ಭಾನುವಾರ, ಏಪ್ರಿಲ್ 11, 2021
20 °C

ಶಿಕ್ಷಣಕ್ಕೆ ಐಟಿ ಸ್ಪರ್ಶ: ಪೂಜಾಗಾಂಧಿ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕಾಲೇಜು ಹಂತದ ಪಠ್ಯವನ್ನು ಸಿಡಿ, ಡಿವಿಡಿಗೆ ಅಳವಡಿಸಬೇಕು. ಪಠ್ಯದ ಮಾಹಿತಿ ಟ್ಯಾಬ್ಲೇಟ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು ಎಂದು ಚಿತ್ರನಟಿ ಪೂಜಾಗಾಂಧಿ ಆಶಯ ವ್ಯಕ್ತಪಡಿಸಿದರು.ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಬೆಳ್ಳಿ ರಕ್ತನಿಧಿ ಪೌಂಡೇಷನ್, ಜೆಡಿಎಸ್ ವಿದ್ಯಾರ್ಥಿ ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಎಲ್ಲರೂ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆಯಬೇಕು. ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳು ಸಹ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರಾಗಿದ್ದಾರೆ ಎಂದರು.ಹಳ್ಳಿಗಳಲ್ಲಿ ಮಹಿಳೆಯರು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಹಿಳೆಯರ ಸಂಕಷ್ಟಗಳು ನನ್ನ ಅರಿವಿಗೆ ಬಂದಿವೆ. ಸ್ತ್ರೀಯರ ಸಮಸ್ಯೆ ನಿವಾರಣೆಗೆ ಸರ್ಕಾರಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಹೇಳಿದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ನಮ್ಮ ಮತ್ತು ವಿದೇಶಿ ಶಿಕ್ಷಣ ವ್ಯವಸ್ಥೆಗೂ ಇರುವ ವ್ಯತ್ಯಾಸ? ವಿಶ್ವದರ್ಜೆ ಶಿಕ್ಷಣದ ಅವಶ್ಯಕತೆ ಇದೆ ಎನ್ನುತ್ತೀರಲ್ಲಾ ಹಾಗೆಂದರೇನು? ಇತರ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಲು ತಿಣುಕಾಡಿದರು. ಮಕ್ಕಳ ಪ್ರಶ್ನೆಗೆ ಸಮರ್ಥ ಉತ್ತರ ಬರಲಿಲ್ಲ. ಪ್ರಶ್ನೆಗೆ ಸಂಬಂಧವೇ ಇಲ್ಲದ ಉತ್ತರ ನೀಡಿ ಜಾರಿಕೊಂಡರು.ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ರಾಜಣ್ಣ, ಗುತ್ತಿಗೆದಾರ ನರಸೇಗೌಡ, ಜೆಡಿಎಸ್ ಮುಖಂಡ ವಿಜಯ ಗೋರ್ಪಡೆ, ಬೆಳ್ಳಿ ರಕ್ತನಿಧಿ ಪೌಂಢೇಷನ್ ಮುಖ್ಯಸ್ಥ ಬೆಳ್ಳಿ ಲೋಕೇಶ್ ಇತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಅಕ್ಕಮ್ಮ ಸ್ವಾಗತಿಸಿದರು. ಮಹಾದೇವಪ್ಪ ನಿರೂಪಿಸಿದರು.ಜೆಡಿಎಸ್ ಬ್ಯಾನರ್ ಬಳಕೆ

ಸರ್ಕಾರಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಬ್ಯಾನರ್ ಬಳಕೆಗೆ ಆಕ್ಷೇಪ ವ್ಯಕ್ತವಾಯಿತು.  ನಟಿ ಪೂಜಾಗಾಂಧಿ ಭೇಟಿ ಹಿನ್ನಲೆಯಲ್ಲಿ ಯಾವುದೇ ತರಗತಿಗಳು ನಡೆಯಲಿಲ್ಲ.ರಾಜಕೀಯ ಪಕ್ಷದ ಬ್ಯಾನರ್ ಬಳಸಿ ಕಾರ್ಯಕ್ರಮ ಆಯೋಜಿಸಿರುವ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಕಾಲೇಜು ಪ್ರಾಂಶುಪಾಲ ರಾಜಣ್ಣ, ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವುದಾಗಿದೆ.ಶನಿವಾರ, ಭಾನುವಾರ ವಿಶೇಷ ತರಗತಿ ತೆಗೆದುಕೊಳ್ಳಲಾಗುವುದು. ನಮ್ಮ ಗಮನಕ್ಕೆ ಬಾರದೆ ಬ್ಯಾನರ್‌ನಲ್ಲಿ ಸ್ವಲ್ಪ ಮಟ್ಟಿಗೆ ತಪ್ಪಾಗಿದೆ ಎಂದರು.ಕನ್ನಡ ಚಿತ್ರ ನಟಿಯಾಗಿ ಭೇಟಿ ನೀಡಿದ್ದೇನೆ, ಪಕ್ಷ, ರಾಜಕೀಯ ಪ್ರಚಾರಕ್ಕಾಗಿ ಬಂದಿಲ್ಲ ಎಂದು ಪೂಜಾಗಾಂಧಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.