ಮಂಗಳವಾರ, ಮೇ 18, 2021
22 °C

ಶಿಬಿರ, ತರಬೇತಿ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕಿಡ್‌ಜೀ~ಯಲ್ಲಿ ಬೇಸಿಗೆ ಶಿಬಿರ

ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಕಲೆಯ ರುಚಿ ಹೆಚ್ಚಿಸಲು ಆರ್.ಟಿ ನಗರದಲ್ಲಿರುವ `ಕಿಡ್‌ಜೀ~  ಸ್ಕೂಲ್ ಏ.16ರಿಂದ ಮೇ.3ರವರೆಗೆ ಬೇಸಿಗೆ ಶಿಬಿರ ಆಯೋಜಿಸಿದೆ. ಚಿಣ್ಣರಿಗಾಗಿ ಫ್ಲವರ್ ಮೇಕಿಂಗ್, ಪಾಟ್ ಡೆಕೋರೆಟಿಂಗ್, ಗ್ಲಾಸ್, ಕ್ಲಾತ್‌ಪೇಂಟಿಂಗ್, ಪರ್ಸ್, ಕಾರ್ಪೆಟ್‌ಹಾಗೂ ಕೀಚೈನ್ಸ್ ಮಾಡುವುದನ್ನು ಹೇಳಿಕೊಡುತ್ತಾರೆ.

ಹೆಚ್ಚಿನ ಮಾಹಿತಿಗೆ: 93431 03235ಬೇಸಿಗೆ ಶಿಬಿರ

ಅಖಿಲ ಕರ್ನಾಟಕ ಮಕ್ಕಳ ಕೂಟವು 46ನೇ ಮಕ್ಕಳ ಬೇಸಿಗೆ ರಜೆಯ ಶಿಕ್ಷಣ ಶಿಬಿರವನ್ನು ಏರ್ಪಡಿಸಿದೆ. ಏಪ್ರಿಲ್ 14ರಿಂದ ಮೇ 15ರವರೆಗೆ ನಡೆಯುವ ಶಿಬಿರಕ್ಕೆ ಅರ್ಜಿ ಸಲ್ಲಿಸುವವರು ಸಂಜೆ 5ರಿಂದ 7 ಗಂಟೆ ಒಳಗೆ ಕಚೇರಿಯಲ್ಲಿ ಸಂಪರ್ಕಿಸಬಹುದು.

ಸ್ಥಳ: ಅಖಿಲ ಕರ್ನಾಟಕ ಮಕ್ಕಳ ಕೂಟ, ಶ್ರೀಮತಿ ಆರ್.ಕಲ್ಯಾಣಮ್ಮ ಮಕ್ಕಳ ಆಟದ ಮೈದಾನ, ಕೋಟೆ. ದೂ: 2670 6109.ಆಪ್ತಸಲಹಾ ಕಾರ್ಯಕ್ರಮ

ಆರೋಗ್ಯ ಭಾರತಿ ಟ್ರಸ್ಟ್ ಹಾಗೂ ಕರ್ನಾಟಕ ಅರ್ಥ್ರೈಟಿಸ್ ಫೌಂಡೇಶನ್ ವ್ಯಾಯಾಮ ಚಿಕಿತ್ಸೆ ಶಿಬಿರದ ಅಂಗವಾಗಿ ಅರ್ಥ್ರೈಟಿಸ್ ರೋಗಿಗಳಿಗೆ ಉಚಿತ ಆಪ್ತ ಸಲಹಾ ಕಾರ್ಯಕ್ರಮವನ್ನು ಆಯೋಜಿಸಿದೆ. ಏಪ್ರಿಲ್ 8ರ ಭಾನುವಾರ  ಮಧ್ಯಾಹ್ನ 2 ಗಂಟೆಗೆ ನಾಯಂಡನಹಳ್ಳಿಯ ಸ್ಪಂದನ ಆಸ್ಪತ್ರೆಯ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆಪ್ತಸಲಹೆಗಾರರಾದ ಎನ್.ವಿಶ್ವರೂಪಚಾರ್ ನಡೆಸಿಕೊಡಲಿದ್ದಾರೆ. ಮಾಹಿತಿಗೆ ಡಾ. ಜಿ. ಮೋಹನ್‌ಕುಮಾರ್ 99454 62604ಸುಗಮ ಸಂಗೀತ ಸ್ಪರ್ಧೆ

ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಸೇವಾ ಟ್ರಸ್ಟ್ ಕಿರಿಯರ ಮತ್ತು ಹಿರಿಯರ ವಿಭಾಗಕ್ಕೆ ಸುಗಮ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಿದೆ.ಭಾಗವಹಿಸಲಿಚ್ಛಿಸುವವರು ಏಪ್ರಿಲ್5ರೊಳಗೆ ಟ್ರಸ್ಟ್‌ನ ಕಾರ್ಯದರ್ಶಿ ಸಿ.ಹೇಮಾವತಿ ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ: ಡಾ. ಅಶೋಕ್‌ಕುಮಾರ್ 94488 56322/ 94804 51586

 

ಅಂಗವಿಕಲರ ವಸತಿ ನಿಲಯ

ಸೇವಾ ಜ್ಯೋತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯು ಅಂಗವಿಕಲರ ವಸತಿ ನಿಲಯವನ್ನು ಆರಂಭಿಸುತ್ತಿದ್ದು, ರಿಯಾಯಿತಿ ದರದಲ್ಲಿ ವಸತಿ ಹಾಗೂ ಉಪಹಾರ, ಭೋಜನ ವ್ಯವಸ್ಥೆಯನ್ನು ಒಳಗೊಂಡಿದೆ. ಆಸಕ್ತಿಯುಳ್ಳ ಅಂಗವಿಕಲರು ಅರ್ಜಿ ಸಲ್ಲಿಸಬಹುದು. ಸ್ಥಳ: ನಂ.154/29, 3ನೇ ಮುಖ್ಯರಸ್ತೆ, ವೈಯಾಲಿಕಾವಲ್. ಮಾಹಿತಿಗೆ: 98865 30641/ 23340024.ತರಬೇತಿ

ಯುನಿಕಾರ್ನ್ ತಂತ್ರಜ್ಞಾನ ಸಂಸ್ಥೆಯು ಬೇಸಿಗೆಯ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ, ಸ್ವ-ಉದ್ಯೋಗಿಗಳಿಗೆ ಹಾಗೂ ನೌಕರಿ ಆಕಾಂಕ್ಷಿಗಳಿಗೆ ಮೂರು ವಾರಗಳ ಕಾಲ ಮೊಬೈಲ್ ಅಥವಾ ಹಾರ್ಡ್‌ವೇರ್ ತರಬೇತಿಯನ್ನು ನೀಡಲಿದೆ.ಮಾಹಿತಿಗೆ: ಯುನಿಕಾರ್ನ್ ತಂತ್ರಜ್ಞಾನ ಸಂಸ್ಥೆ, ನಂ.11/3, 5 ಮತ್ತು 6ನೇ ಅಡ್ಡರಸ್ತೆ, ಬನ್ನಪ್ಪ ಪಾರ್ಕ್ ರಸ್ತೆ, ಕಬ್ಬನ್ ಪೇಟೆ, ದೂ: 98866 51433

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.