ಸೋಮವಾರ, ಮೇ 23, 2022
21 °C

ಶುಕ್ರವಾರ, 21-10-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಹರೂ ಅತಿಥಿಯಾಗಿ ಮೇಜರ್ ಗಗಾರಿನ್

ನವದೆಹಲಿ, ಅ. 20 - ಭಾರತಕ್ಕೆ ನಾಲ್ಕು ದಿನಗಳ ಭೇಟಿಯ ಮೇಲೆ ಅಕ್ಟೋಬರ್ 26 ರಂದು ಇಲ್ಲಿಗೆ ಆಗಮಿಸುವ ಪ್ರಥಮ ಗಗನಯಾತ್ರಿ ಮೇಜರ್ ಗಗಾರಿನ್ ಅವರು ರಾಜಧಾನಿಯಲ್ಲಿ ಪ್ರಧಾನಿ ನೆಹರೂ ಅತಿಥಿಗಳಾಗಿ ಅವರ ಗೃಹದಲ್ಲಿ ತಂಗುವರು.

ಅಕ್ಟೋಬರ್ 26 ರಂದು ಮೇಜರ್ ಗಗಾರಿನ್ ಅವರು ಆಗಮಿಸಿದ ಕೂಡಲೇ ಪತ್ರಕರ್ತರನ್ನು ಭೇಟಿ ಮಾಡುವರು. ಭಾರತ - ರಷ್ಯ ಸಾಂಸ್ಕೃತಿಕ ಸಂಘದವರನ್ನು ಉದ್ದೇಶಿಸಿ ಭಾಷಣ ಮಾಡುವರು. ನಂತರ ನೌಕಾದಳದ ಸತ್ಕಾರ ಸಮಾರಂಭದಲ್ಲಿ ಭಾಗವಹಿಸುವರು.

ಆಹಾರದ ಉತ್ಪತ್ತಿ ಹೆಚ್ಚಿದರೂ ಬೆಲೆ ಕಡಿಮೆಯಾಗದು

ಮುಂಬೈ, ಅ. 20- ರಾಷ್ಟ್ರದಲ್ಲಿ ಇನ್ನು ಕೆಲ ವರ್ಷದಲ್ಲಿ ಆಹಾರ ಧಾನ್ಯಗಳ ಉತ್ಪತ್ತಿ ದ್ವಿಗುಣಗೊಂಡರೂ ಆಹಾರ ಪದಾರ್ಥಗಳ ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆ ಇಲ್ಲವೆಂದು ಕೇಂದ್ರ ಆಹಾರ ಮತ್ತು ವ್ಯವಸಾಯ ಮಂತ್ರಿ ಶ್ರೀ ಎಸ್. ಕೆ. ಪಾಟೀಲ್ ಅವರು ಇಂದು ಇಲ್ಲಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.