ಶನಿವಾರ, ಏಪ್ರಿಲ್ 17, 2021
27 °C

ಶಿಕ್ಷಣದಿಂದ ದಲಿತರು ಜಾಗೃತರಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ಸಮಾಜದಲ್ಲಿ ಶೋಷಣೆ, ದೌರ್ಜನ್ಯ, ದಬ್ಬಾಳಿಕೆಗೆ ಒಳಗಾಗಿರುವ ದಲಿತರು ಸುಶಿಕ್ಷಿತರಾಗುವ ಮೂಲಕ ಜಾಗೃತಗೊಳ್ಳಬೇಕು ಎಂದು ದಲಿತ ರಕ್ಷಣಾ ವೇದಿಕೆಯ ಗುಲ್ಬರ್ಗಾ ವಿಭಾಗೀಯ ಅಧ್ಯಕ್ಷ ಹನುಮಂತ ಹಂಚಿನಾಳಕ್ಯಾಂಪ್ ಕರೆ ನೀಡಿದರು.ತಾಲ್ಲೂಕಿನ ಜಂಗಮರಹಟ್ಟಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ದಲಿತ ರಕ್ಷಣಾ ವೇದಿಕೆಯ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ದಲಿತರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿ ಅವರ ಅವರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘದ ಪದಾಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಎಂದು ಕರೆ ನೀಡಿದರು.ಬಿಎಸ್‌ಆರ್ ಪಕ್ಷದ ಮುಖಂಡ ಕೆ.ಕರಿಯಪ್ಪ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಎಲ್ಲ ಸಮಾಜದವರ ಸಹಕಾರ ಅಗತ್ಯವಿದೆ. ದಲಿತರೆನ್ನುವ ಕಾರಣಕ್ಕೆ ಅವರನ್ನು ತಿರಸ್ಕಾರ ಭಾವನೆಯಿಂದ ಕಾಣದೆ ಸೌಹಾರ್ದಯುತ ಜೀವನ ನಡೆಸುವಂತೆ ಸಲಹೆ ನೀಡಿದರು.ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶರಣಪ್ಪ ಮಳ್ಳಿ, ರಾಘವೇಂದ್ರ ಸೋಮಲಾಪುರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಂದಪ್ಪ ಸಾಹುಕಾರ, ಮುಖಂಡರಾದ ಲಿಂಗರಾಜ ಗುಂಜಳ್ಳಿ, ಕಳಸಪ್ಪ ದಳಪತಿ, ಮಲ್ಲೇಶ ತಿಡಿಗೋಳ, ಶ್ರೀನಿವಾಸ ನವಲಿ ಮತ್ತಿತರರು ಇದ್ದರು.ಗ್ರಾಮ ಘಟಕ ಪದಾಧಿಕಾರಿಗಳು: ಅಯ್ಯಪ್ಪ, ದುರುಗಪ್ಪ (ಗೌರವಾಧ್ಯಕ್ಷರು), ವೆಂಕಟೇಶ ಕೆ. (ಅಧ್ಯಕ್ಷ), ಕಾಶಿನಾಥ, ಅಮರೇಶ ಕಡಬೂರು (ಉಪಾಧ್ಯಕ್ಷರು), ವೆಂಕಟೇಶ ಟಿ., ಅಮರೇಶ (ಕಾರ್ಯದರ್ಶಿಗಳು), ಶಿವು ವೆಂಕಟಾಪುರ (ಪ್ರಧಾನ ಕಾರ್ಯದರ್ಶಿ), ಅಮರೇಶ ವೈ. (ಖಜಾಂಚಿ), ಸಿದ್ಧರಾಮೇಶ (ಸಹಕಾರ್ಯದರ್ಶಿ), ಶಿವಪ್ಪ, ಮೌನೇಶ, ಶ್ರೀನಿವಾಸ, ಚಂದ್ರಗಿರಿಯಪ್ಪ, ಬರಮಪ್ಪ, ಯಲ್ಲಪ್ಪ, ಸಣ್ಣಕಾಶಿನಾಥ (ಸದಸ್ಯರು).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.