ಸೋಮವಾರ, ಜೂಲೈ 13, 2020
29 °C

ಶುಭ್ ಸೇವಾ ಕೇಂದ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನಾಭರಣ ತಯಾರಿಕಾ ಸಂಸ್ಥೆ ರಾಜೇಶ್ ಎಕ್ಸ್‌ಪೋರ್ಟ್ಸ್, ಚಿನ್ನಾಭರಣ  ವ್ಯಾಪಾರವನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲು ಬೆಂಗಳೂರಿನಲ್ಲಿ ‘ಶುಭ್ ಸರ್ವಿಸ್ ಸೆಂಟರ್’ (ಸೇವಾ ಕೇಂದ್ರ) ಆರಂಭಿಸಿದೆ.

ಚಿನ್ನಾಭರಣ ಖರೀದಿ- ಪರೀಕ್ಷೆ, ಹಳೆ ಚಿನ್ನದ ಆಭರಣಗಳ ಮಾರಾಟ, ವಿನಿಮಯ, ಆಭರಣಗಳ ದುರಸ್ತಿ ಹೀಗೆ ಚಿನ್ನದ ವಹಿವಾಟಿನ ಎಲ್ಲ ಸಂದರ್ಭಗಳಲ್ಲಿ ಅಸಮರ್ಪಕ ವಿಧಾನಗಳಿಗೆ ಮತ್ತು ಎಲ್ಲ ಬಗೆಯ ಅನಿಶ್ಚಿತತೆಗಳಿಗೆ ಈ ಸೇವಾ ಕೇಂದ್ರ ತೆರೆ ಎಳೆಯಲಿದೆ. ಗ್ರಾಹಕರ ಸಮ್ಮುಖದಲ್ಲಿಯೇ ಆಭರಣಗಳ ಮೌಲ್ಯಮಾಪನ, ಪರೀಕ್ಷೆ ನಡೆಸಲು ಈ ಸೇವಾ ಕೇಂದ್ರ ನೆರವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಜೇಶ್ ಮೆಹ್ತಾ, ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ಸಗಟು ವ್ಯಾಪಾರದಲ್ಲಿ ಬಳಕೆಯಾಗುವ ಚಿನ್ನದ ಶುದ್ಧತೆ ಪರಿಕಲ್ಪನೆಯನ್ನು ಈಗ  ಚಿಲ್ಲರೆ ವಹಿವಾಟಿಗೂ ಪರಿಚಯಿಸಲಾಗಿದೆ.  ಇದು ಅಂದಾಜು 90  ಲಕ್ಷ ವೆಚ್ಚದಲ್ಲಿ ಈ ಸೇವಾ ಕೇಂದ್ರದಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಅಳವಡಿಸಲಾಗಿದೆ.

‘ಇಂಡೆಕ್ಷನ್ ಫರ್ನಸ್’ನಲ್ಲಿ ಗ್ರಾಹಕರು ಸ್ವತಃ ತಾವೇ ತಮ್ಮ ಚಿನ್ನಾಭರಣ ಹಾಕಿ ಕರಗಿಸಬಹುದು. ಈ ಎಲ್ಲ ಪ್ರಕ್ರಿಯೆಯ ವಿಡಿಯೊ ದಾಖಲೆಯೂ ಇರುತ್ತದೆ. ಗ್ರಾಹಕರು ಬೇರೆಡೆ ಖರೀದಿಸಿದ ಆಭರಣಗಳ ಶುದ್ಧತೆಯನ್ನೂ ಇಲ್ಲಿ ಪರೀಕ್ಷಿಸಬಹುದು ಎಂದು ಮೆಹ್ತಾ ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.