ಶುಭಾ ದಿನ!

ಭಾನುವಾರ, ಮೇ 26, 2019
28 °C

ಶುಭಾ ದಿನ!

Published:
Updated:
ಶುಭಾ ದಿನ!

`ಏನು ಬೇಕಾದರೂ ಕೇಳಿ. ವಯಸ್ಸನ್ನು ಮಾತ್ರ ಕೇಳ್ಬೇಡಿ....~ನಟಿ ಶುಭಾ ಪೂಂಜಾ ನಗುವಿನ ಜೊತೆ ತುಸು ನಾಚಿಕೆ ಬೆರೆಸಿ ಹೇಳಿದರು.ಹುಟ್ಟುಹಬ್ಬದ ಕೇಕ್ ಕತ್ತರಿಸಿ ಸಿಹಿ ಹಂಚಿದ ಅವರನ್ನು ಎಷ್ಟುಬಾರಿ ಕೇಳಿದರೂ ವಯಸ್ಸಿನ ಗುಟ್ಟನ್ನು ಮಾತ್ರ ಬಿಟ್ಟುಕೊಡಲು ಒಪ್ಪಲಿಲ್ಲ. ಅವರ ಜನ್ಮದಿನವಿದ್ದದ್ದು ಭಾನುವಾರ. ಅದಕ್ಕೆ ಒಂದು ದಿನ ಮುನ್ನವೇ ಅವರು ಆ ಸಂಭ್ರಮವನ್ನು ಆಚರಿಸಿಕೊಳ್ಳಲು ಕಾರಣ ಅವರ ಹೊಸಚಿತ್ರ.ಅಂದಹಾಗೆ, ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ನಾಯಕನೂ ಸಿಕ್ಕಿಲ್ಲ. ಕಥೆ, ಚಿತ್ರಕಥೆ ಸಿದ್ಧವಾಗಿದೆ. ಶುಭಾ ಪೂಂಜಾ ಚಿತ್ರದ ನಾಯಕಿ. ಅವರ ಜನ್ಮದಿನದ ನೆಪದಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಕಿರುತೆರೆಯಲ್ಲಿ ಕೆಲಸ ಮಾಡಿರುವ ಶ್ರೀಧರ್ ಹೆಗ್ಡೆ ಚಿತ್ರದ ನಿರ್ದೇಶಕರು.ನಿರ್ಮಾಪಕ ಎಸ್. ವಿಶ್ವನಾಥ್ ಕೋಲಾರದಲ್ಲಿ ರೇಷ್ಮೆ ವ್ಯಾಪಾರ ನಡೆಸುತ್ತಿರುವವರು. ಶ್ರೀಧರ್ ಹೆಗ್ಡೆ ಸ್ನೇಹಿತರಾದ ಅವರಿಗೆ ಚಿತ್ರ ನಿರ್ಮಿಸುವ ಆಸೆ ಮೊದಲಿನಿಂದಲೂ ಇತ್ತಂತೆ. ಶ್ರೀಧರ್ ಹೇಳಿದ ಕಥೆ ಅವರಿಗೆ ತುಂಬಾ ಇಷ್ಟವಾಯಿತಂತೆ. ಆಗಸ್ಟ್ ಕೊನೆಯ ವಾರದಿಂದ ಎರಡು ಹಂತದಲ್ಲಿ ಚಿತ್ರೀಕರಣ ಪ್ರಾರಂಭಿಸುವುದು ನಿರ್ದೇಶಕ ಶ್ರೀಧರ್ ಹೆಗ್ಡೆ ಉದ್ದೇಶ.ರಿಯಲ್ ಎಸ್ಟೇಟ್‌ನ ಅವ್ಯವಹಾರದೊಂದಿಗೆ ತಳುಕು ಹಾಕಿಕೊಂಡಿರುವ ಪ್ರೇಮಕಥೆ ಯನ್ನು ಕೈಗೆತ್ತಿಕೊಂಡಿರುವುದಾಗಿ ಅವರು ಹೇಳಿದರು. ಸತ್ಯ ಘಟನೆಗಳನ್ನು ಆಧರಿಸಿ ಕಥೆ ಹೆಣೆದಿದ್ದಾರಂತೆ.

 

ರಿಯಲ್ ಎಸ್ಟೇಟ್ ಉದ್ದಿಮೆ ಪ್ರೀತಿಯನ್ನು ಹೇಗೆ ಸಾಯಿಸುತ್ತದೆ ಎಂಬುದನ್ನು ಮನಮುಟ್ಟುವಂತೆ ಚಿತ್ರಿಸುವ ಇರಾದೆ ಅವರದು.ಶುಭಾ ಪೂಂಜಾ ಪಾತ್ರದಲ್ಲಿ ಎರಡು ಶೇಡ್ ಇವೆಯಂತೆ. ಆರಂಭದಲ್ಲಿ ಮುಗ್ಧ ಹುಡುಗಿಯಾಗಿ ಕಾಣಿಸಿಕೊಳ್ಳುವ ಅವರು ದ್ವಿತೀಯಾರ್ಧದಲ್ಲಿ ಅದಕ್ಕೆ ತದ್ವಿರುದ್ಧವಾಗಿರುತ್ತಾರಂತೆ.ಟ್ರಾವೆಲ್ಸ್ ಕಂಪೆನಿಯೊಂದರ ಉದ್ಯೋಗಿಯಾಗಿ ಅವರು ನಟಿಸುತ್ತಿದ್ದಾರೆ. ಅವರಿಗೆ ಕಥೆ ವಿಶಿಷ್ಟವಾಗಿ ಕಂಡಿದೆ. ಮನೆಯಲ್ಲಿ ಎಂದಿಗೂ ಜನ್ಮದಿನ ಆಚರಿಸಿದ ಶುಭಾ ಪ್ರತಿವರ್ಷದಂತೆ ಈ ವರ್ಷವೂ ಜನ್ಮದಿನದಂದು ಸಣ್ಣಗಾಗುವ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ನಕ್ಕರು. ಚಿತ್ರದಲ್ಲಿ ಮೂರು ಹಾಡುಗಳು ಇರಲಿದ್ದು, ವಿ. ಮನೋಹರ್ ಸಂಗೀತ ನೀಡಲಿದ್ದಾರೆ.     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry