ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ (ಐಸಿಡಿಎಸ್) ಭಾರಿ ಪ್ರಮಾಣದ ಅವ್ಯವಹಾರ ನಡೆದಿರುವುದನ್ನು ಲೋಕಾಯುಕ್ತ ಪೊಲೀಸರು ಪತ್ತೆಹಚ್ಚಿದ್ದಾರೆ. ಐಎಎಸ್ ಅಧಿಕಾರಿಯೊಬ್ಬರ ಮನೆಯೂ ಸೇರಿದಂತೆ ರಾಜ್ಯದ ವಿವಿಧೆಡೆ 20 ಕಡೆಗಳಲ್ಲಿ ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿಂದಿನ ನಿರ್ದೇಶಕಿಯಾಗಿದ್ದ ಐಎಎಸ್ ಅಧಿಕಾರಿ ಡಾ.ಶಮ್ಲಾ ಇಕ್ಬಾಲ್, ಜಂಟಿ ನಿರ್ದೇಶಕಿ ಉಷಾ ಪಟ್ವಾರಿ, ಸಹಾಯಕ ನಿರ್ದೇಶಕ ಮುನಿರಾಜು ಅವರ ಮನೆ, ಕಚೇರಿಗಳು, ಐಸಿಡಿಎಸ್ ಯೋಜನೆಯಡಿ ಪೌಷ್ಟಿಕ ಆಹಾರ ಮತ್ತು ಔಷಧಿ ಪೂರೈಕೆ ಗುತ್ತಿಗೆ ಪಡೆದಿರುವ ತಮಿಳುನಾಡು ಮೂಲದ ಕ್ರಿಸ್ಟಿ ಫ್ರೈಡ್ಗ್ರ್ಯಾಮ್ಸ ಕಚೇರಿ, ಗೋದಾಮುಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರ್ದೇಶನಾಲಯ, ಅಂಗನವಾಡಿ ಕೇಂದ್ರಗಳು ಮತ್ತು ಮಹಿಳಾ ಸಂಘಗಳ ಉತ್ಪಾದನಾ ಕೇಂದ್ರಗಳ ಮೇಲೆ ದಾಳಿ ನಡೆದಿದೆ. ಬೆಂಗಳೂರಿನ ಹತ್ತು, ತುಮಕೂರು, ಮೈಸೂರು, ಬೀದರ್ ಮತ್ತು ರಾಯಚೂರು ಜಿಲ್ಲೆಯ ತಲಾ ಮೂರು ಕಡೆಗಳಲ್ಲಿ ದಾಳಿ ನಡೆದಿದೆ.

ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್, `ದಾಳಿಗೆ ಒಳಗಾಗಿರುವ ಅಧಿಕಾರಿಗಳು ಮತ್ತು ಖಾಸಗಿ ಕಂಪೆನಿ ಷಾಮೀಲಾಗಿ ಐಸಿಡಿಎಸ್ ಯೋಜನೆಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆಸಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅವ್ಯವಹಾರದ ಮೂಲಕ ಆರೋಪಿ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿರುವ ಬಗ್ಗೆಯೂ ದಾಖಲೆಗಳು ಲಭ್ಯವಾಗಿವೆ~ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಐಸಿಡಿಎಸ್ ಯೋಜನೆಯಡಿ ರಾಜ್ಯದ ವಿವಿಧ ಅಂಗನವಾಡಿಗಳ ಮೂಲಕ ಮಕ್ಕಳು ಮತ್ತು ಮಹಿಳೆಯರಿಗೆ ಪೌಷ್ಟಿಕ ಆಹಾರ ವಿತರಿಸುತ್ತಿದೆ. ಸ್ಥಳೀಯ ಮಹಿಳಾ ಸಂಘಗಳ ಸದಸ್ಯರಿಗೆ ಪೌಷ್ಟಿಕ ಆಹಾರ ತಯಾರಿಕೆ ಮತ್ತು ಯಂತ್ರಗಳ ಬಳಕೆ ಕುರಿತು ತರಬೇತಿ ನೀಡುವ ಕೆಲಸದ ಗುತ್ತಿಗೆಯನ್ನು ಕ್ರಿಸ್ಟಿ ಫ್ರೈಡ್ ಗ್ರ್ಯಾಮ್ಸ ಕಂಪೆನಿಗೆ ನೀಡಲಾಗಿತ್ತು. ಸುಪ್ರೀಂಕೋರ್ಟ್ ಆದೇಶದಂತೆ ಈ ಕಂಪೆನಿಗೆ ತಮಿಳುನಾಡಿನ್ಲ್ಲಲಿ ನಿರ್ಬಂಧ ವಿಧಿಸಲಾಗಿತ್ತು. ನಂತರ ರಾಜ್ಯದಲ್ಲಿ ಗುತ್ತಿಗೆ ಪಡೆದಿತ್ತು. ಅಧಿಕಾರಿಗಳ ಜೊತೆ ಷಾಮೀಲಾಗಿ ಇಡೀ ಯೋಜನೆಯನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಕಂಪೆನಿ, ಕಳಪೆ ಗುಣಮಟ್ಟದ ಆಹಾರ ಪದಾರ್ಥ ಪೂರೈಸುವ ಮೂಲಕ ಅವ್ಯವಹಾರ ನಡೆಸಿದೆ ಎಂದು ವಿವರಿಸಿದರು.

`ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ದಾಖಲೆಗಳು ಮತ್ತು ಕಂಪ್ಯೂಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಾಸಗಿ ಕಂಪೆನಿಯ ಕಂಪ್ಯೂಟರ್ಗಳನ್ನೂ ತನಿಖಾ ತಂಡ ವಶಕ್ಕೆ ಪಡೆದಿದೆ.

ರಾಜ್ಯದ ವಿವಿಧೆಡೆ ಮಹಿಳಾ ಸಂಘಗಳ ಉತ್ಪಾದನಾ ಕೇಂದ್ರಗಳು ಮತ್ತು ಅಂಗನವಾಡಿಗಳಿಂದ 3000ಕ್ಕೂ ಹೆಚ್ಚು ಪೌಷ್ಟಿಕ ಆಹಾರ ಪೊಟ್ಟಣಗಳನ್ನು ವಶಪಡಿಸಿಕೊಂಡಿದ್ದು, ಗುಣಮಟ್ಟ ಪರೀಕ್ಷೆಗಾಗಿ ಉನ್ನತಮಟ್ಟದ ಪ್ರಯೋಗಾಲಯಗಳಿಗೆ ಕಳುಹಿಸಲಾಗುವುದು~ ಎಂದರು.

ಭಾರಿ ಅವ್ಯವಹಾರ: `ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಐಸಿಡಿಎಸ್ ಯೋಜನೆಗೆ ವಾರ್ಷಿಕ 600 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. 2007ರಿಂದ ಆಹಾರ ಉತ್ಪಾದನೆ ತರಬೇತಿ ನೀಡುವ ಗುತ್ತಿಗೆಯನ್ನು ಕ್ರಿಸ್ಟಿ ಫ್ರೈಡ್ ಗ್ರ್ಯಾಮ್ಸಗೆ ನೀಡಲಾಗಿತ್ತು. ನಂತರದ ಅವಧಿಯಲ್ಲಿ ರೂ 3,000 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗಿದೆ. ಔಷಧಿ ಮತ್ತು ಆಟಿಕೆಗಳ ಸರಬರಾಜಿನ ಗುತ್ತಿಗೆಯನ್ನೂ ಈ ಕಂಪೆನಿ ಪಡೆದಿತ್ತು.

45 ಲಕ್ಷ ಫಲಾನುಭವಿಗಳನ್ನು ತಲುಪುವ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಹಣ ದುರ್ಬಳಕೆ ಆಗಿರುವ ಶಂಕೆ ಇದೆ~ ಎಂದು ರಾವ್ ಹೇಳಿದರು. ಸುಮಾರು 1,000 ಕೋಟಿಯಷ್ಟು ಮೊತ್ತದ ಅವ್ಯವಹಾರ ಆಗಿರಬಹುದೆಂದು ಶಂಕಿಸಲಾಗಿದೆ.

ಅಕ್ರಮ ಆಸ್ತಿಯೂ ಪತ್ತೆ: ಐಸಿಡಿಎಸ್ ಯೋಜನೆಯಲ್ಲಿನ ಅಕ್ರಮ ಪತ್ತೆಯ ಜೊತೆಗೆ ಮೂವರು ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಬಗ್ಗೆಯೂ ತನಿಖೆ ಆರಂಭವಾಗಿದೆ. ಶಮ್ಲಾ ಇಕ್ಬಾಲ್ ಬಳಿ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ.

ಹಲಸೂರಿನಲ್ಲಿ ರೂ 90 ಲಕ್ಷ ಖರೀದಿ ಮೌಲ್ಯದ ವಾಣಿಜ್ಯ ಸಂಕೀರ್ಣ, ಎಚ್ಎಎಲ್ 3ನೇ ಹಂತದಲ್ಲಿ ರೂ 60 ಲಕ್ಷ ಖರೀದಿ ಮೌಲ್ಯದ ಮನೆ, ಜೀವನ್ ಬಿಮಾನಗರದಲ್ಲಿ ಅಂಗಡಿ, ಅರ್ಕಾವತಿ ಬಡಾವಣೆಯಲ್ಲಿ ನಿವೇಶನ, 1.6 ಕೆ.ಜಿ. ಚಿನ್ನಾಭರಣ, ರೂ 1 ಲಕ್ಷ ಮೌಲ್ಯದ ಪ್ಲಾಟಿನಂ ಆಭರಣ, ರೂ 4 ಲಕ್ಷ ಮೌಲ್ಯದ ವಜ್ರಾಭರಣ ಮನೆಯಲ್ಲಿ ಪತ್ತೆಯಾಗಿದೆ.

ಬ್ಯಾಂಕ್ ಖಾತೆಗಳಲ್ಲಿ ರೂ 65 ಲಕ್ಷ ಠೇವಣಿ ಇದೆ. 9 ಬ್ಯಾಂಕ್ ಖಾತೆಗಳು ಮತ್ತು ಒಂದು ಲಾಕರ್ ಪರಿಶೀಲನೆ ಇನ್ನಷ್ಟೇ ನಡೆಯಬೇಕಿದೆ. ಕ್ರಿಸ್ಟಿ ಫ್ರೈಡ್ ಗ್ರ್ಯಾಮ್ ಕಂಪೆನಿಯೇ ಶಮ್ಲಾ ಅವರಿಗೆ ಇನ್ನೋವಾ ಕಾರು ನೀಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಖಾಸಗಿ ಕಂಪೆನಿಯ ವ್ಯಹವಾರಗಳಿಗೆ ಸಂಬಂಧಿಸಿದ ದಾಖಲೆಗಳೂ ಐಎಎಸ್ ಅಧಿಕಾರಿಯ ಮನೆಯಲ್ಲಿದ್ದವು ಎಂದು ಎಡಿಜಿಪಿ ತಿಳಿಸಿದರು. ಉಷಾ ಪಟ್ವಾರಿ ಮನೆಯಲ್ಲಿ ರೂ 4.90 ಲಕ್ಷ ನಗದು, 655 ಗ್ರಾಂ. ಚಿನ್ನ, 10 ಕೆ.ಜಿ. ಬೆಳ್ಳಿ, ಹೋಂಡಾ ಸಿಟಿ ಕಾರು ಪತ್ತೆಯಾಗಿದೆ. 30 ಬ್ಯಾಂಕ್ ಖಾತೆಗಳ ದಾಖಲೆಗಳು ಮತ್ತು ಒಂದು ಲಾಕರ್ ಕೀಲಿ ಲಭ್ಯವಾಗಿದ್ದು, ಪರಿಶೀಲನೆ ಬಾಕಿ ಇದೆ. ಮುನಿರಾಜು ನಿವಾಸದಲ್ಲಿ ರೂ 1.70 ಲಕ್ಷ ನಗದು, 379 ಗ್ರಾಂ ಚಿನ್ನ, 750 ಗ್ರಾಂ ಬೆಳ್ಳಿ, ರೂ 3 ಲಕ್ಷ ಬ್ಯಾಂಕ್ ಠೇವಣಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಮೈಸೂರಿನಲ್ಲಿ ನಿವೇಶನ, ಮನೆ ಮತ್ತು ಬೆಂಗಳೂರಿನ ವಿಜಯನಗರದಲ್ಲಿ ಒಂದು ನಿವೇಶನ, ಮಾಲೂರಿನಲ್ಲಿ 15 ಎಕರೆ ಭೂಮಿ ಹೊಂದಿರುವುದನ್ನು ಖಚಿತಪಡಿಸಬಲ್ಲ ದಾಖಲೆಗಳನ್ನೂ ತನಿಖಾ ತಂಡ ಪತ್ತೆಹಚ್ಚಿದೆ ಎಂದು ವಿವರಿಸಿದರು.

20 ತಂಡದಿಂದ ದಾಳಿ
ಐಸಿಡಿಎಸ್ ಯೋಜನೆಗೆ ಸಂಬಂಧಿಸಿದ ದಾಳಿಗೆ ಲೋಕಾಯುಕ್ತ ಪೊಲೀಸರ 20 ತಂಡ ರಚಿಸಲಾಗಿತ್ತು. ಡಿಐಜಿ ಅರುಣ್ ಚಕ್ರವರ್ತಿ ದಾಳಿಯ ನೇತೃತ್ವ ವಹಿಸಿದ್ದರು. ಬೆಂಗಳೂರು ನಗರದ ನಾಲ್ವರು ಎಸ್ಪಿಗಳು, ಮೂವರು ಡಿವೈಎಸ್ಪಿಗಳು, ಹತ್ತಕ್ಕೂ ಹೆಚ್ಚು ಇನ್ಸ್ಪೆಕ್ಟರ್ಗಳು ಈ ತಂಡದಲ್ಲಿದ್ದರು. ಮೈಸೂರು, ತುಮಕೂರು, ಬೀದರ್, ರಾಯಚೂರಿನಲ್ಲಿ ಹತ್ತಕ್ಕೂ ಹೆಚ್ಚು ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಬೆಂಗಳೂರು ನಗರ ಡಿವೈಎಸ್ಪಿ ಅಬ್ದುಲ್ ಅಹದ್ ಪ್ರಕರಣದ ತನಿಖಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸತ್ಯನಾರಾಯಣ ರಾವ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.