ಸೋಮವಾರ, ಮೇ 17, 2021
28 °C

ಶಾಲೆಯಲ್ಲಿ ಮಕ್ಕಳಿಲ್ಲ, ಹೊಸ ಕಟ್ಟಡಗಳಿಗೆ ಬರವಿಲ್ಲ!

ಪ್ರಜಾವಾಣಿ ವಾರ್ತೆ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಶಾಲೆಯಲ್ಲಿ ಮಕ್ಕಳಿಲ್ಲ, ಹೊಸ ಕಟ್ಟಡಗಳಿಗೆ ಬರವಿಲ್ಲ!

ಕುಷ್ಟಗಿ: `ಅದೊಂದು ಉರ್ದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂವರು ಶಿಕ್ಷಕರಿದ್ದರೂ 21 ಮಕ್ಕಳು, ಮೂವರು ಶಿಕ್ಷಕರು, ನಾಲ್ಕೈದು ಸುಸಜ್ಜಿತ ಕೋಣೆಗಳು ಹಾಜರಾತಿ 10-12 ಮಾತ್ರ. ಹೋಗಲಿ ಬಂದವರಾದರೂ ಮಾಧ್ಯಮದಲ್ಲಿ ಕಲಿಯುತಿದ್ದಾರೆಂದರೆ ಅದೂ ಇಲ್ಲ, ಉರ್ದು ಶಬ್ದಗಳನ್ನು ಬರೆಯಲಾಗದು ಓದಲೂ ಆಗದಂಥ ಸ್ಥಿತಿ. ಇಲ್ಲಿ ಮಾಧ್ಯವಾಗಿರುವ ಉರ್ದು ಭಾಷೆ ಮಕ್ಕಳ ಪಾಲಿಗೆ ಮಾತ್ರ ಕಬ್ಬಿಣದ ಕಡಲೆ ಅದಕ್ಕೆ ವ್ಯತಿರಿಕ್ತವಾಗಿ ಮಕ್ಕಳು ಕನ್ನಡ ಓದು ಬರಹದಲ್ಲಿ ಸ್ವಾಭಾವಿಕಾಗಿ ಬೆರೆಯುತ್ತಾ~!?ತಾಲ್ಲೂಕಿನ ಹಿರೇಮನ್ನಾಪೂರ ಗ್ರಾಮದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ದುಸ್ಥಿತಿಗೆ ಹಿಡಿದ ಕನ್ನಡಿ ಇದು. ಭಾಷಾ ಅಲ್ಪಸಂಖ್ಯಾತರ ಮಕ್ಕಳ ಅನುಕೂಲಕ್ಕಾಗಿ ಉರ್ದು ಮಾಧ್ಯಮ ಆರಂಭಿಸಿದ್ದರೂ ಮಕ್ಕಳೇ ಇಲ್ಲದಂತಾಗಿರುವ ಈ ಶಾಲೆ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಗ್ರಾಮದಲ್ಲಿ ಸಾಕಷ್ಟು ಸಂಖ್ಯೆ ಅಲ್ಪಸಂಖ್ಯಾತ ಕುಟುಂಬಗಳಿದ್ದರೂ ಬಹುತೇಕ ಮಕ್ಕಳು ಹೋಗುವುದು ಕನ್ನಡ ಮಾಧ್ಯಮ ಶಾಲೆಗಳಿಗೆ ಎಂಬುದು ಅಚ್ಚರಿಯ ಸಂಗತಿಯಲ್ಲ.1ನೇ ತರಗತಿಯ 5, 2ನೇ ತರಗತಿಗೆ 6, 3ನೇ ತರಗತಿಗೆ 4, 4ನೇ ತರಗತಿಗೆ 4 ಮತ್ತು 5ನೇ ತರಗತಿಗೆ ಕೇವಲ 2 ಮಕ್ಕಳು ಮಾತ್ರ ದಾಖಲಾತಿ ಇದ್ದರೆ ಕೇವಲ 10-12 ಮಕ್ಕಳು ಒಬ್ಬ (ಕನ್ನಡ) ಶಿಕ್ಷಕಿ ಮಾತ್ರ ಶಾಲೆಯಲ್ಲಿದ್ದುದು ಮಂಗಳವಾರ ಸುದ್ದಿಗಾರರು ಶಾಲೆಗೆ ಭೇಟಿ ನೀಡಿದಾಗ ಕಂಡುಬಂದಿತು.ಗ್ರಾಮದಲ್ಲಿ ಸಾಕಷ್ಟು ಸಂಖ್ಯೆ ಮಕ್ಕಳು ಇದ್ದರೂ ಶಾಲೆಗೆ ಏಕೆ ಬರುವುದಿಲ್ಲ ಎಂದು ಗ್ರಾಮಸ್ಥರನ್ನು ಕೇಳಿದರೆ `ಉರ್ದು ಸಾಲ್ಯಾಗ ಓದೀದ್ರ ಮುಂದ ಸರ್ಕಾರಿ ನೌಕರಿ ಸಿಗಂಗಿಲ್ಲಂತ ಮುಸಲ್ಮಾನ್ರು ತಮ್ಮ ಮಕ್ಳನ್ನ ಕನ್ನಡಾ ಸಾಲಿಗೆ ಕಳ್ತಾರ‌್ರಿ~ ಎಂದು ಹೇಳಿದ್ದು ಅಚ್ಚರಿ ತಂದಿತು.ಮಕ್ಕಳು ಬಾರದಿರುವುದು ಒಂದೆಡೆಯಾದರೆ ಇಲ್ಲಿ ಮೂಲ ಸೌಕರ್ಯಗಳಿಗೆ ಕೊರತೆ ಇಲ್ಲ, ನಾಲ್ಕು ಸುಸಜ್ಜಿತ ಕೊಠಡಿ, ಬಿಸಿಯೂಟದ ಕೋಣೆ, ಆಟದ ಮೈದಾನ ನಿರ್ಮಾಣವಾಗಿದೆ. ಆದರೆ ಅವೆಲ್ಲ ಮಕ್ಕಳಿಲ್ಲದೇ ಭಣಗುಡುತ್ತವೆ. ಅಲ್ಲದೇ ಮೂರು ಹೊಸ ಕಟ್ಟಡಗಳು ಬಳಕೆಯೇ ಇಲ್ಲ, ಹೊಸ ಕಟ್ಟಡವಾದರೂ ಬಾಗಿಲು ಕಿಟಗಳು ನಾಪತ್ತೆಯಾಗಿದ್ದು ಹಾಳು ಬಿದ್ದಿವೆ. ಅಷ್ಟಾದರೂ ಪಕ್ಕದಲ್ಲಿ ಮತ್ತೊಂದು ಕೊಸ ಕೊಠಡಿ ನಿರ್ಮಾಣಕಾರ್ಯ ನಡೆದಿದೆ. ಪೂರ್ಣಗೊಂಡಿರುವ ಅಂಗನವಾಡಿ ಕಟ್ಟಡವಂತೂ ಬಾಗಿಲು ತೆರೆದಿಲ್ಲ. ಮಕ್ಕಳಿಲ್ಲದ್ದರೂ ಶಿಕ್ಷಣ ಇಲಾಖೆ ಅನಗತ್ಯವಾಗಿ ಕೊಠಡಿಗಳ ನಿರ್ಮಾಣದಲ್ಲಿ ತೊಡಗಿರುವುದು ಅಚ್ಚರಿ ಮೂಡಿಸಿದೆ.ಇಲ್ಲಿಯ ಮಕ್ಕಳಿಗೆ ಉರ್ದು ಭಾಷೆಯ ಪರಿಚಯವೇ ಇಲ್ಲ, ಉರ್ದು ಶಿಕ್ಷಕರಿದ್ದರೂ ಮಕ್ಕಳಿಗೆ ಅಕ್ಷರಜ್ಞಾನ ಇಲ್ಲದಿರುವುದು ಅಚ್ಚರಿಯ ಸಂಗತಿಯಾಗಿದೆ. ಆದರೆ  ಮೂರನೇ ತರಗತಿಯಿಂದ ಕನ್ನಡ ಭಾಷೆ ಕಲಿಸಲಾಗುತ್ತಿದ್ದರೂ 1-2ನೇ ತರಗತಿಯ ಮಕ್ಕಳು ಕನ್ನಡ ಓದುತ್ತಾರೆ.ಶಾಲೆ ಬೇಡ: ಇಲ್ಲಿ ಶಾಲೆಗೆ ಮಕ್ಕಳೇ ಬಾರದ ಕಾರಣ ನಾವೇ ಮನೆ ಮನೆಗೆ ಹೋಗಿ ಮಕ್ಕಳನ್ನು ಕರೆತಂದಿದ್ದೇವೆ. ಹಿಂದೆ ಇಲ್ಲಿ ಉರ್ದು ಶಾಲೆ ಅನಗತ್ಯ ಬಂದ್ ಮಾಡಲು ಹಿಂದೆ ಶಿಕ್ಷಕರೇ ಇಲಾಖೆಗೆ ಪತ್ರ ಬರೆದಿದ್ದರು. ಅಲ್ಲದೇ ಕಟ್ಟಡಗಳು ಬೇಡವೇ ಬೇಡ ಎಂದರೂ ಹೊಸದಾಗಿ ಮಂಜೂರು ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.