ಕಮಲಾಪುರ: ಶಾಶ್ವತ ಕುಡಿಯುವ ನೀರಿನ ಯೋಜನೆಯಡಿ ಬೆಳಕೋಟಾ ಅಣೆಕಟ್ಟೆಯಿಂದ ಕಮಲಾಪುರಕ್ಕೆ ನೀರೊ ದಗಿಸಲು ಕೂಡಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಾರ್ವಜನಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಅಮೃತ ಗೌರೆ ಮಾತನಾಡಿ, ಈ ಕುರಿತು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದೇವೆ. ಪ್ರತಿಬಾರಿ ವಿದ್ಯುತ್ ಸಮಸ್ಯೆ ಬಗ್ಗೆ ಹೇಳುತ್ತಾರೆ. ಜೆಸ್ಕಾಂಗೆ ಪಾವತಿಸಬೇಕಿದ್ದ ₹40 ಸಾವಿರ ಭರಿಸುವುದಾಗಿ ತಿಳಿಸಿದ್ದ ನಿರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಇನ್ನು ಪಾವತಿಸಿಲ್ಲ ಎಂದು ಜೆಸ್ಕಾಂ ಕಾರ್ಯನಿ ರ್ವಾಹಕ ಅಧಿಕಾರಿ ಹೇಳುತ್ತಾರೆ.

ಹೀಗಾಗಿ ನಿರಂತರ ವಿದ್ಯುತ್ ಒದಗಿಸ ಲಾಗುತ್ತಿಲ್ಲ. ಮತ್ತೊಂದೆಡೆ ಅಣೆಕಟ್ಟೆ ನೀರಿನ ಮಟ್ಟ ಕಡಿಮೆಯಾಗಿ ಇಂಟ್ಯಾಕ್ ವ್ಯೆಲ್ಗೆ ನೀರು ಸಿಗುತ್ತಿಲ್ಲ. ಇದರಿಂದಾಗಿ ಸರ್ಕಾರ ಕೋಟಿಗಟ್ಟಲೇ ಹಣ ವ್ಯಯಿಸಿ ಕೈಗೊಂಡ ಕಾಮಗಾರಿ ಪ್ರಯೋಜನವಿ ಲ್ಲದಂತಾಗಿದೆ ಎಂದರು.

ಕಮಲಾಪುರ, ನವನೀಹಾಳ, ಬೆಳಕೋಟಾ ಗ್ರಾಮಗ ಳಲ್ಲಿ ಬಾವಿ, ಬೋರವೆಲ್ಲಗಳು ಬತ್ತುತ್ತಿವೆ. ತೀವೃ ನೀರಿನ ಸಮಸ್ಯೆ ಎದುರಾಗುವ ಮುನ್ಸೂ ಚನೆಗಳಿವೆ. ಸಂಬಂಧ ಪಟ್ಟ ಅಧಿಕಾರಿ ಗಳು ಕೂಡಲೇ ಕ್ರಮ ಕೈಗೊಂಡು ನಿರಂತರ ವಿದ್ಯುತ್ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ನೀರು ಸರಬರಾಜು ಕಾರ್ಯ ನಿರ್ವಾ ಹಕ ಅಧಿಕಾರಿಗೆ ಕಾಮಗಾರಿ ಕುರಿತು ಮಾಹಿತಿ ಕೇಳಿದರೆ ‘ನೀವು ಯಾರು? ನಿಮಗೇಕೆ ಮಾಹಿತಿ ಬೇಕು? ನಮಗೇನು ಗೊತ್ತಿಲ್ಲ ನಾವು ಮಾಹಿತಿ ಕೊಡುವು ದಿಲ್ಲ’ ಎಂದು ಬೇಜವಾ ಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು.

ನಿವೃತ್ತ ಶಿಕ್ಷಕ ಪುಂಡಲೀ ಕರಾವ ಚಿರಡೆ, ಗುಂಡಪ್ಪ ಕಲ್ಯಾಣ, ಜಗನ್ನಾಥ ಹಳ್ಳಾ, ಅಣ್ಣಪ್ಪ ಪೂಜಾರಿ, ಪ್ರಶಾಂತ ಹಾಲು, ಅಣ್ಣಪ್ಪ ಮಡಿವಾಳ, ಗ್ರಾಮ ಪಂಚಾಯಿತಿ ಸದಸ್ಯ ದಾಸಿಮಯ್ಯ ವಡ್ಡಣಕೇರಿ, ಶೀಲಾ ಗೌರೆ, ಅಣ್ಣಪ್ಪ ರೆಡ್ಡಿ, ಪ್ರದೀಪ ವಾಲೀಕಾರ, ರವಿ, ರಾಜ ಕುಮಾರ, ಕಾಶಪ್ಪ ಪೊಲೀಸ್ ಸಿಬ್ಬಂಧಿ ಎಎಸ್ಐ ಚಂದ್ರಕಾಂತ, ವೆಂಕಟ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.