವೊಂದನ್ನು ಪೊಲೀಸರು ಶಾಂತಿ ಸಭೆ ನಡೆಸುವ ಮೂಲಕ ಬಗೆಹರಿಸಿದ ಘಟನೆ ಮಂಗಳವಾರ ನಡೆಯಿತು.ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಶಾಂತಿ ಸಭೆಗೆ ಮುನ್ನ ತಾಲ್ಲೂಕಿನ ಕುದುರೆಗುಂಡಿಯಲ್ಲಿ ಅಹಿತಕರ ಘಟನೆಯೊಂದು ನಡೆಯಿತು.ಕುದುರೆಗುಂಡಿಯ ದೇವಸ್ಥಾನ ಒಂದರ ಪೈಪ್‌ಗಳನ್ನು ಕಳವು ಮಾಡುತ್ತಿದ್ದ ಯುವಕನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದರು. ಅದೇ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಅಲ್ಪಸಂಖ್ಯಾತ ಮುಖಂಡ ಅಬ್ದುಲ್ ಖಾದರ್ ಆಗಮಿಸಿದಾಗ ಉದ್ರಿಕ್ತ ಯುವಕರು ಹಲ್ಲೆ ಮಾಡಿ ಅವರ ಕಾರಿನ ಗಾಜನ್ನು ಪುಡಿಗಟ್ಟಿದರು. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.ನಂತರ ಸರ್ಕಲ್ ಇನ್ಸ್‌ಪೆಕ್ಟರ್ ಸೂರಜ್, ಠಾಣಾಧಿಕಾರಿ ಮಹೇಶ್ ಸರ್ವಪಕ್ಷಗಳ ಮುಖಂಡರ ಶಾಂತಿ ಸಭೆ ನಡೆಸಿದರು. ಶಾಂತಿ ಸಭೆ ವೇಳೆಗೆ ನೂರಾರು ಯುವಕರು ಠಾಣೆ ಎದುರು ಜಮಾಯಿಸಿದರು. ಪಟ್ಟಣದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.ರಂಜಾನ್ ಹಬ್ಬದಂದು ಕುದುರೆಗುಂಡಿಯಲ್ಲಿ ಹಿಡಿಯಲಾದ ದನದ ಮಾಂಸದ ಪ್ರಕರಣದ ಸಂಬಂಧ ಅಕ್ರಮ ಸಾಗಾಣೆದಾರರ ಮೇಲೆ ನೀಡಲಾದ ದೂರಿನ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು.ಬಿಜೆಪಿ ಯುವ ಮೋರ್ಚಾ ಕ್ಷೇತ್ರಾಧ್ಯಕ್ಷ ಹೊಸೂರು ದಿನೇಶ್, ಯುವ ಕಾಂಗ್ರೆಸ್ ಮುಖಂಡ ಸಚಿನ್ ಮೀಗ, ಬಜರಂಗದಳದ ಶ್ರೀನಿವಾಸಶೆಟ್ಟಿ, ಶ್ರೀರಾಮ ಸೇನೆಯ ಮಹೇಶ್‌ಕುಮಾರ್, ಕಾಂಗ್ರೆಸ್‌ನ ಹೆಚ್.ಎಲ್.ದೀಪಕ್, ಅರ್ಡಾಕ್ ಎಸ್ಟೇಟ್ ವ್ಯವಸ್ಥಾಪಕ ರಾಮಣ್ಣ, ಅಲ್ಪಸಂಖ್ಯಾತ ಮುಖಂಡರಾದ ಅಬ್ದುಲ್ ಖಾದರ್, ಅಲ್ತಾಪ್ ಅಹಮದ್, ತಾ.ಪಂ.ಸದಸ್ಯ ರಮೇಶ್, ಸುಧಾಕರರಾವ್ ಪಾಲ್ಗೊಂಡರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.