ಚಿತ್ತಗಾಂಗ್: ಏಷ್ಯಾಕಪ್ ಗೆದ್ದುಕೊಂಡು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಶ್ರೀಲಂಕಾ ತಂಡ ದವರು ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಶನಿವಾರ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದ್ದಾರೆ.

ಚಿತ್ತಗಾಂಗ್ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆಲುವು ಪಡೆದು ಶುಭಾರಂಭ ಮಾಡುವುದು ದಿನೇಶ್ ಚಾಂಡಿಮಲ್ ಬಳಗದ ಗುರಿ. ಏಷ್ಯಾಕಪ್ನಲ್ಲಿ ನೀಡಿದ ಪ್ರದರ್ಶನವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿ ಲಂಕಾ ಆಟಗಾರರು ಇದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ಫಾಫ್ ಡು ಪ್ಲೆಸಿಸ್ ಮತ್ತು ಡೇಲ್ ಸ್ಟೇನ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇಬ್ಬರೂ ಸ್ನಾಯು ಸೆಳೆತದ ಸಮಸ್ಯೆಗೆ ಒಳಗಾಗಿದ್ದಾರೆ. ಇವರಿಬ್ಬರು ಆಡದೇ ಇದ್ದರೆ ದ. ಆಫ್ರಿಕಾ ತಂಡಕ್ಕೆ ಹಿನ್ನಡೆ ಉಂಟಾಗಲಿದೆ.

ಪ್ಲೆಸಿಸ್ ಆಡುವ ಸಾಧ್ಯತೆ ತೀರಾ ಕಡಿಮೆ. ಹಾಗಾದಲ್ಲಿ ಎಬಿ ಡಿವಿಲಿಯರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

ಇಂಗ್ಲೆಂಡ್- ನ್ಯೂಜಿಲೆಂಡ್ ಪೈಪೋಟಿ: ಶುಕ್ರವಾರ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಎದುರಾಗಲಿವೆ. ಕೋರಿ ಆ್ಯಂಡರ್ಸನ್ ಮತ್ತು ಬ್ರೆಂಡನ್ ಮೆಕ್ಲಮ್ ಅವರಂತಹ ಆಟಗಾರರನ್ನು ಒಳಗೊಂಡಿರುವ ಕಿವೀಸ್ ತಂಡ ಇಂಗ್ಲೆಂಡ್ಗೆ ಪ್ರಬಲ ಪೈಪೋಟಿ ನೀಡುವುದು ಖಚಿತ.

ಇಂದಿನ ಪಂದ್ಯಗಳು
ದಕ್ಷಿಣ ಆಫ್ರಿಕಾ- ಶ್ರೀಲಂಕಾ

ಆರಂಭ: ಮಧ್ಯಾಹ್ನ 3.00ಕ್ಕೆ
ಇಂಗ್ಲೆಂಡ್- ನ್ಯೂಜಿಲೆಂಡ್
ಆರಂಭ: ರಾತ್ರಿ 7.00ಕ್ಕೆ
ಸ್ಥಳ: ಚಿತ್ತಗಾಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.