ಶುಕ್ರವಾರ, ಜೂನ್ 18, 2021
27 °C
ಜಿಲ್ಲಾ ಮಟ್ಟದ ಯುವಜನಮೇಳ

ಶಿರಸಿ, ಸಿದ್ದಾಪುರಕ್ಕೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳಿಯಾಳ: ಜಿಲ್ಲಾ ಮಟ್ಟದ ಯುವಜನ ಮೇಳದ ಯುವತಿಯರ ವಿಭಾಗದಲ್ಲಿ ಶಿರಸಿ ತಾಲ್ಲೂಕು ಸಮಗ್ರ ಪ್ರಥಮ ಸ್ಥಾನ ಪಡೆದುಕೊಂಡಿತು.ಇತ್ತೀಚಿಗೆ ತಾಲ್ಲೂಕಿನ ಕೆ.ಕೆ.ಹಳ್ಳಿ ಗ್ರಾಮದ ನಿತ್ಯಾನಂದಮ ಮಠದಲ್ಲಿ  ನಡೆದ ಜಿಲ್ಲಾ ಮಟ್ಟದ ಯುವಜನ ಮೇಳ ಸ್ಪರ್ಧೆಯಲ್ಲಿ ಸಿದ್ದಾಪುರ ದ್ವಿತೀಯ, ಯಲ್ಲಾಪುರ ತೃತೀಯ ಸ್ಥಾನವನ್ನು ಪಡೆಯಿತು.ಭಾವಗೀತೆ ಸ್ಪರ್ಧೆಯಲ್ಲಿ ಶ್ರೇಯಾ ಭಟ್ಟ ಶಿರಸಿ. ಪ್ರಥಮ, ಸಹನಾ ಭಟ್ ಭಟ್ಕಳ ದ್ವಿತೀಯ, ಅಶ್ವಿನಿ ಭಟ್ಟ ತೃತೀಯ ಸ್ಥಾನ; ಲಾವಣಿಯಲ್ಲಿ ಆಶಾ ಲಕ್ಷ್ಮಿ ಕೊಂಡ್ಲಿ ಸಿದ್ದಾಪುರ ಪ್ರಥಮ, ಮೇದಾ ನಾಯ್ಕ ದ್ವಿತೀಯ, ಪ್ರಜ್ಞಾ ಹೆಗಡೆ ಶಿರಸಿ ತೃತೀಯ;ರಂಗಗೀತೆಯಲ್ಲಿ  ಆಶಾ ಲಕ್ಷ್ಮಿ ಕೊಂಡ್ಲಿ ಸಿದ್ದಾಪುರ ಪ್ರಥಮ, ವಾಣಿ ಭಟ್ಟ ದ್ವಿತೀಯ , ತೃತೀಯ ಸಹನಾ ಭಟ್ಟ; ಏಕಪಾತ್ರಾಭಿನಯದಲ್ಲಿ ಶಿಲ್ಪಾ ನಾಯ್ಕ ಪ್ರಥಮ, ಸಂಧ್ಯಾ ಹೆಬ್ಬಾರ ದ್ವಿತೀಯ, ಮೇಧಾ ನಾಯ್ಕ ತೃತೀಯ; ಗೀಗಿಪದ ಸ್ಪರ್ಧೆಯಲ್ಲಿ ಜ್ಯೋತಿ ಹುಳಗೊಳ ಪ್ರಥಮ, ಶ್ರೀದೇವಿ ಹೆಗ್ಗೇರಿ ದ್ವಿತೀಯ, ವಿದ್ಯಾಶ್ರೀ ಹೆಬ್ಬಾರ ತೃತೀಯ ಸ್ಥಾನ ಪಡೆದರು.ಜಾನಪದ ಗೀತೆ ಸ್ಪರ್ಧೆಯಲ್ಲಿ ಸಿದ್ದಾಪುರ ತಾಲ್ಲೂಕಿನ ಕೊಂಡ್ಲಿಯ ಲಕ್ಷ್ಮಿ ಯುವತಿ ಸಂಘ ಪ್ರಥಮ, ಶಿರಸಿಯ ಜ್ಯೋತಿ ಯುವತಿ ಮಂಡಳ ದ್ವಿತೀಯ, ಭಟ್ಕಳದ ಅಶ್ವಿನಿ ಭಟ್ಟ ಸಂಗಡಿಗರು ತೃತೀಯ;  ಕೋಲಾಟ ಸ್ಪರ್ಧೆಯಲ್ಲಿ ಶಿರಸಿಯ ದಾಕ್ಷಾಯಿಣಿ ಯುವತಿ ಮಂಡಳ ಪ್ರಥಮ, ಜ್ಯೋತಿ ಯುವತಿ ಮಂಡಳ ದ್ವಿತೀಯ, ಯಲ್ಲಾಪುರದ ಚಾಮುಂಡೇಶ್ವರಿ ಯುವತಿ ಮಂಡಳ ತೃತೀಯ; ಭಜನೆಯಲ್ಲಿ ಜ್ಯೋತಿ ಯುವತಿ ಮಂಡಳ ಪ್ರಥಮ, ಸಿದ್ದಾಪುರದ ಲಕ್ಷ್ಮಿ ಯುವತಿ ಮಂಡಳ ದ್ವಿತೀಯ, ಸಂಧ್ಯಾ ಹೆಬ್ಬಾರ ತೃತೀಯ; ಜಾನಪದ ನೃತ್ಯ ಸ್ಪರ್ಧೆಯಲ್ಲಿ ಯಲ್ಲಾಪುರದ ಗ್ರಾಮದೇವಿ ಕಲಾ ಬಗಳ  ಪ್ರಥಮ, ಭಟ್ಕಳದ ಗುರುಸುಧೀಂದ್ರ ಯುವತಿ ಮಂಡಳ ದ್ವಿತೀಯ, ಶಿರಸಿಯ ದಾಕ್ಷಾಯಿಣಿ ಯುವತಿ ಮಂಡಳ ತೃತೀಯ; ಸೋಬಾನಪದದಲ್ಲಿ ಜ್ಯೋತಿ ಯುವತಿ ಮಂಡಳ ಪ್ರಥಮ, ಯಲ್ಲಾಪುರದ ಕಸ್ತೂರಬಾ ಯುವತಿ ಮಂಡಳ ದ್ವಿತೀಯ; ರಾಗಿ ಬಿಸುವ ಪದದಲ್ಲಿ ಸಿದ್ದಾಪುರ ಪ್ರಥಮ, ಶಿರಸಿ ದ್ವಿತೀಯ ಸ್ಥಾನ ಪಡೆದಿದೆ.ಯುವಕರ ವಿಭಾಗದಲ್ಲಿ ಸಿದ್ದಾಪುರ ಪ್ರಥಮ, ಯಲ್ಲಾಪುರ ದ್ವಿತೀಯ ಸಮಗ್ರ ಬಹುಮಾನ ಪಡೆದುಕೊಂಡವು.ಭಾವಗೀತೆಯಲ್ಲಿ ಗೋಪಾಲಕೃಷ್ಣ ನಾಯ್ಕ ಪ್ರಥಮ, ವಿಶ್ವೇಶ್ವರ ಗೌಡಾ ಯಲ್ಲಾಪುರ ದ್ವಿತೀಯ; ಲಾವಣಿಯಲ್ಲಿ ನಾಗರಾಜ ಓಣಿಕೇರಿ ಮುಂಡಗೋಡ ಪ್ರಥಮ, ದ್ವಿತೀಯ ಸುರೇಶ ಮಡಿವಾಳ ಸಿದ್ದಾಪುರ; ರಂಗಗೀತೆಯಲ್ಲಿ ಮನು ಹೆಗಡೆ ಶಿರಸಿ ಪ್ರಥಮ, ಗೋಪಾಲಕೃಷ್ಣ ನಾಯ್ಕ ಕುಮಟಾ ದ್ವಿತೀಯ; ಏಕಪಾತ್ರಾಭಿನಯದಲ್ಲಿ ರತ್ನಾಕರ ಹೆಬ್ಬಾರ ಪ್ರಥಮ, ಅರವಿಂದ ಹೆಗಡೆ ದ್ವಿತೀಯ; ಗೀಗಿಪದದಲ್ಲಿ ಜೈಹನುಮಾನ ಯುವಕ ಮಂಡಳ ಪ್ರಥಮ, ಈಶ್ವರ ಕಲಾಬಳಗ ಸಿದ್ದಾಪುರ ದ್ವಿತೀಯ; ಜಾನಪದ ಗೀತೆಯಲ್ಲಿ ಸದಾನಂದ ಮುಂಡಗೋಡ ಹಿರೇಹಳ್ಳಿ ತಂಡ ಪ್ರಥಮ, ಮಹಾಗಣಪತಿ ಯುವಕ ಮಂಡಳ ಯಲ್ಲಾಪುರ ದ್ವಿತೀಯ; ಕೋಲಾಟ ಸ್ಪರ್ಧೆಯಲ್ಲಿ ಸಿದ್ದಿವಿನಾಯಕ ಯುವಕ ಮಂಡಳ ಪ್ರಥಮ, ವಿಷ್ಣು ಹಿರೇಹಳ್ಳಿ ಮುಂಡಗೋಡ ದ್ವಿತೀಯ; ಭಜನೆಯಲ್ಲಿ ಯಲ್ಲಾಪುರ ಪ್ರಥಮ, ಮುಂಡಗೋಡ ದ್ವಿತೀಯ, ಜಾನಪದ ನೃತ್ಯದಲ್ಲಿ ಜೈಹನುಮಾನ ಯುವಕ ಸಂಘ ಪ್ರಥಮ, ಈಶ್ವರ ಕಲಾ ಸಂಘ ಸಿದ್ದಾಪುರ ದ್ವಿತೀಯಚರ್ಮ ವಾದ್ಯದಲ್ಲಿ ಮಹಾಗಣಪತಿ ಯುವಕ ಮಂಡಳ ಯಲ್ಲಾಪುರ ಪ್ರಥಮ, ಅಂಬೇಡ್ಕರ್‌ ಯುವಕ ಮಂಡಳ ಹಳಿಯಾಳ ದ್ವಿತೀಯ; ವೀರಗಾಸೆಯಲ್ಲಿ ಈಶ್ವರ ಕಲಾಬಳಗ ಸಿದ್ದಾಪುರ ಪ್ರಥಮ, ದುರ್ಗಾಶ್ರೀ ಯುವಕ ಮಂಡಳ ಭಟ್ಕಳ ದ್ವಿತೀಯ; ಡೊಳ್ಳುಕುಣಿತ ಸಿದ್ದಿವಿನಾಯಕ ಯುವಕ ಮಂಡಳ ಪ್ರಥಮ, ಮಹಾಶಕ್ತಿ ಯುವಕ ಸಂಘ ಯಲ್ಲಾಪುರ ದ್ವಿತೀಯ; ಸಣ್ಣಾಟದಲ್ಲಿ  ಸಣ್ಣಮ್ಮದೇವಿ ತರುಣ ಮಿತ್ರ ಬಳಗ ಅಂಕೋಲಾ ಪ್ರಥಮ, ದೊಡ್ಡಾಟ– ಈಶ್ವರ ಕಲಾ ಬಳಗ ಸಿದ್ದಾಪುರ ಪ್ರಥಮ;

ಯಕ್ಷಗಾನದಲ್ಲಿ ಯುವಶಕ್ತಿ ಯುವ ಸಂಘ ವಜ್ರಳ್ಳಿ ಕುಮಟಾ ಪ್ರಥಮ ಸ್ಥಾನ ಪಡೆದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.