ಶಿರಸಿ: ನಗರದಲ್ಲಿ ಎರಡು ತಿಂಗಳ ಅವಧಿಯಲ್ಲಿ ಆರು ಸರಗಳ್ಳತನ ಪ್ರಕರಣಗಳು ನಡೆದಿದ್ದು, ಸಾರ್ವಜನಿಕ ರಲ್ಲಿ ಆತಂಕ ಸೃಷ್ಟಿಸಿದೆ. ಒಂದೇ ಮಾದರಿಯಲ್ಲಿ ಬಹುತೇಕ ಎಲ್ಲ ಸರಗಳ್ಳತನಗಳು ನಡೆದಿದ್ದರೂ ಪೊಲೀಸ್ ಇಲಾಖೆ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಹಿಂದೆ ಬಿದ್ದಿದೆ.

ಎರಡೂವರೆ ತಿಂಗಳ ಅವಧಿಯಲ್ಲಿ ಐದು ಸರ ಅಪಹರಣ ಪ್ರಕರಣಗಳು ನಗರ ವ್ಯಾಪ್ತಿಯಲ್ಲಿ ನಡೆದಿವೆ. ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು, ನಗರ ಠಾಣೆಯಲ್ಲಿ ಹಾಗೂ ತಾಲ್ಲೂಕಿನ ಬನವಾಸಿಯಲ್ಲಿ ಒಂದು ದೂರು ದಾಖಲಾಗಿದೆ. ಏಪ್ರಿಲ್ ತಿಂಗಳಿನಲ್ಲೇ ಒಂದು ವಾರದ ನಡುವಿನ ಅವಧಿಯಲ್ಲಿ ಮೂರು ಮಹಿಳೆಯರ ಕುತ್ತಿಗೆಯಲ್ಲಿದ್ದ ಸರ ಕಳ್ಳರ ಪಾಲಾಗಿದೆ.

ನಗರದ ಅಂಬಿಕಾ ಕಾಲನಿಯಲ್ಲಿ ಏ 9ರಂದು, ಮುಸ್ಲಿಂಗಲ್ಲಿಯಲ್ಲಿ ಏ 15ರಂದು, ಟಿಎಸ್ಎಸ್ ರಸ್ತೆಯಲ್ಲಿ ಏ 19ರಂದು, ದುಂಡಶಿನಗರದಲ್ಲಿ ಮೇ 8ರಂದು, ಬನವಾಸಿಯಲ್ಲಿ ಜೂನ್ 6ರಂದು ಹಾಗೂ ನಗರದ ರಾಯರಪೇಟೆಯಲ್ಲಿ ಜೂನ್ 17ರಂದು ಮಹಿಳೆಯರ ಕುತ್ತಿಗೆಯಲ್ಲಿ ಸರವನ್ನು ಬೈಕ್ನಲ್ಲಿ ಬಂದ ಅಪರಿಚಿತರು ಕಿತ್ತುಕೊಂಡು ಹೋದ ಘಟನೆ ನಡೆದಿದೆ.

ಬೆಳಗಿನ 7.45ರಿಂದ ಸಂಜೆ 8ಗಂಟೆ ನಡುವಿನ ಅವಧಿಯಲ್ಲೇ ಈ ಎಲ್ಲ ಘಟನೆಗಳು ಸಂಭವಿಸಿವೆ. ಹೆಚ್ಚಿನ ಎಲ್ಲ ಘಟನೆಗಳಲ್ಲಿ ಹೆಚ್ಚು ತೂಕವಿದ್ದ ಮಾಂಗಲ್ಯ ಸರವೇ ಅಪಹರಣ ವಾಗಿರುವುದು ಮಹಿಳೆಯರಲ್ಲಿ ತೀವ್ರ ಆತಂಕ ಉಂಟುಮಾಡಿದೆ.

ಇದೇ ಭಾನುವಾರ ಬೆಳಿಗ್ಗೆ ನಳದ ನೀರು ಹಿಡಿಯುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 40ಗ್ರಾಂ ತೂಕದ ತಾಳಿ ಸರ ಬೈಕ್ನಲ್ಲಿ ಬಂದಿದ್ದ ಕಳ್ಳರು ಲಪಟಾಯಿಸಿಕೊಂಡು ಹೋಗಿದ್ದಾರೆ. ಹಾಡಹಗಲಿನಲ್ಲೇ ಇಂಥ ಘಟನೆಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆಗೆ ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯ ವಾಗುತ್ತಿಲ್ಲ.

ಪೊಲೀಸ್ ಕ್ರಮ: ನಗರದ ಪ್ರಮುಖ ಕೇಂದ್ರಗಳಲ್ಲಿ ಪೋಲಿಸರು ಬೈಕ್ ತಪಾಸಣೆ ನಡೆಸುತ್ತಿದ್ದಾರೆ.
ಪೋಲಿಸರಿಗೆ ಸಾರ್ವಜನಿಕರು ನೀಡಿರುವ ಮಾಹಿತಿ ಆಧರಿಸಿ ಒಂದೇ ತಂಡ ಈ ಕೃತ್ಯ ನಡೆಸುತ್ತಿರಬಹುದೆಂದು ಶಂಕಿಸಲಾಗಿದೆ.

ಉಪ ವಿಭಾಗಗಳಿಂದ ಅಪರಾಧ ವಿಭಾಗದ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ಕರೆಸಲಾಗಿದ್ದು ಐದು ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊರ ಜಿಲ್ಲೆಗಳಲ್ಲಿ ಕಳ್ಳರ ಕುರಿತು ಮಾಹಿತಿ ಕಲೆ ಹಾಕಲು ವಿಶೇಷ ಪಡೆ ರಚಿಸಲಾಗಿದೆ.

ನಗರದ ಸುತ್ತಲಿನ ಹಳ್ಳಿಗಳಲ್ಲಿ ಪೊಲೀಸರಿಗೆ ಸಹಕರಿಸುವ ಕೆಲವು ಸಾರ್ವಜನಿಕರ ಸಂಪರ್ಕ ಸಂಖ್ಯೆ ಇಟ್ಟುಕೊಳ್ಳಲಾಗಿದ್ದು, ನಗರದಲ್ಲಿ ಕಳ್ಳತನ ನಡೆದರೆ ತಕ್ಷಣ ಇವರಿಗೆ ತಿಳಿಸಿ ಕಳ್ಳರ ಪತ್ತೆಗೆ ಸಹಕಾರ ಪಡೆಯ ಲಾಗುವದು. ನಗರ ವ್ಯಾಪ್ತಿಯ ಯುವಕ ಸಂಘಗಳ ಸಭೆ ನಡೆಸಿ ಅಪರಿಚಿತ ವ್ಯಕ್ತಿಗಳ ಬಗ್ಗೆ ಲಕ್ಷ್ಯ ನೀಡಲು ತಿಳಿಸಲಾಗಿದೆ ಎಂದು ಪೊಲೀಸ್ ಉಪಾಧೀಕ್ಷಕ ಎನ್.ಡಿ.ಬಿರ್ಜೆ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.