ಸೋಮವಾರ, ಜೂನ್ 21, 2021
27 °C

ಶಿಗ್ಗಾವಿ: ಭಾವೈಕ್ಯ ಬಣ್ಣದೋಕುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾವಿ: ಭಾವೈಕ್ಯ ಬಣ್ಣದೋಕುಳಿ

ಶಿಗ್ಗಾವಿ: ಹೋಳಿ ಹಬ್ಬದ ಬಣ್ಣದಾಟದಲ್ಲಿ ಮಹಿಳೆಯರು, ಮಕ್ಕಳೆನ್ನದೆ ಗುರುವಾರ ಪಟ್ಟಣದಲ್ಲಿ ಹಿಂದು-ಮುಸ್ಲಿಂ ಯುವಕರು ಒಬ್ಬರಿಗೊಬ್ಬರು ರಂಗು, ರಂಗಾದ ಬಣ್ಣ  ಎರಚುತ್ತಾ ಉತ್ಸಾಹ ಭರಿತರಾಗಿ ಬಣ್ಣದೋಕುಳಿಯನ್ನು ಸಡಗರ, ಸಂಭ್ರಮ ದಿಂದ ಆಚರಿಸಿದರು.ಸಂಭ್ರಮದ ಬಣ್ಣದೋಕುಳಿಗೆ ಬಿಸಿಲಿನ ತಾಪ ಕಡೆಮೆ ಮಾಡಲೆಂದು ಆಕಾಶದಲ್ಲಿನ ಮೋಡಗಳೆಲ್ಲ ಒಂದಾಗಿ ಸೂರ್ಯನನ್ನು ಮರೆ ಮಾಡುವ ಮೂಲಕ ರಂಗಿನಾಟಕಕ್ಕೆ ಇನ್ನುಷ್ಟು ಮೆರುಗು ತಂದವು. ಬಣ್ಣ ದೋಕುಳಿಯಲ್ಲಿ ಮಿಂದೆದ್ದ ಯುವಕರ ತಂಡದಲ್ಲಿ  ಉತ್ಸಾಹ ಕಂಡು ಬಂತು. ಪಟ್ಟಣದ ಬೀದಿ, ಬೀದಿ ಗಳಲ್ಲಿ ಗುಂಪು ಗುಂಪಾಗಿ ರಂಗಿನಾಟದಲ್ಲಿ ತೂಡಗಿ ಸಂಭ್ರಮಿಸಿದರು.ಬೆಳಿಗ್ಗೆ ಆರಂಭದ ಸಮಯದಲ್ಲಿ ಮಕ್ಕಳು, ಮಹಿಳೆ ಯರು ಬಣ್ಣದ ಪಿಚಕಾರಿಗಳನ್ನು ಹಿಡಿದುಕೊಂಡು ಮನೆ, ಮನೆಗಳಿಗೆ ತೆರಳಿ ಒಬ್ಬರಿಗೆ ಒಬ್ಬರು ಬಣ್ಣ ಹಚ್ಚುವ  ಮೂಲಕ ಪರಸ್ಪರ  ಶುಭಾಶಯಗಳ ವಿನಿಮಯ ಮಾಡಿಕೊಳ್ಳುತ್ತ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಿದರು. ನಂತರ ಬಣ್ಣದೋಕುಳಿ ಮಧ್ಯಾಹ್ನದಲ್ಲಿ ರಂಗೇರಿತು.

ಹಲಗೆ, ತಮಟೆಗಳನ್ನು ಭಾರಿಸುತ್ತಾ ಯುವಕರ ತಂಡ ಪುರಸಭೆ ಮುಂದಿನ ವೃತ್ತದಲ್ಲಿ ಪುರಸಭೆ ಅಧ್ಯಕ್ಷ ರಾಮಣ್ಣ ಪುಜಾರ, ಸದಸ್ಯರಾದ ಮುಸ್ತಾಕ ಮುಲ್ಲಾ, ಸುಲಾಮಾನ ತಲರ್ಘಟ, ಸುಭಾಸ ಚವ್ಹಾಣ, ಸಬೀರ ಮಕಾದಾರ, ಆಸೀಫ್ ನಾಕೋಡ, ಮಹ್ಮದಹನೀಫ್ ದುಖಾನ ದಾರ ಸೇರಿದಂತೆ ಹಿಂದು- ಮುಸ್ಲಿಂ ಯುವಕರು  ಒಬ್ಬರು ಇನ್ನೂಬ್ಬರಿಗೆ ಬಣ್ಣ ಹಚ್ಚುತ್ತಾ ಭಾವೈಕ್ಯದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಪಟ್ಟಣದಲ್ಲಿ ಕೆಲವು ಯುವಕರು ತಂಡೋಪ  ತಂಡವಾಗಿ ಬೈಕ ಸವಾರರು ಹಾಗೂ ಟ್ರ್ಯಾಕ್ಟರ್‌ಗಳ ಮೇಲೆ  ಬಣ್ಣದ ಬ್ಯಾರಲ್‌ಗಳನ್ನು ತುಂಬಿಕೊಂಡು ದಾರಿಯಲ್ಲಿ ಸಿಕ್ಕ ಜನತೆಗೆ ಬಣ್ಣ ಎರಚುತ್ತಾ ಸಾಗಿ ದರು. ಇನ್ನೂ  ಕೆಲವರು ಮೊಸರಿನ ಗಡಿಗೆಗಳನ್ನು ಒಡೆ ಯುವ ಸ್ಪರ್ಧೆಯಲ್ಲಿ ಮೋಜು ಮಜಾ ಮಾಡುವ ಜೊತೆಗೆ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ವಿದ್ಯಾರ್ಥಿಗಳ ಪರದಾಟ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಇತಿಹಾಸ ಪರೀಕ್ಷೆಗೆಂದು ಬಂದಿರುವ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಮನೆಗೆ ತೆರಳುವಾಗ ಯುವಕರ ತಂಡಗಳು ದಾರಿ ಮಧ್ಯದಲ್ಲಿ ತಡೆದು ಬಣ್ಣ ಎರಚುತ್ತಿದ್ದರು. ಗ್ರಾಮೀಣ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯ್ದು ನಿಂತವರಿಗೆ ಬಣ್ಣ ಎರಚುವ ಮೂಲಕ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಯಿತು. ಭರ್ಜರಿ ಸಾರಾಯಿ ವ್ಯಾಪಾರ: ಹೋಳಿ ಹಬ್ಬದ ನಿಮಿತ್ತ ಪಟ್ಟಣದಲ್ಲಿರುವ ಎಲ್ಲಾ ಸಾರಾಯಿ ಅಂಗಡಿ ಹಾಗೂ ವೈನ್ ಶಾಪ್‌ಗಳನ್ನು ತೆರಯದಂತೆ ಸೂಚಿಸ ಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಸಾರಾಯಿ ಮರಾಟ ನಿಷೇಧಿಸಿತ್ತಾದರೂ ಹಿಂದಿನ ಬಾಗಿಲಿಂದ ಸಾರಾಯಿ ಖರೀದಿ ಮಾಡುತ್ತಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.