ಮಂಗಳವಾರ, ಏಪ್ರಿಲ್ 20, 2021
31 °C

ಶಾಸಕ ಹರೀಶ್ ವಿರುದ್ಧ ಖಂಡನಾ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ಶಾಸಕರ ವಿರುದ್ಧ ಖಂಡನಾ ನಿರ್ಣಯ. ಅಧಿಕಾರಿಗಳ ಮೇಲೆ ಹೈಕೋರ್ಟ್‌ನಿಂದ `ಮ್ಯಾಂಡಮಸ್~ ರಿಟ್. ಇಷ್ಟೇ ಜಕಾತಿ ನೀಡಬೇಕು ಎಂದು ಕರಪತ್ರ ಬಿಡುಗಡೆ ಮಾಡಿರುವ ಆಂಜನೇಯ ಸಣ್ಣ ವರ್ತಕರ ಸಂಘ, ರೈತ ಸಂಘ ಹಾಗೂ ಹಸಿರು ಸೇನೆ ಮೇಲೆ ಮೊಕದ್ದಮೆ ದಾಖಲಿಸುವ ವಿಚಾರ.

ಎರಡೇ ವಿಷಯಗಳಿರುವ ತುರ್ತುಸಭೆಯಲ್ಲಿ ಅರ್ಧಗಂಟೆಯ ವಿರಾಮ.  -ಇವು, ಗುರುವಾರ ನಗರಸಭೆ ಸಭಾಂಗಣದಲ್ಲಿ ನಡೆದ ತುರ್ತುಸಭೆಯ ವಿಶೇಷಗಳು.  ಶಾಸಕರು ಕೌನ್ಸಿಲ್ ನಿರ್ಣಯಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. ಅವರ ನಡುವಳಿಕೆಯಿಂದ ಕೌನ್ಸಿಲ್‌ನ ಗೌರವಕ್ಕೆ ಧಕ್ಕೆಯಾಗಿದೆ.

ಶಾಸಕರ ವಿರುದ್ಧ ಖಂಡನಾ ನಿರ್ಣಯ ಕೈಗೊಂಡ ಘಟನೆ ರಾಜ್ಯದ ಯಾವುದೇ ನಗರಸಭೆಯಲ್ಲೂ ನಡೆದಿಲ್ಲ. ಕೌನ್ಸಿಲ್ ಗೌರವ ಉಳಿಸಿಕೊಳ್ಳಲು ಅವರ ವಿರುದ್ಧ ಖಂಡನಾ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸದಸ್ಯ ಡಿ. ಹೇಮಂತರಾಜ ಒತ್ತಾಯಿಸಿದರು.ಶಾಸಕರು ವಾರದ ಸಂತೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ ಕಾರಣ, ಅಧಿಕಾರಿಗಳು ಕೌನ್ಸಿಲ್ ನಿರ್ಣಯ ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ. ಶಾಸಕರ ವಿರುದ್ಧ ಖಂಡನಾ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸದಸ್ಯರಾದ ಎ. ವಾಮನಮೂರ್ತಿ, ಕೆ. ಮರಿದೇವ, ನಗೀನಾ ಸುಬಾನ್ ಸಹಮತ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.