ಶುಕ್ರವಾರ, ಜೂನ್ 18, 2021
28 °C

ಶಿಶು ಅಭಿವೃದ್ಧಿ ಯೋಜನೆ ಅಕ್ರಮ: ಮುಂದುವರಿದ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ (ಐಸಿಡಿಎಸ್) ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದ ತನಿಖೆಯನ್ನು ಚುರುಕುಗೊಳಿಸಿರುವ ಲೋಕಾಯುಕ್ತ ಪೊಲೀಸರು, ಶನಿವಾರವೂ ಮತ್ತಷ್ಟು ಮಾಹಿತಿ ಕಲೆಹಾಕಿದ್ದಾರೆ. ರಾಜ್ಯದ ವಿವಿಧೆಡೆಯಿಂದ ದೂರವಾಣಿ ಮೂಲಕ ತನಿಖಾ ತಂಡವನ್ನು ಸಂಪರ್ಕಿಸಿರುವ ಸಾರ್ವಜನಿಕರು, ಅಕ್ರಮದ ಬಗ್ಗೆ ಮಾಹಿತಿ ಒದಗಿಸಿದ್ದಾರೆ.ಬೆಂಗಳೂರಿನ ಹತ್ತು ಸೇರಿದಂತೆ ರಾಜ್ಯದ 24 ಕಡೆ ಶುಕ್ರವಾರ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಐಸಿಡಿಎಸ್ ಯೋಜನೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.ಪ್ರಕರಣದ ತನಿಖಾಧಿಕಾರಿ ಅಬ್ದುಲ್ ಅಹದ್ ಮತ್ತು ತಂಡದವರು ಶನಿವಾರ ದಿನವಿಡೀ ದಾಖಲೆಗಳ ಪರಿಶೀಲನೆ ನಡೆಸಿದರು.ರಾಜ್ಯದ ವಿವಿಧೆಡೆ ಅಂಗನವಾಡಿ ಕೇಂದ್ರಗಳು ಮತ್ತು ಮಹಿಳಾ ಸಂಘಗಳ ಉತ್ಪಾದನಾ ಕೇಂದ್ರಗಳಿಂದ ವಶಪಡಿಸಿಕೊಂಡಿರುವ ಪೌಷ್ಟಿಕ ಆಹಾರ ಪೊಟ್ಟಣಗಳ ಮಾದರಿಯನ್ನು ಶೀಘ್ರದಲ್ಲೇ ಅತ್ಯುನ್ನತ ಮಟ್ಟದ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಕಳುಹಿಸಲು ತನಿಖಾ ತಂಡ ತೀರ್ಮಾನಿಸಿದೆ.ರಾಷ್ಟ್ರೀಯ ಮಟ್ಟದ ಎರಡು ಪ್ರಯೋಗಾಲಯಗಳಿಗೆ ಈ ಮಾದರಿಯನ್ನು ಕಳುಹಿಸಲಾಗುವುದು ಎಂದು ಲೋಕಾಯುಕ್ತದ ಉನ್ನತ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.