ಶನಿವಾರ, ಜನವರಿ 18, 2020
19 °C

ಶಾಕಾಹಾರಿಯಾಗುತ್ತಿರುವ ರವೀನಾ ಟಂಡನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರವೀನಾ ಟಂಡನ್ ಇದೀಗ ಶಾಕಾಹಾರಿಯಾಗಲು ಗಂಭೀರವಾಗಿ ಪ್ರಯತ್ನಿಸುತ್ತಿದ್ದಾರಂತೆ. ‘ಸದ್ಯಕ್ಕೆ ಮೀನು ಮಾತ್ರ ತಿನ್ನುತ್ತಿರುವೆ. ಚಿಕನ್‌ ಸಹ ಬಿಟ್ಟಿರುವೆ. ನಿಧಾನಕ್ಕೆ ಮೀನನ್ನೂ ನಿಷೇಧಿತ ಪಟ್ಟಿಗೆ ಸೇರಿಸುವೆ’ ಎಂದೆಲ್ಲ ರವೀನಾ ಟಂಡನ್‌ ಹೇಳಿಕೊಂಡಿದ್ದಾರೆ.ಕಳೆದ ತಿಂಗಳು ಎರಡು ಬೀದಿನಾಯಿಗಳನ್ನು ದತ್ತು ಪಡೆದಿರುವ ರವೀನಾ, ಪ್ರಾಣಿದಯೆಯತ್ತ ಒಲವು ತೋರುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಕುರಿಮರಿಯನ್ನು ಕಟುಕರು ಸಾಯಿಸುವುದನ್ನು ಕಂಡ ನಂತರ ಮಟನ್‌ ಸೇವಿಸುವುದನ್ನು ಬಿಟ್ಟುಬಿಟ್ಟಿದ್ದರಂತೆ ರವೀನಾ.ಈಗ ಏಡಿ, ಸಿಗಡಿ ಮುಂತಾದ ಕಡಲು ಖಾದ್ಯಗಳನ್ನು ತಿನ್ನುವುದನ್ನು ಬಿಟ್ಟಿದ್ದಾರೆ. ಒಮ್ಮೆ ಏಡಿ ಮತ್ತು ಸಿಗಡಿಗಳನ್ನು ಬಳಸಿ ಅಡುಗೆ ಮಾಡುವ ವಿಧಾನ ನೋಡಿದೆ. ಕುದಿಯುವ ನೀರಿನಲ್ಲಿ ಜೀವಂತ ಪ್ರಾಣಿಗಳನ್ನು ಹಾಕುವುದು ನರಕ ಸದೃಶವೆನಿಸಿತು. ಅದೇ ಕಾರಣಕ್ಕೆ ಅವುಗಳನ್ನು ತಿನ್ನುವುದನ್ನು ಬಿಟ್ಟೆ. ಈಗೀಗ ಮೀನು ತಿನ್ನುವುದೂ ಅಪರೂಪ. ಪರಿಪೂರ್ಣ ಶಾಕಾಹಾರಿ ಆಗಲು ಇನ್ನು ಕೆಲದಿನಗಳು ಮಾತ್ರ ಉಳಿದಿವೆ ಎನ್ನುತ್ತಾರೆ ರವೀನಾ.

ಪ್ರತಿಕ್ರಿಯಿಸಿ (+)