ಭಾನುವಾರ, ಜೂನ್ 20, 2021
25 °C

ಶುಕ್ರವಾರ, 16-3-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಯ ಮಂಡಲಿರಚಿಸಲು ಒತ್ತಾಯಬೆಂಗಳೂರು, ಮಾ. 15 - ಕೃಷ್ಣ ಮತ್ತು ಗೋದಾವರಿ ನೀರನ್ನು ಬಳಸುವ ಸಂಬಂಧದಲ್ಲಿ ಅಥವ ಆ ನೀರಿನ ಬಗ್ಗೆ ವಿವಿಧ ರಾಜ್ಯಗಳಿಗಿರುವ ಹಕ್ಕುಗಳ ಸಂಬಂಧದಲ್ಲಿ ತೀರ್ಪು ಕೊಡಲು ಗುಲ್ಹಾತಿ ಆಯೋಗಕ್ಕೆ ಅಧಿಕಾರವಿಲ್ಲದಿರುವುದರಿಂದ ಈ ಸಂಬಂಧದಲ್ಲಿ ಸಮರ್ಪಕವಾದ ನ್ಯಾಯ ನಿರ್ಣಯವಾಗುವಂತೆ ಮಾಡಲು ನ್ಯಾಯ ಮಂಡಳಿಯನ್ನು ರಚಿಸುವಂತೆ ಮೈಸೂರು ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಪ್ರಾರ್ಥಿಸಿದೆ ಎಂದು ರಾಜ್ಯಪಾಲ ಜಯಚಾಮರಾಜ ಒಡೆಯರ್‌ರವರು ಇಂದು ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ತಿಳಿಸಿದರು.ಅಧಿವೇಶನ ಆರಂಭ:ಸದಸ್ಯರಿಂದ ಪ್ರತಿಜ್ಞೆಬೆಂಗಳೂರು, ಮಾ. 15 - ರಾಜ್ಯದ ನೂತನ ವಿಧಾನ ಸಭೆಯ ಸದಸ್ಯರು ಇಂದು ಭಾರತದ ಸಂವಿಧಾನ ವಿಷಯದಲ್ಲಿ ಶ್ರದ್ಧೆಯಿಂದಲೂ, ನಿಷ್ಠೆಯಿಂದಲೂ ಕೂಡಿರುವುದಾಗಿಯೂ, ತಾವು ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುವುದಾಗಿಯೂ ಪ್ರಮಾಣ ವಚನವನ್ನು ಸ್ವೀಕರಿಸಿ ಇನ್ನೈದು ವರ್ಷಗಳ ಕಾಲ ರಾಜ್ಯದ ಆಡಳಿತವನ್ನು ನಿರ್ವಹಿಸಲು ಸಿದ್ಧವಾದರು.ಸಭೆಯ ಬಹು ಮಂದಿ ಸದಸ್ಯರು `ಭಗವಂತನ ಹೆಸರಿನ ಮೇಲೂ~ ಕೆಲವು ಸದಸ್ಯರು `ಸತ್ಯ ನಿಷ್ಠೆ~ ಹೆಸರಿನಲ್ಲಿ  ಪ್ರತಿಜ್ಞಾ ವಚನವನ್ನು ಸ್ವೀಕರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.