ಸೋಮವಾರ, ಮೇ 16, 2022
28 °C

ಶಿಕ್ಷಣದಿಂದ ಕನ್ನಡ ಬೆಳವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳೇಬೀಡು: ಇಂಗ್ಲಿಷ್ ಭಾಷೆಯಾಗಿ ಓದಬೇಕೆ? ಇಲ್ಲವೆ ಮಾಧ್ಯಮವಾಗಿ ಆಯ್ಕೆ ಮಾಡಿಕೊಳ್ಳಬೇಕೇ? ಎಂಬುದು ಇಂದಿನ ವ್ಯವಸ್ಥೆಯಲ್ಲಿ ಪೋಷಕರಲ್ಲಿ ಗೊಂದಲಮೂಡಿಸಿದೆ. ಕನ್ನಡದ ಬೆಳವಣಿಗೆ ಶಿಕ್ಷಣದಿಂದ ಆಗಬೇಕಾಗಿದೆ ಎಂಬದನ್ನು ಜನರು ಅರಿತುಕೊಳ್ಳಬೇಕು ಎಂದು ಬೇಲೂರು ತಾಲ್ಲೂಕು ಘಟಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಡಿ.ತಮ್ಮಣ್ಣಗೌಡ ಹೇಳಿದರು.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಹೋಬಳಿ ಘಟಕದ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಸಂಭ್ರಮದಲ್ಲಿದೆ. ಶತಮಾನದ ಆಚರಣೆ ರಾಜ್ಯ ಹಾಗೂ ಜಿಲ್ಲಾ ಸಮಿತಿಗೆ ಮಾತ್ರ ಮೀಸಲಾಗದೆ ತಾಲ್ಲೂಕು ಹಾಗೂ ಪ್ರತಿ ಹೋಬಳಿ ಯಲ್ಲಿಯೂ ನಡೆಯುವಂತಾಗಬೇಕು. ಅಳಿವಿನ ಅಂಚಿನಲ್ಲಿರುವ ಭಾಷೆಗಳಲ್ಲಿ ಕನ್ನಡ ಸಹ ಒಂದಾಗಿದೆ. ಕನ್ನಡಿಗರೆ ಅನ್ಯ ಭಾಷೆ ವ್ಯಾಮೋಹ ಹೊಂದಿದರೆ ಭಾಷೆಗೆ ಉಳಿಗಾಲವಿಲ್ಲದಂತಾಗುತ್ತದೆ. ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಪ್ರತಿ ಯೊಬ್ಬರು ಗೌರವಿಸುವಂತಾ ಗಬೇಕು. ಕರ್ನಾಟಕದ ವಿಧಾನ ಮಂಡಲ 60 ವರ್ಷದ ಸಂಭ್ರಮ ಆಚರಿಸುತ್ತಿರುವ ಸಂದರ್ಭದಲ್ಲಿ ಕನ್ನಡ ಭಾಷೆಗೆ ಯಾವ ರೀತಿ ಸ್ಥಾನಮಾನ ದೊರಕುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ ಎಂದು ತಮ್ಮಣ್ಣಗೌಡ ಹೇಳಿದರು.ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಎಲ್.ಮೋಹನ್, ಸಾಹಿತಿ ಬೇಲೂರು ನವಾಬ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯ ದರ್ಶಿ ಮಂಜೇಗೌಡ, ಆನಂದ್, ಸಂಘ ಟನಾ ಕಾರ್ಯದರ್ಶಿ ಕುಮಾರ ಸ್ವಾಮಿ, ಹೋಬಳಿ ಘಟಕ ನಿಕಟಪೂರ್ವ ಅಧ್ಯಕ್ಷ ಅನಂತರಾಮು ಮಾತನಾಡಿದರು.ಪ್ರಸನ್ನ ಗಣಪತಿ ಸಮಿತಿ ಅಧ್ಯಕ್ಷ ಎಚ್.ಎಸ್.ಜಯದೇವಮೂರ್ತಿ, ಮಾದಿಹಳ್ಳಿ ಹೋಬಳಿ ಘಟಕ ಅಧ್ಯಕ್ಷ ವಿರೂಪಾಕ್ಷ, ಕುಂಚಗಾಯನ ಕಲಾವಿದ ಶಾಂತರಾಜು ಮೊದಲಾದವರು ಉಪಸ್ಥಿತರಿದ್ದರು. ಹಳೇಬೀಡು ಹೋಬಳಿ ಘಟಕದ ಅಧ್ಯಕ್ಷರಾಗಿ ಎಚ್.ಎಸ್.ಅನಿಲ್ ಕುಮಾರ್, ಗೌರವ ಕಾರ್ಯದರ್ಶಿ ಯಾಗಿ ಚೀಲನಾಯಕ್ಕನ ಹಳ್ಳಿ ಗ್ರಾಮದ ಸಿ.ಆರ್.ಚಂದ್ರೇಗೌಡ, ಬಂಡಾರಿಕಟ್ಟೆ ಜಯಮ್ಮ ಆಯ್ಕೆಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.